ಶಿವಣ್ಣ 'ಲಕ್ಷ್ಮಿ' ಚಿತ್ರದ ಹಲವು ಸ್ವಾರಸ್ಯಕರ ಸಂಗತಿಗಳು
ಈ ಬಾರಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ತಮ್ಮ 'ಲಕ್ಷ್ಮಿ' ಚಿತ್ರದ ಮೂಲಕ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಲು ಮುಂದಾಗಿದ್ದಾರೆ. ಚಿತ್ರದ ಪೋಸ್ಟರ್ ಗಳನ್ನು ನೋಡಿದರೆ ಒಂದಕ್ಕಿಂತ ಒಂದು ಸೂಪರ್ ಆಗಿವೆ. ಚಿತ್ರ ಕೂಡ ಅಷ್ಟೇ ಸೊಗಸಾಗಿ ಮೂಡಿಬಂದಿದೆ ಎಂಬ ವಿಶ್ವಾಸದಲ್ಲಿದೆ 'ಲಕ್ಷ್ಮಿ' ಚಿತ್ರತಂಡ.
ಈ ಚಿತ್ರದಲ್ಲಿ ಅವರು ಎಷ್ಟರ ಮಟ್ಟಿಗೆ ಅನುರಕ್ತರಾಗಿದ್ದಾರೆ ಎಂಬುದನ್ನು ಚಿತ್ರದ ಪೋಸ್ಟರ್ ಗಳನ್ನು ನೋಡಿದರೆ ಅರ್ಥವಾಗುತ್ತದೆ. ಅಭಿನಯದಲ್ಲಿ ಶಿವಣ್ಣನಿಗೆ ಸರಿಸಾಟಿಯಾಗಿ ಪ್ರಿಯಾಮಣಿ ಸಹ ನಿಂತಿದ್ದಾರೆ. ತಮ್ಮ ದೇಹದ ತೂಕವನ್ನು ಇಳಿಸಿಕೊಂಡು ಶಿವಣ್ಣನ ತರಹ ಫಿಟ್ ಅಂಡ್ ಪರ್ಫೆಕ್ಟ್ ಆಗಿ ಪ್ರಿಯಾಮಣಿ ಕಾಣಿಸುತ್ತಿದ್ದಾರೆ.

ಲಕ್ಷ್ಮಿ ಪಟಾಕಿಯಂತ ಸದ್ದು ಮಾಡಲಿದೆ ಚಿತ್ರ
ತಮ್ಮ ಚಿತ್ರ ಲಕ್ಷ್ಮಿ ಪಟಾಕಿ ತರಹ ಸದ್ದು ಮಾಡುತ್ತದೆ. ಯಾವುದೇ ಕಾರಣಕ್ಕೂ ಠುಸ್ ಆಗಲ್ಲ. ನಾನು ಸಂಗೀತ ನೀಡಿದ ಚಿತ್ರಗಳು ಇದುವರೆಗೂ ಬಾಕ್ಸ್ ಆಫೀಸಲ್ಲಿ ಸೋತ ಉದಾಹರಣೆ ಇಲ್ಲ. ಲಕ್ಷ್ಮಿ ಚಿತ್ರವೂ ಅಷ್ಟೇ ಗೆದ್ದೇ ಗೆಲ್ಲುತ್ತದೆ ಎಂದಿದ್ದಾರೆ ಸಂಗೀತ ನಿರ್ದೇಶಕ ಗುರು ಕಿರಣ್.

ಇನ್ನೂರು ಚಿತ್ರಮಂದಿರಗಳಲ್ಲಿ ಲಕ್ಷ್ಮಿ
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ವರ್ಷದ ಮೊದಲ ಚಿತ್ರವಾಗಿ 'ಲಕ್ಷ್ಮಿ' ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದೆ. 200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇಷ್ಟೊಂದು ಸಂಖ್ಯೆಯ ಚಿತ್ರಮಂದಿರಗಳಲ್ಲಿ ಯಾವ ಕನ್ನಡ ಚಿತ್ರವೂ ಬಿಡುಗಡೆಯಾಗಿಲ್ಲ ಎನ್ನುತ್ತವೆ ಮೂಲಗಳು.

ಚಿತ್ರದ ಮತ್ತೊಂದು ಆಕರ್ಷಣೆ ಗ್ರಾಫಿಕ್ಸ್
ಲಕ್ಷ್ಮಿ ಚಿತ್ರದ ಇನ್ನೊಂದು ವಿಶೇಷ ಎಂದರೆ ಗ್ರಾಫಿಕ್ಸ್. ಚಿತ್ರದಲ್ಲಿ ಒಟ್ಟು 30 ರಿಂದ 40 ನಿಮಿಷಗಳಷ್ಟು ನಿಬಿಡವಾಗಿದೆ. ಹಾಂಕಾಂಗ್ ನ ಜೂಜು ಅಡ್ಡೆಗಳಲ್ಲಿ ಚಿತ್ರದ ಕೆಲವು ಸನ್ನಿವೇಶಗಳನ್ನು ಚಿತ್ರೀಕರಿಸಿರುವುದು ಇನ್ನೊಂದು ವಿಶೇಷ. ಭರಣಿ ಮಿನರಲ್ಸ್ ನಿರ್ಮಿಸುತ್ತಿರುವ ಭಾರಿ ಬಜೆಟ್ ಚಿತ್ರ ಇದಾಗಿದೆ.

ಎರಡು ವರ್ಷಗಳಷ್ಟು ಸಮಯ ವ್ಯಯಿಸಿದ ಚಿತ್ರ
ಇನ್ನು ಚಿತ್ರದ ತಾಂತ್ರಿಕ ಅಂಶಗಳಿಗೂ ಭಾರಿ ಒತ್ತು ನೀಡಲಾಗಿದೆ. ಸರಿಸುಮಾರು ಎರಡು ವರ್ಷಗಳಷ್ಟು ಸುದೀರ್ಘ ಸಮಯವನ್ನು ಲಕ್ಷ್ಮಿ ಚಿತ್ರಕ್ಕಾಗಿ ವ್ಯಯಿಸಲಾಗಿದೆ. ಇದು ಚಿತ್ರದ ಇನ್ನೊಂದು ಪ್ರಮುಖ ಅಂಶ. ಡಿಸೆಂಬರ್ 31, 2010 ಫ್ರೀಡಂ ಪಾರ್ಕ್ ನಲ್ಲಿ ಲಕ್ಷ್ಮಿ ಚಿತ್ರಕ್ಕೆ ಚಾಲನೆ ನೀಡಲಾದ ಚಿತ್ರ ಇದೇ ಜ.18ರಂದು ತೆರೆಗೆ ಅಪ್ಪಳಿಸುತ್ತಿದೆ.

ಕೆಲವು ಸಂಭಾಷಣೆಗಳು ಮ್ಯೂಟ್ ಆಗಲಿವೆ
ಚಿತ್ರದಲ್ಲಿನ ಕೆಲವು ಸಂಭಾಷಣೆಗಳನ್ನು ಮ್ಯೂಟ್ ಮಾಡುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ. ಉಳಿದಂತೆ ಎಲ್ಲವೂ ಓಕೆ ಎಂದು ಬೆನ್ನುತಟ್ಟಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ರಾಘವ ಲೋಕಿ.

ಸಿಬಿಐ ಲಕ್ಷ್ಮಿ ನಾರಾಯಣನಾಗಿ ಶಿವಣ್ಣ
ಇಷ್ಟಕ್ಕೂ 'ಲಕ್ಷ್ಮಿ' ಎಂದರೆ ಯಾರು? ಸಿಬಿಐ ಅಧಿಕಾರಿ ಲಕ್ಷ್ಮಿ ನಾರಾಯಣ ಪಾತ್ರದಲ್ಲಿ ಶಿವಣ್ಣ ಕಾಣಿಸಲಿದ್ದಾರೆ. ದೇಶವನ್ನು ಲೂಟಿ ಹೊಡೆಯುತ್ತಿರುವವರನ್ನು ಮಟ್ಟ ಹಾಕುತ್ತಾನೆ. ಇದರ ಜೊತೆಗೆ ಸೆಂಟಿಮೆಂಟ್, ಎಮೋಷನ್, ಥ್ರಿಲ್, ಸಸ್ಪೆನ್ಸ್ ಅಂಶಗಳು ಚಿತ್ರದಲ್ಲಿವೆಯಂತೆ.

ಚಿತ್ರದ ಬಗ್ಗೆ ಪ್ರಿಯಾಮಣಿ ಏನಂತಾರೆ?
ನೂರು ಚಿತ್ರಗಳಲ್ಲಿ ಅಭಿನಯಿಸಿರುವ ಶಿವಣ್ಣ ಜೊತೆ ಅಭಿನಯಿಸುತ್ತಿರುವುವಕ್ಕೆ ತುಂಬ ಸಂತೋಷವಾಗಿದೆ. ಚಿತ್ರದಲ್ಲಿ ನನ್ನ ಹೆಸರು ಪ್ರಿಯಾ. ಚಿತ್ರದಲ್ಲಿ ಕೆಲವು ತಿರುವುಗಳೊಂದಿಗೆ ಸಾಗುವ ಮೋಹಕ ಲವ್ ಸ್ಟೋರಿ ಇದೆ ಎನ್ನುತ್ತಾರೆ ಪ್ರಿಯಾಮಣಿ.

ಇನ್ನೊಂದು ಆಕರ್ಷಣೆ ಶಾಲಿನಿ ನಾಯ್ಡು
ಈ ಚಿತ್ರದ ಇನ್ನೊಂದು ಆಕರ್ಷಣೆ ಎಂದರೆ ಐಟಂ ಸಾಂಗ್. "ಪುಸ್ಸಿ ಕ್ಯಾಟ್ ಪುಸ್ಸಿ ಕ್ಯಾಟ್ ಕಳೆದೋಯ್ತು ನನ್ನ ಪುಸ್ಸಿ ಕ್ಯಾಟ್..." ಎಂಬ ಹಾಡಿಗೆ ಶಾಲಿನಿ ನಾಯ್ಡು ಸೊಂಟ ಬಳುಕಿಸಿದ್ದಾರೆ. ಗುರುಕಿರಣ್ ಅವರ ಸಂಗೀತ ಕವಿರಾಜ್ ಅವರ ಸಾಹಿತ್ಯದ ಜುಗಲ್ ಬಂಧಿಗೆ ತಕ್ಕಂತೆ ಶಾಲಿನಿ ತಮ್ಮ ಮೈಮಾಟ ಕುಣಿಸಿದ್ದಾರೆ. ಚಿತ್ರ ಇದೇ ಜ.18ಕ್ಕೆ ತೆರೆಗೆ ಬರುತ್ತಿದೆ.


Click it and Unblock the Notifications











