ಶಿವಣ್ಣ, ರಮ್ಯಾ ಜೋಡಿ ಆರ್ಯನ್ ಚಿತ್ರೀಕರಣ ಬಿರುಸು

By Rajendra

Shivrajkumar in Aryan
ಇದೇ ಮೊಟ್ಟ ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕ್ರೀಡಾ ತರಬೇತುದಾರನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಚಿತ್ರದಲ್ಲಿ ಅವರದು ಅಥ್ಲೀಟ್ ಕೋಚ್ ಪಾತ್ರ. ಪ್ರಸ್ತುತ ಈ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ನಡೆಯುತ್ತಿದೆ.

ಶಿವರಾಜ್ ಕುಮಾರ್ ಗೆ ಜೋಡಿ ಗೋಲ್ಡನ್ ಗರ್ಲ್ ರಮ್ಯಾ. ಪಾತ್ರವರ್ಗದಲ್ಲಿ ಶರತ್ ಬಾಬು, ಬುಲೆಟ್ ಪ್ರಕಾಶ್, ವಿನಯಾ ಪ್ರಕಾಶ್, ಅರ್ಚನಾ ಗುಪ್ತಾ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಅಭಿನಯಿಸಿದ್ದಾರೆ. ಡಿ.ರಾಜೇಂದ್ರ ಬಾಬು ಆಕ್ಷನ್ ಕಟ್ ನಲ್ಲಿ ಚಿತ್ರ ಮೂಡಿಬರುತ್ತಿದೆ.

ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನ ಸೆಟ್ಟೇರಿರುವ ಈ ಚಿತ್ರದ ಬಗ್ಗೆ ಶಿವಣ್ಣ ಅವರಿಗೆ ಅಪಾರ ವಿಶ್ವಾಸವಿದೆ. ಏಕೆಂದರೆ ಅಣ್ಣಾವ್ರ ಹುಟ್ಟುಹಬ್ಬದಂದು ಸೆಟ್ಟೇರಿದ ಚಿತ್ರಗಳು ಇದುವರೆಗೂ ಸೋತ ಉದಾಹಣೆ ಇಲ್ಲ ಎಂಬುದು ಅವರ ನಂಬಿಕೆ.

ಚಂದ್ರಶೇಖರ್ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಜನಾರ್ದನ್ ಮಹರ್ಷಿ ಸಂಭಾಷಣೆ ಬರೆದಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನದ 'ಆರ್ಯನ್' ಚಿತ್ರದ ಹಾಡುಗಳನ್ನು ಜಯಂತ ಕಾಯ್ಕಿಣಿ, ಕವಿರಾಜ್, ಯೋಗರಾಜಭಟ್, ನಾಗೇಂದ್ರಪ್ರಸಾದ್ ಬರೆದಿದ್ದಾರೆ. (ಒನ್ಇಂಡಿಯಾ ಕನ್ನಡ)

More from Filmibeat

English summary
Hat Trick Hero Shivarajkumar and Golden Girl Ramya starrer Aryan directed by D.Rajendra Babu brisk progress in Bangalore. Jassie Gift is the music director and Chandrashekar is the cinematographer of the film. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X