»   » ಇದೀಗ ಬಂದ ಸುದ್ದಿ: ರಜನಿಕಾಂತ್ ಅಭಿಮಾನಿಗಳಿಗೆ ಶಾಕ್!

ಇದೀಗ ಬಂದ ಸುದ್ದಿ: ರಜನಿಕಾಂತ್ ಅಭಿಮಾನಿಗಳಿಗೆ ಶಾಕ್!

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರಕ್ಕೆ ಯಾವುದೋ ಪೀಡೆ ತಗುಲಿಕೊಂಡಿದೆ. ಕೋಚಾಡಿಯನ್ ಚಿತ್ರ ಬಿಡುಗಡೆ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಬಂದಿದೆ. ಸದ್ಯ ಮಂಡ್ಯ, ಮದ್ದೂರಿನಲ್ಲಿ ರಜನಿಕಾಂತ್ ಅವರು ಲಿಂಗಾ ಚಿತ್ರದ ಶೂಟಿಂಗ್ ನಿರತರಾಗಿದ್ದಾರೆ. ಇತ್ತ ಅವರ ಕೋಚಾಡಿಯನ್ ಚಿತ್ರ ಬಿಡುಗಡೆ ಕೊನೆ ಕ್ಷಣದ ಬದಲಾವಣೆಗೆ ಒಳಪಟ್ಟಿದೆ.ಆದರೆ, ಇದರಲ್ಲಿ ಯಾವುದೇ ರಾಜಕೀಯ ಪಕ್ಷಗಳ ಕೈವಾಡ ಕಂಡು ಬಂದಿಲ್ಲ.

ಈ ಹಿಂದೆ ಕಮಲ್ ಹಾಸನ್ ಅವರ ವಿಶ್ವರೂಪಂ, ವಿಜಯ್ ಅವರ ತಲೈವಾ ಚಿತ್ರಗಳಿಗೆ ರಾಜಕೀಯ ಪಕ್ಷಗಳ ಕಿರಿಕಿರಿ ಉಂಟಾಗಿ ಚಿತ್ರ ಬಿಡುಗಡೆ ಮುಂದೂಡಲ್ಪಟ್ಟಿತ್ತು. ರಜನಿ ಚಿತ್ರಕ್ಕೆ ಈ ರೀತಿ ತೊಂದರೆ ಏನೂ ಇಲ್ಲ. ಆದರೂ ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟಿದೆ.

ಚಿತ್ರಕ್ಕೆ ಸದ್ಯಕ್ಕೆ ಬಿಡುಗಡೆ ಭಾಗ್ಯವಿಲ್ಲ?: ಕೊಚಾಡಿಯನ್ ಚಿತ್ರಕ್ಕೆ ಆರ್ಥಿಕ ಸಮಸ್ಯೆ ಎದುರಾಗಿದೆ. ರಜನಿಕಾಂತ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಈ ಚಿತ್ರದ ನಿರ್ಮಾಪಕ ಹಾಗೂ ವಿತರಕರ ನಡುವೆ ವೈಮನಸ್ಯ ಉಂಟಾಗಿದೆ ಎಂದು ನಮ್ಮ ತಮಿಳುನಾಡಿನ ಬಾತ್ಮಿದಾರರು ಹೇಳಿದ್ದಾರೆ. ಇಬ್ಬರ ನಡುವಿನ ಮಾತುಕತೆ ಮುರಿದು ಬಿದ್ದಿದ್ದು ಈ ವಾರ ಕೋಚಾಡಿಯನ್ ಬಿಡುಗಡೆ ಕಾಣುವುದು ಅನುಮಾನ ಎಂದು ತಿಳಿದು ಬಂದಿದೆ.

Shocking: Kochadaiiyaan Release Postponed?

ಮೂಲಗಳ ಪ್ರಕಾರ ವಿತರಕರಿಗೆ ಸೆಡ್ಡು ಹೊಡೆದು ಕೋಚಾಡಿಯನ್ ಚಿತ್ರವನ್ನು ಬೆಳ್ಳಿತೆರೆಗೆ ತರಲು ನಿರ್ಮಾಪಕರಾದ ಸುನಂದಾ ಮುರಳಿ ಮನೋಹರ್ ಹಾಗೂ ಸುನಿಲ್ ಲುಲ್ಲಾ ಅವರು ಯತ್ನಿಸುತ್ತಿದ್ದಾರೆ. ಬಹುನಿರೀಕ್ಷಿತ ಚಿತ್ರದ ನಿರ್ದೇಶಕಿ ರಜನಿಕಾಂತ್ ಪುತ್ರಿ ಸೌಂದರ್ಯ ಅಶ್ವಿನ್ ಅವರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

ಚಿತ್ರ ನಿರ್ಮಾಣದಲ್ಲಿ ಮೀಡಿಯಾ ಒನ್ ಗ್ಲೋಬಲ್ ಎಂಟರ್ ಟೈನ್ಮೆಂಟ್ ಲಿ, ಸಿನಿಮಾರ್ಫಿಕ್, ಎರೋಸ್ ಇಂಟರ್ ನ್ಯಾಷನಲ್ ಸಂಸ್ಥೆ ಹಣ ಹೂಡಿಕೆ ಮಾಡಿವೆ. ಯುನೈಟೆಡ್ ಕಿಂಗ್ ಡಮ್, ಯುಎಸ್ ಎ, ಫ್ರಾನ್ಸ್, ಶ್ರೀಲಂಕಾ ಸೇರಿದಂತೆ ವಿಶ್ವದ ಅನೇಕ ಕಡೆ ಚಿತ್ರವನ್ನು ಮೇ.8ರಂದು ಚಿತ್ರ ಬಿಡುಗಡೆಯಾಗಬೇಕಿತ್ತು.

ಕೆಎಸ್ ರವಿಕುಮಾರ್ ಚಿತ್ರಕಥೆ ಒದಗಿಸಿರುವ ಎ.ಆರ್ ರೆಹಮಾನ್ ಸಂಗೀತ ಹೊಂದಿರುವ ಈ ಚಿತ್ರದಲ್ಲಿ ಆರ್ ಶರತ್ ಕುಮಾರ್, ಆದಿ, ಶೋಭನಾ, ರುಕ್ಮಿಣಿ ವಿಜಯಕುಮಾರ್, ಜಾಕಿ ಶ್ರಾಫ್ ಹಾಗೂ ನಾಸರ್ ಮುಖ್ಯಭೂಮಿಕೆಯಲ್ಲಿದ್ದಾರೆ. ರಾಜೀವ್ ಮೆನನ್ ಛಾಯಾಗ್ರಹಣವಿರುವ ಅನಿಮೇಟೆಡ್ ಚಿತ್ರ ತಮಿಳು ಅಲ್ಲದೆ ಹಿಂದಿ, ತೆಲುಗು, ಜಪಾನಿ, ಭೋಜಪುರಿ, ಬೆಂಗಾಳಿ, ಮರಾಠಿ, ಪಂಜಾಬಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆ ಕಾಣಲು ಸಿದ್ಧವಾಗಿದೆ.

English summary
An unexpected twist has occurred over the release of a Tamil big movie again and leaving the audience in a state of shock! After Kamal Hassan's Vishwaroopam, which was banned two days before the release and Vijay's Thalaivaa, now, Rajinikanth's Kochadaiiyaan seems to be facing the last-minute release issues.
Please Wait while comments are loading...