»   » ಅಣ್ಣಾವ್ರ ಮಗ ಪುನೀತ್ ಗೆ ಕನ್ನಡ ಓದೋಕೆ ಬರಲ್ವಾ?

ಅಣ್ಣಾವ್ರ ಮಗ ಪುನೀತ್ ಗೆ ಕನ್ನಡ ಓದೋಕೆ ಬರಲ್ವಾ?

Posted By:
Subscribe to Filmibeat Kannada

ಕನ್ನಡಿಗರ ಕಲಾರತ್ನ, ಕನ್ನಡಿಗರ ಆರಾಧ್ಯ ದೈವ, ನಟ ಸಾರ್ವಭೌಮ ಡಾ.ರಾಜ್ ಕುಮಾರ್. ಕನ್ನಡ ನಾಡು-ನುಡಿ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ರಾಜಣ್ಣ, ಬದುಕಿನುದ್ದಕ್ಕೂ ಕನ್ನಡ ಚಿತ್ರರಂಗದ ಏಳಿಗೆಗಾಗಿ ಶ್ರಮಿಸಿದವರು.

ಇಂತಿಪ್ಪ ಡಾ.ರಾಜ್ ಕುಮಾರ್ ಅವರ ಮುತ್ತಿನಂಥ ಮಗ ಪುನೀತ್ ರಾಜ್ ಕುಮಾರ್ ಅವರಿಗೆ ಕನ್ನಡ ಓದೋಕೆ ಬರಲ್ವಂತೆ.! ಕನ್ನಡ ಅಕ್ಷರಗಳನ್ನ ಕಂಡು ಅಪ್ಪು ತಬ್ಬಿಬ್ಬಾದರಂತೆ.!

ಏನು..? ಅಣ್ಣಾವ್ರ ಮಗ ಪುನೀತ್ ಗೆ ಕನ್ನಡ ಓದೋಕೆ ಬರಲ್ವಾ ಅಂತ ಶಾಕ್ ಆದ್ರಾ.? ಇಂತಹ ಶಾಕಿಂಗ್ ನ್ಯೂಸ್ ನ ಖ್ಯಾತ ಆಂಗ್ಲ ದಿನಪತ್ರಿಕೆಯೊಂದು ನೀಡಿದೆ. ಪುನೀತ್ ರಾಜ್ ಕುಮಾರ್ ಸಂಬಂಧಿ ವಿಜಯ್ ರಾಘವೇಂದ್ರ ಅವರ ಮನೆಯಲ್ಲಿ ನಡೆದ ಒಂದು ಘಟನೆಯನ್ನ ಉಲ್ಲೇಖಿಸುತ್ತಾ ಅಪ್ಪುಗೆ ಕನ್ನಡ ಓದುವುದಕ್ಕೆ ಬರುವುದಿಲ್ಲ ಅಂತ ವರದಿ ಮಾಡಿದೆ.

ಆಂಗ್ಲ ಪತ್ರಿಕೆಯಲ್ಲಿ ಅಪ್ಪು ಬಗ್ಗೆ ಬ್ರೇಕಿಂಗ್ ನ್ಯೂಸ್!

ಡಾ.ರಾಜ್ ಕುಮಾರ್ ಪುತ್ರ ಪುನೀತ್ ರಾಜ್ ಕುಮಾರ್ ಅವರಿಗೆ ಕನ್ನಡ ಓದೋಕೆ ಬರಲ್ಲ ಅಂದ್ರೆ ನಂಬೋಕ್ಕಾಗುತ್ತಾ? ಯಾರು ನಂಬ್ತಾರೋ, ಬಿಡ್ತಾರೋ. ನಿನ್ನೆ ಪ್ರಕಟವಾದ ಈ ವರದಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ.

ವರದಿಯಲ್ಲಿ ಏನಿದೆ?

''ಕೆಲ ದಿನಗಳ ಹಿಂದೆ ವಿಜಯ್ ರಾಘವೇಂದ್ರ ಅವರ ಮನೆಯಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಅದ್ರಲ್ಲಿ ಎಲ್ಲರೂ ಕನ್ನಡ ಹಾಡುಗಳನ್ನ ಹಾಡಬೇಕಿತ್ತು. ಪುನೀತ್ ರಾಜ್ ಕುಮಾರ್ ಅವರ ಸರದಿ ಬಂದಾಗ ಚೀಟಿಯಲ್ಲಿ ಬರೆದ ಕನ್ನಡ ಸಾಲುಗಳು ಅವರಿಗೆ ಅರ್ಥವಾಗ್ಲಿಲ್ಲ. ''ನನಗೆ ಕನ್ನಡ ಓದೋಕೆ ಬರಲ್ಲ'' ಅಂದುಬಿಟ್ಟರು. ಅಲ್ಲಿ ನೆರೆದಿದ್ದವರು ಶಾಕ್ ಆಗಿ ''ಏನು? ನೀವು ರಾಜ್ ಕುಮಾರ್ ಅವರ ಮಗ ಅಲ್ಲವೇ'' ಅಂತ ಕೇಳಿದಾಗ, ''ನಾನು ಓದಿದ್ದೆಲ್ಲಾ ಚೆನ್ನೈನಲ್ಲಿ'' ಅಂತ್ಹೇಳಿ
ಪುನೀತ್ ತಮ್ಮನ್ನ ತಾವು ಸಮರ್ಥಿಸಿಕೊಂಡರು ಅಂತ ಆಂಗ್ಲ ದಿನಪತ್ರಿಕೆಯೊಂದು ವರದಿ ಮಾಡಿದೆ.

ತಮಿಳು ಅಥವಾ ಇಂಗ್ಲೀಷ್ ನಲ್ಲಿ ಕನ್ನಡ ಬರೆಯಬೇಕೆ?

ವಿಜಯ್ ರಾಘವೇಂದ್ರ ಅವರ ಮನೆಯಲ್ಲಿ ನಡೆದ ಘಟನೆಯೊಂದಿಗೆ, ''ಮುಂದಿನ ಬಾರಿ ಇಂತಹ ಪಾರ್ಟಿಗಳಿಗೆ ಇವರನ್ನು ಆಹ್ವಾನಿಸಿದಾಗ ತಮಿಳು ಅಥವಾ ಇಂಗ್ಲೀಷ್ ನಲ್ಲಿ ಕನ್ನಡ ಸಾಹಿತ್ಯ ಬರೆದುಕೊಡಬೇಕು'' ಅಂತ ವ್ಯಂಗ್ಯ ಕೂಡ ಮಾಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆ!

ದಿನಪತ್ರಿಕೆಯಲ್ಲಿ ಈ ವರದಿ ಪ್ರಕಟವಾಗ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಪತ್ರಿಕೆ ವಿರುದ್ಧ ಪುನೀತ್ ರಾಜ್ ಕುಮಾರ್ ಅವರ ಫ್ಯಾನ್ಸ್ ರೊಚ್ಚಿಗೆದ್ದಿದ್ದಾರೆ. ಇಂತಹ ಗಾಸಿಪ್ ಸುದ್ದಿಗಳನ್ನ ಅಲ್ಲಗೆಳೆದಿದ್ದಾರೆ.

ಕನ್ನಡದ ಕೋಟ್ಯಾಧಿಪತಿ ಮಾಡಿದ್ದು ಇದೇ ಪವರ್ ಸ್ಟಾರ್!

ಪುನೀತ್ ರಾಜ್ ಕುಮಾರ್ ಅವರಿಗೆ ಕನ್ನಡ ಬರಲ್ಲ ಅಂತಾಗಿದ್ರೆ ಸೂಪರ್ ಹಿಟ್ ಕಾರ್ಯಕ್ರಮ 'ಕನ್ನಡದ ಕೋಟ್ಯಾಧಿಪತಿ' ನಡೆಸಿಕೊಡುವುದಕ್ಕೆ ಸಾಧ್ಯವೇ ಆಗುತ್ತಿರಲ್ಲಿಲ್ಲ ಅನ್ನೋದು ಅಪ್ಪು ಅಭಿಮಾನಿಗಳ ಅಭಿಪ್ರಾಯ. 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ ಎಲ್ಲಾ ಪ್ರಶ್ನೆಗಳನ್ನ ಪುನೀತ್ ಕನ್ನಡದಲ್ಲೇ ಓದಿ ಕೇಳಬೇಕಿತ್ತು.

ಬಹುಬೇಡಿಕೆಯ ಗಾಯಕ ಕೂಡ ಹೌದು.!

ಇನ್ನೂ ಪುನೀತ್ ರಾಜ್ ಕುಮಾರ್ ಬರೀ ನಟ ಮಾತ್ರ ಅಲ್ಲ. ಉತ್ತಮ ಮತ್ತು ಗಾಂಧಿನಗರದ ಬಹು ಬೇಡಿಕೆಯ ಗಾಯಕ ಕೂಡ ಹೌದು. ಚಿತ್ರಗಳಲ್ಲಿ ಹಾಡುವಾಗ ಪುನೀತ್ ಕನ್ನಡದಲ್ಲಿ ಬರೆದಿರುವ ಸಾಹಿತ್ಯದಲ್ಲೇ ಹಾಡಿದ್ದಾರೆ ಅಂತ ಅಪ್ಪು ಫ್ಯಾನ್ಸ್ ಕೆಲ ಮೇಕಿಂಗ್ ವಿಡಿಯೋಗಳನ್ನ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

English summary
According to the report of a leading Daily, Kannada Actor Puneeth Rajkumar doesn't know to read Kannada. By giving an instance which happened in a party at Kannada Actor Vijay Raghavendra's house, the News Paper has published an article on Puneeth Rajkumar, son of Late Dr.Rajkumar, that he can't read Kannada.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada