ಲಾಂಗ್ ಹಿಡಿತ್ತಿದ್ದ ಶಿವಣ್ಣನ ಕೈಗೆ ಮಚ್ಚು: 'ವೇದ' ಚಿತ್ರದಲ್ಲಿ ಆಯುಧಗಳ ಕಾರುಬಾರು!

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ಎ. ಹರ್ಷ ಕ್ರೇಜಿ ಕಾಂಬಿನೇಷನ್‌ನ 4ನೇ ಸಿನಿಮಾ 'ವೇದ'. ಸದ್ದಿಲ್ಲದೇ ಶೂಟಿಂಗ್ ಮುಗಿಸಿರೋ ಚಿತ್ರತಂಡ ವಿಭಿನ್ನ ಟೀಸರ್ ರಿಲೀಸ್ ಮಾಡಿ ಸಿನಿಮಾ ಪ್ರಮೋಷನ್‌ಗೆ ಚಾಲನೆ ಕೊಡುತ್ತಿದೆ. ಬರೀ ಪೋಸ್ಟರ್‌ಗಳಿಂದಲೇ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಸದ್ದು ಮಾಡ್ತಿದೆ.

'ಭಜರಂಗಿ', 'ವಜ್ರಕಾಯ', 'ಭಜರಂಗಿ- 2' ನಂತರ ಎ. ಹರ್ಷ ಹಾಗೂ ಶಿವಣ್ಣ ಒಟ್ಟಿಗೆ ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಇದು ಸೆಂಚುರಿ ಸ್ಟಾರ್ 125ನೇ ಸಿನಿಮಾ ಎನ್ನುವುದು ಮತ್ತೊಂದು ವಿಶೇಷ. ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಗೀತಾ ಶಿವರಾಜ್‌ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ವಿಶೇಷ. ಪಾವನಾ ಗೌಡ, ಗಾನವಿ ಲಕ್ಷ್ಮಣ್, ಉಮಾಶ್ರೀ, ವೀಣಾ ಪೊನ್ನಪ್ಪ, ಚೆಲುವರಾಜ್ ಹಾಗೂ ಶ್ವೇತಾ ಚೆಂಗಪ್ಪ ಚಿತ್ರದ ಮುಖ್ಯ ತಾರಾಗಣದಲ್ಲಿದ್ದಾರೆ. ಭಿನ್ನ ವಿಭಿನ್ನ ಶೇಡ್‌ಗಳಿರೋ ಪಾತ್ರದಲ್ಲಿ ಶಿವಣ್ಣ ಮಿಂಚಿದ್ದಾರೆ. ಈ ಬಾರಿ ಪೌರಾಣಿಕ, ಫ್ಯಾಂಟಸಿ ಬಿಟ್ಟು ಬಹಳ ವಿಭಿನ್ನವಾದ ಕಥೆಯನ್ನು ಹೇಳಲು ಹರ್ಷ ಅಂಡ್ ಟೀಂ ಮುಂದಾಗಿದೆ. ಡಿಸೆಂಬರ್ 23ಕ್ಕೆ ಸಿನಿಮಾ ಬಿಡುಗಡೆಯಾಗಿ ಈಗಾಗಲೇ ಚಿತ್ರತಂಡ ಘೋಷಿಸಿದೆ.

60ರ ದಶಕದಲ್ಲಿ ಕರ್ನಾಟಕದ ಹಳ್ಳಿ ಒಂದರಲ್ಲಿ ನಡೆಯುವ ಕಥೆಯನ್ನು 'ವೇದ' ಚಿತ್ರದಲ್ಲಿ ಹೇಳಲಾಗುತ್ತಿದೆ. ಒಂದು ಯೂನಿವರ್ಸಲ್ ಕಥೆಯನ್ನು ಈ ಸಿನಿಮಾ ಮೂಲಕ ಹೇಳುವು ಪ್ರಯತ್ನ ನಡೀತಿದೆ. ಶಿವಣ್ಣ ಕಥೆ ಬಗ್ಗೆ ಸಿಕ್ಕಾಪಟ್ಟೆ ಕಾನ್ಫಿಡೆಂಟ್ ಆಗಿ ಇದ್ದಾರೆ.

ನಂ.11ಕ್ಕೆ ವೆಪೆನ್ಸ್ ಆಫ್ 'ವೇದ' ಟೀಸರ್

ನಂ.11ಕ್ಕೆ ವೆಪೆನ್ಸ್ ಆಫ್ 'ವೇದ' ಟೀಸರ್

ಚಿತ್ರದಲ್ಲಿ ಶಿವಣ್ಣನ ಕೈಗೆ ನಿರ್ದೇಶಕ ಹರ್ಷ ಮಚ್ಚು ಕೊಟ್ಟಿದ್ದಾರೆ. ಇದೇ ರೀತಿ ಚಿತ್ರದ ಕಲಾವಿದರು ಬೇರೆ ಬೇರೆ ಆಯುಧಗಳನ್ನು ಹಿಡಿದು ಅಬ್ಬರಿಸಲಿದ್ದಾರೆ. ಚಿತ್ರದಲ್ಲಿ ಯಾವೆಲ್ಲಾ ಆಯುಧಗಳು ಇರುತ್ತೆ ಎನ್ನುವುದನ್ನು ಸ್ಪೆಷಲ್ ಟೀಸರ್ ಮೂಲಕ ಪರಿಚಯಿಸಲು ಚಿತ್ರತಂಡ ನಿರ್ಧರಿಸಿದೆ. ನವೆಂಬರ್ 11ಕ್ಕೆ ವೆಪೆನ್ಸ್ ಆಫ್ 'ವೇದ' ಟೀಸರ್ ಬಿಡುಗಡೆಯಾಗಲಿದೆ. ಆ ಮೂಲಕ ದೊಡ್ಡಮಟ್ಟದಲ್ಲಿ ಸಿನಿಮಾ ಪ್ರಮೋಷನ್ ಶುರುವಾಗಲಿದೆ.

ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್

ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್

ಎ. ಹರ್ಷ ಹಾಗೂ ಶಿವಣ್ಣನ ಕಾಂಬಿನೇಷನ್‌ ಅಂದಾಕ್ಷಣ ಪ್ರೇಕ್ಷಕರಲ್ಲಿ ಕುತೂಹಲ ಮೂಡುತ್ತೆ. ಇನ್ನು ಇವರಿಬ್ಬರು ಸಿನಿಮಾಗಳಲ್ಲಿ ಶಿವಣ್ಣ ಡಬಲ್ ರೋಲ್‌ನಲ್ಲಿ ಕಾಣಿಸಿಕೊಂಡಿರುವುದನ್ನು ಕೂಡ ನೋಡಬಹುದು. 'ವೇದ' ಚಿತ್ರದ ಪೋಸ್ಟರ್‌ಗಳಲ್ಲೂ ಶಿವಣ್ಣ ಬೇರೆ ಬೇರೆ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಂತ ಇಲ್ಲಿ ಅವರು ಡಬಲ್ ರೋಲ್ ಮಾಡುತ್ತಿಲ್ಲ. ಎರಡು ಶೇಡ್ ಇರುವ ಪಾತ್ರದಲ್ಲಿ ಮಿಂಚಿದ್ದಾರೆ. ಅಭಿಮಾನಿಗಳು ಬಯಸುವ ಎಲ್ಲಾ ಕಮರ್ಷಿಯಲ್ ಎಲಿಮೆಂಟ್ಸ್ ಬೆರಸಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ 'ವೇದ' ಎನ್ನಲಾಗ್ತಿದೆ.

ಹಳ್ಳಿಯೊಂದರ ರಕ್ತಸಿಕ್ತ ಅಧ್ಯಾಯ

ಹಳ್ಳಿಯೊಂದರ ರಕ್ತಸಿಕ್ತ ಅಧ್ಯಾಯ

ದಶಕಗಳ ಹಿಂದಿನ ಕಥೆಯನ್ನು 'ವೇದ' ಚಿತ್ರದಲ್ಲಿ ಹೇಳಲಾಗುತ್ತಿದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ಏನೆಲ್ಲಾ ನಡೆಯುತ್ತದೆ ಎನ್ನುವುದೇ ಚಿತ್ರದ ಕಥಾವಸ್ತು. 60 ವರ್ಷಗಳ ಹಿಂದಿನ ಕಥೆ ಆಗಿರುವುದರಿಂದ ಅಂದಿನ ಕಾಲಘಟ್ಟವನ್ನು ಕಟ್ಟಿಕೊಡಲು ಚಿತ್ರತಂಡ ಬಹಳ ಶ್ರಮಿಸಿದೆ. ಅದ್ಧೂರಿ ಸೆಟ್‌ಗಳನ್ನು ನಿರ್ಮಿಸಿ ಚಿತ್ರೀಕರಣ ನಡೆಸಲಾಗಿದೆ. ಗೀತಾ ಪಿಕ್ಚರ್ಸ್ ಜೊತೆಗೆ ಜೀ ಸಂಸ್ಥೆ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದೆ.

ಕ್ರಿಸ್‌ಮಸ್ ಸಂಭ್ರಮದಲ್ಲಿ 'ವೇದ' ತೆರೆಗೆ

ಕ್ರಿಸ್‌ಮಸ್ ಸಂಭ್ರಮದಲ್ಲಿ 'ವೇದ' ತೆರೆಗೆ

ಅರ್ಜುನ್ ಜನ್ಯಾ ಸಂಗೀತ, ಸ್ವಾಮಿ ಗೌಡ ಛಾಯಾಗ್ರಹಣ ಚಿತ್ರಕ್ಕಿದೆ. ಅಪ್ಪು ಅಗಲಿಕೆಯ ಹಿನ್ನೆಲೆಯಲ್ಲಿ ಶಿವಣ್ಣ- ಹರ್ಷ ಜೋಡಿಯಾ 'ಭಜರಂಗಿ- 2' ಚಿತ್ರಕ್ಕೆ ಹಿನ್ನಡೆಯಾಗಿತ್ತು. ಆ ಸಿನಿಮಾ ರಿಲೀಸ್‌ಗೂ ಮೊದಲೇ ಇಬ್ಬರು ಸೇರಿ 'ವೇದ' ಸಿನಿಮಾ ಮಾಡಲು ತೀರ್ಮಾನಿಸಿದ್ದರು. ಈಗಾಗಲೇ ಚಿತ್ರೀಕರಣ ಮುಗಿದು ಪ್ರೀ ಪ್ರೊಡಕ್ಷನ್ ವರ್ಕ್ ಶುರುವಾಗಿದೆ. ಕ್ರಿಸ್‌ಮಸ್ ಹಬ್ಬದ ಸಂಭ್ರಮದಲ್ಲಿ ಡಿಸೆಂಬರ್ 23ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ.

More from Filmibeat

English summary
Shivrajkumar Starrer Vedha Special Teaser releasing on 11th Nov. this film is Shivanna’s fourth collaboration with A Harsha, after Bhajarangi, Vajrakaya and Bhajarangi 2. Vedha is a period film set in the 60s. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X