ಶ್ರೀರಂಗಪಟ್ಟಣದಲ್ಲಿ ಬಳುಕುವ ಬಳ್ಳಿ ಜತೆ ಶಿವಣ್ಣ 'ಬೆಳ್ಳಿ'

By Rajendra

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಡಿಫರೆಂಟ್ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರ 'ಬೆಳ್ಳಿ'. ಈ ಚಿತ್ರಕ್ಕೆ ಶಿವಣ್ಣ ಸಾಕಷ್ಟು ಒತ್ತು ನೀಡಿದ್ದು ಹಲವಾರು ಪ್ರಾಜೆಕ್ಟ್ ಗಳನ್ನು ಬಿಟ್ಟು ಮೊದಲ ಆದ್ಯತೆಯನ್ನು 'ಬೆಳ್ಳಿ'ಗೆ ನೀಡಿದ್ದಾರೆ.

ಸದ್ಯಕ್ಕೆ ಬೆಳ್ಳಿ ಚಿತ್ರದ ಚಿತ್ರೀಕರಣ ಶ್ರೀರಂಗಪಟ್ಟಣದಲ್ಲಿ ಬಿರುಸಿನಿಂದ ಸಾಗಿದೆ. ಆದಿಲೋಕೇಶ್, ಸುಧಾರಾಣಿ, ವೆಂಕಟೇಶ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಯಶಸ್ವಿನಿ ಸಿನಿ ಕ್ರಿಯೆಷನ್ಸ್ ಲಾಂಛನದಲ್ಲಿ ಹೆಚ್.ಆರ್.ರಾಜೇಶ್ ಅವರು ನಿರ್ಮಿಸುತ್ತಿರುವ ಚಿತ್ರ ಇದು. ['ಬೆಳ್ಳಿ' ಲಾಂಗುಗಳ ಸಿಂಹಾಸನ ಏರಿದ ಸೆಂಚುರಿ ಸ್ಟಾರ್]

ಮಹೇಶ್ (ಮುಸ್ಸಂಜೆ ಮಾತು) ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿ.ಶ್ರೀಧರ್ ಸಂಗೀತ ನೀಡುತ್ತಿದ್ದಾರೆ. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ಗಣೇಶ್ ಸಾಹಸ ನಿರ್ದೇಶನ, ಎ.ಹರ್ಷ, ಆದಿಲ್ ಶೇಖ್, ಮುರಳಿ ನೃತ್ಯ ನಿರ್ದೇಶನ ಹಾಗೂ ಸೀನು ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ಸೆಂಚುರಿ ಸ್ಟಾರ್ ಶಿವರಾಜಕುಮಾರ್, ಕೃತಿ ಖರಬಂದ, ವಿನೋದ್ ಪ್ರಭಾಕರ್, ದೀಪಕ್, ಒರಟ ಪ್ರಶಾಂತ್, ವೆಂಕಟೇಶ್, ಆದಿಲೋಕೇಶ್, ಪದ್ಮಾವಾಸಂತಿ, ಬಿ.ವಿ.ರಾಧಾ, ಶ್ರೀನಿವಾಸಮೂರ್ತಿ, ರಮೇಶ್ ಭಟ್, ಸುಧಾರಾಣಿ, ನಾಗರಾಜ್, ಹರೀಶ್ ರೈ, ಲೋಕಿ, ನೀನಾಸಂ ಮಂಜು, ಭಾಸ್ಕರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಅರವಿಂದ್ ರಾವ್ ಕಾರ್ಯಕಾರಿ ನಿರ್ಮಾಪಕರಾಗಿರುವ 'ಬೆಳ್ಳಿ' ಚಿತ್ರಕ್ಕೆ ಕೆ.ಜೆ.ರಾಜಶೇಖರ್ ಸಹ ನಿರ್ಮಾಪಕರಾಗಿರುವ ಬೆಳ್ಳಿ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಡಬ್ಬಲ್ ಶೇಡ್ ನಲ್ಲಿ ಕಾಣಿಸಿಕೊಳ್ತಿದ್ದು ಶಿವಣ್ಣ ಬೆಳ್ಳಿಯಾದ್ರೆ ನಾನು ಬಂಗಾರ ಅಂತಾರೆ ಕೃತಿ ಖರಬಂದ. ಗೋಲ್ಡ್ ಆಯ್ತು ಸಿಲ್ವರ್ ಆಯ್ತು ಡೈಮಂಡ್ ಯಾರು ಅಂದ್ರೆ ಡೈರೆಕ್ಟ್ರೇ ನನ್ ಪ್ರಕಾರ ಡೈಮಂಡ್ ಅಂದಿದ್ದಾರೆ. (ಒನ್ಇಂಡಿಯಾ ಕನ್ನಡ)

More from Filmibeat

English summary
Century Star Shivrajkumar upcoming movie Belli shooting progressed in Srirangapatna. The movie directed by Mussanje Mahesh. Kriti Kharbanda is the female lead of the movie. It also includes struggling actors Vinod Prabhakar, Deepak, Prashanth, and Venkatesh Prasad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X