ಶಿವಣ್ಣನ 'ಅಂದರ್ ಬಾಹರ್' ನೋಡಲು ರೆಡಿಯಾಗಿ
ಆರು ಮಂದಿ ನಿರ್ಮಾಪಕರ ಬಿಗ್ ಬಜೆಟ್ ಚಿತ್ರ ಅಂದರ್ ಬಾಹರ್. ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಹಾಗೂ ಪಾರ್ವತಿ ಮೆನನ್ ಅಭಿನಯದ ಈ ಚಿತ್ರ ಏಪ್ರಿಲ್ 5ಕ್ಕೆ ತೆರೆಗೆ ಅಪ್ಪಳಿಸುತ್ತಿದೆ. ಒಂದು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅಂದರ್ ಬಾಹರ್ ಬಿಡುಗಡೆಯಾಗುತ್ತಿದೆ.
ಚಿತ್ರಕ್ಕೆ ಸೆನ್ಸಾರ್ ಮಂಡಳಿ ಒಂದೇ ಒಂದು ಕತ್ತರಿ ಪ್ರಯೋಗವನ್ನೂ ಮಾಡದೆ ಯು/ಎ ಸರ್ಟಿಫಿಕೇಟ್ ನೀಡಿದೆ. ತಮ್ಮ ಪ್ರಯತ್ನಕ್ಕೆ ಸೆನ್ಸಾರ್ ಮಂಡಳಿ ಮೆಚ್ಚುಗೆಯನ್ನೂ ವ್ಯಕ್ತಪಡಿಸಿತು ಎಂದಿದ್ದಾರೆ ಚಿತ್ರದ ನಿರ್ದೇಶಕ ಫಣೀಶ್ ರಾಮನಾಥಪುರ. ಸೆನ್ಸಾರ್ ಮಂಡಳಿ ಬೆನ್ನುತಟ್ಟಿರುವುದು ತಮಗೆ ಸಂತಸ ತಂದಿದೆ ಎನ್ನುತ್ತಾರೆ ನಿರ್ದೇಶಕರು.
ಫಣೀಶ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚೊಚ್ಚಲ ಚಿತ್ರವಿದು. ಈ ಚಿತ್ರ ಟಿವಿ ರೈಟ್ಸ್ ಸುವರ್ಣ ವಾಹಿನಿ ಪಾಲಾಗಿದೆ. ಮೂಲಗಳ ಪ್ರಕಾರ ರು.2 ಕೋಟಿ ಸ್ಯಾಟಲೈಟ್ ರೈಟ್ಸ್ ಮಾರಾಟವಾಗಿದೆ ಎಂಬುದು ಅಂದರ್ ಕಾ ಬಾತ್.
ಈ ಚಿತ್ರಕ್ಕೆ ಒಟ್ಟು ಆರು ಮಂದಿ ನಿರ್ಮಾಪಕರು. ರಜನೀಶ್, ಪ್ರಸಾದ್ ರಾವ್, ಅಂಬರೀಶ್, ಅವಿನಾಶ್, ಜಗದೀಶ್ ಹಾಗೂ ಶ್ರೀನಿವಾಸ್. ಪಾತ್ರವರ್ಗದಲ್ಲಿ ಶಶಿಕುಮಾರ್, ಅರುಂಧತಿ ನಾಗ್ ಇದ್ದಾರೆ. ಜೈ ಹೋ ಖ್ಯಾತಿಯ ವಿಜಯ್ ಪ್ರಕಾಶ್ ಚಿತ್ರಕ್ಕೆ ಸಂಗೀತ ನೀಡಿದ್ದು ಶೇಖರ್ ಚಂದ್ರು ಛಾಯಾಗ್ರಹಣವಿದೆ. (ಏಜೆನ್ಸೀಸ್)
More from Filmibeat
English summary
Sandalwood King Shivrajkumar and Parvathi Menon lead Kannada film 'Andar Bahar' clears censor. The film has given a ‘U/A’ certificate with no cuts. The film is all set to release on the 5th of April with 100 plus theatres.
kannada movies ಶಿವರಾಜ್ ಕುಮಾರ್ ಹ್ಯಾಟ್ರಿಕ್ ಹೀರೋ ಪಾರ್ವತಿ ಮೆನನ್ parvathi menon shiva rajkumar hat trick hero


Click it and Unblock the Notifications












