ಶಿವಣ್ಣ-ಕ್ರೇಜಿಸ್ಟಾರ್ ಮತ್ತೆ ಒಂದಾಗೋ ಸಿನಿಮಾ ಬರ್ತಿದೆ

By ಜೀವನರಸಿಕ

ಸ್ಯಾಂಡಲ್ ವುಡ್ ಕ್ರೇಜಿಸ್ಟಾರ್ ರವಿಮಾಮ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಬ್ಬರೂ ಉತ್ತಮ ಗೆಳೆಯರು. ಈ ಹಾಫ್ ಸೆಂಚುರಿ ಜೋಡಿ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳೋ ಸಮಯ ಮತ್ತೆ ಬಂದಿದೆ. ಇವತ್ತು (ಜ.28) ನಡೆಯೋ ಶೂಟಿಂಗ್ ನಲ್ಲಿ ಈ ಇಬ್ಬರೂ ದಿಗ್ಗಜರು ಒಂದಾಗಿ ಕಾಣಿಸಿಕೊಳ್ತಿದ್ದಾರೆ.

ಎ.ಹರ್ಷ ನಿರ್ದೇಶನದ ವಜ್ರಕಾಯ ಸಿನಿಮಾದ ಮೂಲಕ ಈ ಇಬ್ಬರೂ ಕಣ್ಮಣಿಗಳನ್ನ ಒಂದಾಗಿ ನೋಡುವ ಅವಕಾಶ ಸಿಗಲಿದೆ. ಇವತ್ತು ವಿದ್ಯಾಪೀಠ ಸರ್ಕಲ್ ಬಳಿ ಇರೋ ಶಂಕರ್ ನಾಗ್ ಕ್ರೀಡಾಂಗಣದಲ್ಲಿ ನಡೆಯಲಿರೋ ಶೂಟಿಂಗ್ ನಲ್ಲಿ ರವಿಮಾಮನ ಜೊತೆ ಶಿವಣ್ಣನ ಸ್ಟೆಪ್ ಹಾಕಲಿದ್ದಾರೆ. [ಪುನೀತ್ ಜತೆ ಶಿವರಾಜ್ ಕುಮಾರ್ ಚಿತ್ರಕ್ಕೆ ಗ್ರೀನ್ ಸಿಗ್ನಲ್ ]

Shivrajkumar-Ravichandran team up again

ಇಷ್ಟು ಮಾತ್ರ ಅಲ್ಲ ಈ ಒಂದು ಹಾಡಲ್ಲಿ ಸ್ಯಾಂಡಲ್ ವುಡ್ ನ ಹಲವು ಸ್ಟಾರ್ ಗಳು ಕಾಣಿಸಿಕೊಳ್ತಿದ್ದು ಒಂದೇ ಹಾಡಿನಲ್ಲಿ ಮಲ್ಟಿಸ್ಟಾರ್ ಗಳು ಹೆಜ್ಜೆ ಹಾಕಲಿದ್ದು ನಿರ್ದೇಶಕ ಹರ್ಷ ಕೊರಿಯೋಗ್ರಫಿ ಅಂದ್ರೆ ಅದನ್ನ ಎಂಜಾಯ್ ಮಾಡೋಕೆ ರೆಡಿಯಾಗಿ.

ಈ ಹಿಂದೆ 2002ರಲ್ಲಿ ಅಂದರೆ ಹನ್ನೆರಡು ವರ್ಷಗಳ ಹಿಂದೆ ಶಿವಣ್ಣ ಮತ್ತು ಕ್ರೇಜಿಸ್ಟಾರ್ ಒಂದಾಗಿ ಕೋದಂಡರಾಮ ಚಿತ್ರದಲ್ಲಿ ಅಭಿನಯಿಸಿದ್ದರು. ಅದಾದ ಬಳಿಕ ಇಬ್ಬರ ಕಾಂಬಿನೇಷನ್ ನಲ್ಲಿ ಚಿತ್ರ ಬರಲೇ ಇಲ್ಲ. ಇದೀಗ ಶಿವಣ್ಣ ಮತ್ತು ರವಿಮಾಮ ಒಂದಾಗುತ್ತಿರುವುದು ಅಭಿಮಾನಿಗಳ ಪಾಲಿಗೆ ಖುಷಿಯ ಸಂಗತಿ.

Shivrajkumar-Ravichandran team up again

ರವಿಚಂದ್ರನ್ ಅವರು ಆಕ್ಷನ್ ಕಟ್ ಹೇಳಿದ್ದ ಕೋದಂಡರಾಮ ಚಿತ್ರ ಮಲಯಾಳಂನ 'ಥೀನ್ ಕಾಸಿಪಟ್ಟಣಂ' ಎಂಬ ಚಿತ್ರದ ರೀಮೇಕ್ ಆಗಿತ್ತು. ತೆಲುಗು, ತಮಿಳು ಹಾಗೂ ಬಂಗಾಳಿ ಭಾಷೆಗಳಿಗೂ ರೀಮೇಕ್ ಆಗಿದೆ.

ತೆಲುಗು, ತಮಿಳು ಭಾಷೆಯ ಚಿತ್ರಗಳಿಗೆ ಹೋಲಿಸಿದರೆ ಕೋದಂಡರಾಮ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಗಳಿಸಲಿಲ್ಲ ಎಂಬುದು ಮರೆಯಲಾಗದ ಸತ್ಯ. ಚಿತ್ರದಲ್ಲಿ ರವಿಚಂದ್ರನ್ ಅವರು ಕೋದಂಡನಾಗಿ ಶಿವಣ್ಣ ಅವರು ರಾಮನಾಗಿ ಅಭಿಮಾನಿಗಳನ್ನು ರಂಜಿಸಿದ್ದರು.

More from Filmibeat

English summary
After a 12 years long gap Sandalwood film industry bears witness to Hat Trick Hero Shivrajkumar and Crazy Star Ravichandran all set teams up once more. The duo together played in 'Kodanda Rama', which was released in 2002. Today, 28th January, both are acting together in A Harsha directed 'Vajrakaya' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X