»   » ರಾಜ್ ಹುಟ್ಟುಹಬ್ಬದ ದಿನ 'ಆರ್ಯನ್' ಆದ ಶಿವಣ್ಣ

ರಾಜ್ ಹುಟ್ಟುಹಬ್ಬದ ದಿನ 'ಆರ್ಯನ್' ಆದ ಶಿವಣ್ಣ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ವೃತ್ತಿಜೀವನದಲ್ಲಿ ಸಾಕಷ್ಟು ತರಹದ ಪಾತ್ರಗಳನ್ನು ಪೋಷಿಸಿದ್ದಾರೆ. ಆದರೆ ಕೋಚ್ ಪಾತ್ರವನ್ನು ಅವರು ಇದುವರೆಗೂ ಪೋಷಿಸಿರಲಿಲ್ಲ. ಈಗ ಆ ಆಸೆಯೂ 'ಆರ್ಯನ್' ಚಿತ್ರದ ಮೂಲಕ ಕೈಗೂಡುತ್ತಿದೆ.

ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನ ಆರ್ಯನ್ ಚಿತ್ರ ಸೆಟ್ಟೇರುತ್ತಿದೆ. ಚಿತ್ರವನ್ನು ನಿರ್ಮಿಸುತ್ತಿರುವವರು ಕಮಾರ್ (ಕುಮಾರ್ ಅಲ್ಲ). 'ಆರ್ಯನ್' ಚಿತ್ರ ಸೆಟ್ಟೇರುತ್ತದೋ ಇಲ್ಲವೋ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಚಿತ್ರ ಇಂದು ಸೆಟ್ಟೇರುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದೆ.

Shivrajkumar Aryan

ಇದೊಂದು ಕ್ರೀಡಾ ತರಬೇತುದಾರನೊಬ್ಬನ ಕಥೆ. ಆದರೆ ಯಾವ ಕ್ರೀಡಾ ತರಬೇತುದಾರ ಎಂಬ ಬಗ್ಗೆ ಇನ್ನೂ ನಿಖರ ಮಾಹಿತಿ ಇಲ್ಲ. ಚಿತ್ರತಂಡವೇನೋ ಅಥ್ಲೀಟ್ ಕೋಚ್ ಎನ್ನುತ್ತದೆ. ಆದರೆ ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಪೋಸ್ಟರ್ ಗಳು ಮಾತ್ರ ವಿಭಿನ್ನವಾಗಿದೆ.

ಈ ಪಾತ್ರಕ್ಕಾಗಿ ಶಿವಣ್ಣ ರಿಯಲ್ ಕೋಚ್ ಒಬ್ಬರ ಸಹಾಯಾವನ್ನೂ ಪಡೆದಿದ್ದಾರೆ. ಅವರಿಂದ ಸಾಕಷ್ಟು ತರಬೇತಿಯನ್ನು ಪಡೆದು ಪಾತ್ರಕ್ಕೆ ಜೀವತುಂಬಲಿದ್ದಾರೆ. ಶಾರುಖ್ ಖಾನ್ ಅಭಿನಯದ ಚಕ್ ದೇ ಇಂಡಿಯಾ ಚಿತ್ರವನ್ನು ಸಾಕಷ್ಟು ಬಾರಿ ನೋಡಿ ತಮ್ಮ ಪಾತ್ರಕ್ಕೆ ಇನ್ನೊಂದಷ್ಟು ಮೆರುಗು ತರಲಿದ್ದಾರೆ.

ಆದರೆ ಚಕ್ ದೇ ಇಂಡಿಯಾ ಚಿತ್ರದ ನೆರಳು ಸಹ ತಮ್ಮ ಆರ್ಯನ್ ಚಿತ್ರದಲ್ಲಿ ಇರುವುದಿಲ್ಲ ಎಂದಿದ್ದಾರೆ. ತಾವು ಸಾಕಷ್ಟು ಮಾಸ್ ಚಿತ್ರಗಳಲ್ಲಿ ಅಭಿನಯಿಸಿದ್ದೇವೆ. ಆರ್ಯನ್ ಚಿತ್ರದ ಪಾತ್ರಕ್ಕೆ ಕ್ಲಾಸ್ ಟಚ್ ಇದೆ ಎನ್ನುತ್ತಾರೆ ಸ್ವತಃ ಶಿವಣ್ಣ. ಡಿ.ರಾಜೇಂದ್ರ ಬಾಬು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದ ನಾಯಕಿ ಗೋಲ್ಡನ್ ಗರ್ಲ್ ರಮ್ಯಾ ಎಂಬುದು ಬಹುತೇಕ ಖಚಿತವಾಗಿದೆ.

ಅಪ್ಪಾಜಿ ಹುಟ್ಟುಹಬ್ಬದಂದು ಸೆಟ್ಟೇರಿದ ಸಿಂಹದ ಮರಿ, ಎಕೆ 47 ಹಾಗೂ ತವರಿಗೆ ಬಾ ತಂಗಿ ಚಿತ್ರಗಳು ಸೂಪರ್ ಹಿಟ್ ದಾಖಲಿಸಿದವು. ಈಗ ಆರ್ಯನ್ ಚಿತ್ರ ಸಹ ಅಪ್ಪಾಜಿ ಹುಟ್ಟುಹಬ್ಬದ ದಿನವೇ ಸೆಟ್ಟೇರುತ್ತಿದೆ. ಈ ಚಿತ್ರವೂ ಸೂಪರ್ ಹಿಟ್ ಆಗುತ್ತದೆ ಎಂಬ ವಿಶ್ವಾಸವನ್ನು ಶಿವಣ್ಣ ವ್ಯಕ್ತಪಡಿಸಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Hat trick Hero Shivarajkumar's lead Aryan goes on floors on April 24, on the birth anniversary of late Kannada star Dr Rajkumar. The film is being directed by D Rajendra Babu. It is produced by Kamar.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada