Upendra Hijab Look: ಹಿಜಾಬ್ ಧರಿಸಿದ ನಟ ಉಪೇಂದ್ರ: ಫೋಟೊ ವೈರಲ್!

ನಟ ಉಪೇಂದ್ರ ಇತ್ತೀಚೆಗೆ ಹೆಚ್ಚಾಗಿ ಸುದ್ದಿ ಆಗಿದ್ದು ಅವರ ಹೊಸ ಸಿನಿಮಾದಿಂದ. ಉಪ್ಪಿ ಹಲವು ದಿನಗಳ ಬಳಿಕ ನಿರ್ದೇಶನಕ್ಕೆ ಇಳಿದಿದ್ದು, ಸಾಕಷ್ಟು ಕುತೂಹಲ ಮೂಡಿದೆ. ಈ ಚಿತ್ರದ ಪೋಸ್ಟರ್ ಮತ್ತು ಟೈಟಲ್ ಕಂಡು ಜನ ಅಚ್ಚರಿಗೊಂಡರು. ಚಿತ್ರದ ಮೊದಲ ಪೋಸ್ಟರ್ ಮೂಲಕವೇ ಉಪ್ಪಿ ಎಲ್ಲರ ತಲೆಗೆ ಹುಳ ಬಿಟ್ಟಿದ್ದಾರೆ.

Recommended Video

ಹಿಜಬ್ ಉಪ್ಪಿ, ಇಂತ ಆಲೋಚನೆ ಬಂದಿದ್ದಾದ್ರೂ ಯಾಕೆ

ಉಪ್ಪಿ ನಿರ್ದೇಶನದ ಈ ಚಿತ್ರದ ಟೈಟಲ್ ಏನು ಎಂದು ಅರ್ಥ ಆಗದೆ, ಜನ ತಲೆ ಕೆಡಿಸಿಕೊಂಡಿದ್ದಾರೆ. ಇನ್ನು ಈ ಚಿತ್ರದ ಮೂಲಕ ಉಪ್ಪಿ ಏನು ಹೇಳುದ್ದಾರೆ ಎನ್ನುವ ಬಗ್ಗೆಯೂ ಸಾಕಷ್ಟು ಕುತೂಹಲ ಮೂಡಿವೆ. ಆದರೆ ಉಪೇಂದ್ರ ಮಾತ್ರ ಆ ಯಾವ ಪ್ರಶ್ನೆಗಳಿಗೂ ಉತ್ತರ ನೀಡಿಲ್ಲ. ಬದಲಿಗೆ ಸಿನಿಮಾ ಟೈಟಲ್ ಪೋಸ್ಟರ್ ಅರ್ಥ ನಿಮ್ಮ ನಿಮ್ಮ ಕಲ್ಪನೆಗೆ ಬಿಟ್ಟಿದ್ದು ಎಂದು ಹೇಳಿ ಮತ್ತಷ್ಟು ಗೊಂದಲಕ್ಕೀಡು ಮಾಡಿದ್ದಾರೆ.

ಈ ಬೆನ್ನಲ್ಲೇ ಉಪೇಂದ್ರ ಈಗ ಮತ್ತೊಮ್ಮೆ ಹೊಸ ಅಚ್ಚರಿಗೆ ಕಾರಣರಾಗಿದ್ದಾರೆ. ಉಪೇಂದ್ರ ಮತ್ತೊಂದು ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಕೂಡ ಅಚ್ಚರಿಗೆ ಕಾರಣ ಆಗಿದೆ. ಯಾಕೆಂದರೆ ಉಪೇಂದ್ರ ಯಾವುದೇ ಸಿನಿಮಾ ಪೋಸ್ಟರ್‌ನಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿಲ್ಲ. ಬದಲಿಗೆ ತಮ್ಮ ಸಾಮಾಜಿಕ ಜಾಲತಾಣದ ಡಿಪಿಯಲ್ಲಿ ಹಿಜಾಬ್ ತೊಟ್ಟು ಪ್ರತ್ಯಕ್ಷ ಆಗಿದ್ದಾರೆ.

ಹಿಜಾಬ್ ಧರಿಸಿದ ಉಪೇಂದ್ರ!

ಹಿಜಾಬ್ ಧರಿಸಿದ ಉಪೇಂದ್ರ!

ಉಪೇಂದ್ರ ಟ್ವಿಟ್ಟರ್‌ನಲ್ಲಿ ಒಂದು ಫೋಟೊ ಹಾಕಿಕೊಂಡಿದ್ದಾರೆ. ಈ ಫೊಟೋದಲ್ಲಿ ಉಪೇಂದ್ರ ಹುಡುಗಿಯ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಮುಖ ಮುಚ್ಚಿಕೊಂಡು ಹಿಜಾನ್ ಕೂಡ ಧರಿಸಿದ್ದಾರೆ. ತಲೆಗೆ ಮತ್ತು ಮುಖಕ್ಕೆ ಉಪ್ಪಿ ಬಟ್ಟೆ ಕಟ್ಟಿಕೊಂಡುವ ಕಾರಣ ಇದು ಹಿಜಾಬ್ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ. ಉಪ್ಪಿ ಸದ್ಯ ತಮ್ಮ ಹೊಸ ಅವತಾರದ ಮೂಲಕ ಸದ್ದು ಮಾಡುತ್ತಿದ್ದು, ಈ ಫೋಟೊ ನೋಡಿದರೆ ಇದು ಉಪ್ಪಿನೇ ಎಂದು ಸುಲಭವಾಗಿ ಗುರುತಿಸಬಹುದು.

ಟ್ರೋಲ್ ಆಯ್ತು ಉಪೇಂದ್ರ ಹೊಸ ಡಿಪಿ!

ಉಪೇಂದ್ರ ಮಹಿಳೆಯ ವೇಷದಲ್ಲಿ ಕಾಣಿಸಿಕೊಂಡ ಕಾರಣ ಈ ಫೋಟೊ ವೈರಲ್ ಆಗುತ್ತಿದೆ. ಕಪ್ಪು ಬಣ್ಣದ ಟಾಪ್ ಧರಿಸಿ, ತಲೆ ಮತ್ತು ಮುಖಕ್ಕೆ ಕಪ್ಪು ಬಣ್ಣದ ಬಟ್ಟೆ ಕಟ್ಟಿಕೊಂಡಿದ್ದಾರೆ. ಈ ಹೊಸ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಟ್ರೋಲ್ ಕೂಡ ಆಗಿದೆ. ಹಲವು ಮಂದಿ ಉಪ್ಪಿಗೆ ಏನಾಗಿದೆ? ಅವರ ಅಕೌಂಟ್ ಹ್ಯಾಕ್ ಆಗಿದೆಯಾ? ಎಂದೆಲ್ಲಾ ಪ್ರಶ್ನೆ ಮಾಡುತ್ತಿದ್ದಾರೆ. ಜೊತೆಗೆ ಅಲ್ಲು ಅರ್ಜುನ್, ಮಹೇಶ್ ಬಾಬು ಫೋಟೊಗಳನ್ನೂ ಮಹಿಳೆಯರ ರೂಪಕ್ಕೆ ಎಡಿಟ್ ಮಾಡಿ ಕಮೆಂಟ್ ಮಾಡುತ್ತಿದ್ದಾರೆ. ಜೊತೆಗೆ ಹಿಜಾಬ್ ವಿವಾದದ ನಡುವೆ ಹೀಗ್ಯಾಕೆ ಕಾಣಿಸಿಕೊಂಡಿದ್ದೀರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ

ಇದು ಉಪ್ಪಿಯ ಪ್ರಮೋಷನ್ ಗಿಮಿಕ್ ಅಷ್ಟೇ!

ಉಪೇಂದ್ರ ಈ ಹೊಸ ಅವತಾರಕ್ಕೆ ಕಾರಣ ಅವರ ಮುಂದಿನ ಸಿನಿಮಾ. ಹೌದು 'ಹೋಮ್ ಮಿನಿಸ್ಟರ್' ಚಿತ್ರದಲ್ಲಿ ಉಪೇಂದ್ರ ಮಹಿಳೆಯರ ಜವಾಬ್ದಾರಿಯನ್ನು ತಾವು ಹೊತ್ತುಕೊಂಡಿದ್ದಾರೆ. ಏಪ್ರಿಲ್ 1ರಂದು ಈ ಸಿನಿಮಾ ರಿಲೀಸ್ ಆಗುತ್ತದೆ. ಈ ಕಾರಣಕ್ಕೆ ಆ ಚಿತ್ರದ ಒಂದು ವೇಷವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಡಿಪಿಯಾಗಿ ಹಾಕಿಕೊಂಡಿದ್ದಾರೆ.

ಟ್ರೈಲರ್‌ನಲ್ಲಿ ಹೊಸ ಅವತಾರ!

ಟ್ರೈಲರ್‌ನಲ್ಲಿ ಹೊಸ ಅವತಾರ!

ಉಪೇಂದ್ರ ಈ ವೇಷ 'ಹೋಮ್ ಮಿನಿಸ್ಟರ್' ಚಿತ್ರದ ಟ್ರೈಲರ್‌ನಲ್ಲಿ ರಿವೀಲ್ ಆಗಿದೆ. ಮೇಕಪ್ ಹಾಕಿಕೊಂಡು ಇದೇ ವೇಷದಲ್ಲಿ ಉಪೇಂದ್ರ ಫೈಟ್ ಕೂಡ ಮಾಡುತ್ತಾರೆ. ಇದು ಈ ಫೋಟೊದ ಅಸಲಿ ಕಥೆ. ಇದನ್ನು ಬಿಟ್ಟರೆ ನಟ ಉಪೇಂದ್ರ ತಮ್ಮ ನಿರ್ದೇಶನದ ಚಿತ್ರದಲ್ಲಿ ಬ್ಯುಸಿ ಆಗಲಿದ್ದಾರೆ. ಜೂನ್‌ನಿಂದ ಹೊಸ ಚಿತ್ರದ ಶೂಟಿಂಗ್ ಆರಂಭ ಆಗಲಿದೆ.

More from Filmibeat

English summary
Shocking Kannada Actor Upendra Wearing Hijab Photo Viral On Social Media
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X