For Quick Alerts
  ALLOW NOTIFICATIONS  
  For Daily Alerts

  ಪುನೀತ್ ರನ್ನು 'ಕಿಂಗ್ ಆಫ್ ಸ್ಯಾಂಡಲ್ ವುಡ್' ಎಂದ ಶೋಭಾ ಕರಂದ್ಲಾಜೆ

  By Naveen
  |
  ಪುನೀತ್ ಕಿಂಗ್ ಆಫ್ ಸ್ಯಾಂಡಲ್‌ವುಡ್ ಅಂದವರು ಯಾರು..!? | Filmibeat Kannada

  ಕನ್ನಡದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರನ್ನು ಇಂದು ಉಡುಪಿ ಹಾಗೂ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಭೇಟಿ ಮಾಡಿದ್ದಾರೆ. ಕರ್ನಾಟಕ ರಾಜ್ಯದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಹ ಆಗಿರುವ ಅವರು ಪುನೀತ್ ಜೊತೆಗೆ ಮೋದಿ ಸರ್ಕಾರದ ಸಾಧನೆಯ ಬಗ್ಗೆ ಚರ್ಚೆ ನಡೆಸಿದ್ದಾರೆ.

  Sampark For Samarthan ಅಭಿಯಾನದ ವಿಚಾರವಾಗಿ ಶೋಭಾ ಕರಂದ್ಲಾಜೆ ಅವರು ಪುನೀತ್ ರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ನೇತೃತ್ವದ ಸರ್ಕಾರ ಏನೇನು ಕೆಲಸ ಮಾಡಿದೆ ಎಂಬ ಸಾಧನೆಯ ಪುಸ್ತಕವನ್ನು ಅವರಿಗೆ ನೀಡಿದ್ದಾರೆ.

  ಕೊಡಗಿಗೆ ನೆರವಾಗಿ ಎಂದು ಮನವಿ ಮಾಡಿದ ಶಿವರಾಜ್ ಕುಮಾರ್ ಕೊಡಗಿಗೆ ನೆರವಾಗಿ ಎಂದು ಮನವಿ ಮಾಡಿದ ಶಿವರಾಜ್ ಕುಮಾರ್

  ಈ ವಿಷಯವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು ''ಅಪ್ಪನಂತೆ ಮಗ...' Sampark For Samarthan ವಿಷಯಕ್ಕಾಗಿ ಇಂದು ಕಿಂಗ್ ಆಫ್ ಸ್ಯಾಂಡಲ್ ವುಡ್ ಹಾಗೂ ಒಬ್ಬ ಒಳ್ಳೆಯ ವ್ಯಕ್ತಿ ಪುನೀತ್ ರಾಜ್ ಕುಮಾರ್ ರನ್ನು ಭೇಟಿ ಮಾಡಿದೆ. ಅವರ ಜೊತೆಗೆ ಪ್ರಧಾನಿ ಮೋದಿ ಅವರ ಸಾಧನೆಗಳ ಬಗ್ಗೆ ಚರ್ಚೆ ಮಾಡಿದೆ.'' ಎಂದು ತಿಳಿಸಿದ್ದಾರೆ.

  ಅಂದಹಾಗೆ, ಈ ಹಿಂದೆ ಇದೇ ವಿಚಾರವಾಗಿ ಶಾಸಕ ಶ್ರೀರಾಮಲು ನಟ ಸುದೀಪ್ ರನ್ನು ಭೇಟಿ ಮಾಡಿದ್ದರು. ತಮ್ಮ ಕೇಂದ್ರ ಸರ್ಕಾರದ ಸಾಧನೆಯನ್ನು ಸುದೀಪ್ ಮೂಲಕ ಜನರಿಗೆ ತಲುಪಿಸಿದ್ದರು.

  English summary
  Udupi and Chikmagalur district MP Shobha Karandlaje meets Kannada actor Puneeth Rajkumar as part of the Sampark For Samarthan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X