'ಕಿರಾತಕ-2' ಚಿತ್ರೀಕರಣ ಮುಕ್ತಾಯ, ಯಶ್ ಅಭಿಮಾನಿಗಳಿಗೆ ಸರ್ಪ್ರೈಸ್
ರಾಕಿಂಗ್ ಸ್ಟಾರ್ ಯಶ್ ನಟನೆಯಲ್ಲಿ ಮೂಡಿ ಬಂದಿದ್ದ ಕಿರಾತಕ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಯಶ್ ವೃತ್ತಿ ಜೀವನದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿದ ಈ ಚಿತ್ರ ರಾಕಿಗೆ ಹೊಸ ಇಮೇಜ್ ತಂದುಕೊಟ್ಟಿತ್ತು. ಕಿರಾತಕ ಚಿತ್ರಕ್ಕೂ ಮೊದಲು ಕಿರಾತಕ ಸಿನಿಮಾದ ನಂತರ ಯಶ್ ಯಶಸ್ಸಿನ ಹಾದಿ ಸಾಕಷ್ಟು ಬದಲಾಗಿದೆ.
ಕೆಜಿಎಫ್ ಚಾಪ್ಟರ್ 1 ಶೂಟಿಂಗ್ ಮುಗಿಸಿದ್ದ ಯಶ್ 'ಮೈ ನೇಮ್ ಈಸ್ ಕಿರಾತಕ' ಎಂಬ ಹೊಸ ಪ್ರಾಜೆಕ್ಟ್ ಆರಂಭಿಸಿದರು. ಇದು ಕಿರಾತಕ ಸೀಕ್ವೆಲ್ ಎಂಬ ಕಾರಣಕ್ಕೆ ಭಾರಿ ಕುತೂಹಲ ಹುಟ್ಟುಕೊಂಡಿತು. ಮೊದಲ ಹಂತದ ಚಿತ್ರೀಕರಣ ಸಹ ನಡೆದಿತ್ತು. ಅಷ್ಟೊತ್ತಿಗೆ ಕೆಜಿಎಫ್ ತೆರೆಕಂಡು ನಿರೀಕ್ಷೆ ಮೀರಿದ ಸಕ್ಸಸ್ ಪಡೆದುಕೊಳ್ತು. ಆಮೇಲೆ ಇದ್ದಕ್ಕಿದ್ದಂತೆ ಕಿರಾತಕ 2 ಚಿತ್ರವನ್ನು ನಿಲ್ಲಿಸಲಾಗಿತ್ತು. ಆದ್ರೀಗ, ಕಿರಾತಕ 2 ಸಿನಿಮಾದ ಚಿತ್ರೀಕರಣ ಮುಗಿದಿದೆ. ಮುಂದೆ ಓದಿ....

ಕಿರಾತಕ-2 ಶೂಟಿಂಗ್ ಮುಕ್ತಾಯ
ಯಶ್ ನಟನೆಯ ಕಿರಾತಕ ಸಿನಿಮಾ ನಿರ್ದೇಶನ ಮಾಡಿದ್ದ ಪ್ರದೀಪ್ ರಾಜ್ ಡೈರೆಕ್ಷನ್‌ನಲ್ಲಿ 'ಕಿರಾತಕ-2' ಚಿತ್ರೀಕರಣ ಮುಕ್ತಾಯವಾಗಿದೆ ಎಂಬ ವಿಚಾರ ಹೊರಬಿದ್ದಿದೆ. ಆದ್ರೆ, ಈ ಚಿತ್ರಕ್ಕೆ ನಾಯಕ ರಾಕಿಂಗ್ ಸ್ಟಾರ್ ಯಶ್ ಅಲ್ಲ.

ಯಶ್ ಶೆಟ್ಟಿ ನಾಯಕ!
ಕಿರಾತಕ 2 ಸಿನಿಮಾ ಅಂದಾಕ್ಷಣ ಯಶ್ ಅವರೇ ನಾಯಕ ಎಂದುಕೊಂಡಿದ್ದವರಿಗೆ ಇದು ಆಶ್ಚರ್ಯ ತರಬಹುದು. ಏಕಂದ್ರೆ, ಕಿರಾತಕ 2 ಚಿತ್ರದ ನಾಯಕ ಯಶ್ ಅಲ್ಲ, ಯಶ್ ಶೆಟ್ಟಿ. ವಿಭಿನ್ನ ಪಾತ್ರಗಳು ಹಾಗೂ ಖಳನಾಯಕನ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ಯಶ್ ಶೆಟ್ಟಿ ಕಿರಾತಕ 2 ಸಿನಿಮಾ ಮುಗಿಸಿದ್ದಾರೆ. ಕೆಜಿಎಫ್, ಸೂಜಿದಾರ, ಆ ದೃಶ್ಯ ಸೇರಿದಂತೆ ಹಲವು ಚಿತ್ರಗಳಲ್ಲಿ ಯಶ್ ಶೆಟ್ಟಿ ನಟಿಸಿದ್ದಾರೆ.

'ಮೈ ನೇಮ್ ಈಸ್ ಕಿರಾತಕ' ಚಿತ್ರ ಬೇರೆ
ಅಂದ್ಹಾಗೆ, ರಾಕಿಂಗ್ ಸ್ಟಾರ್ ಯಶ್ ನಟನೆಯಲ್ಲಿ ಚಿತ್ರೀಕರಣ ಮಾಡುತ್ತಿದ್ದ 'ಮೈ ನೇಮ್ ಈಸ್ ಕಿರಾತಕ' ಚಿತ್ರಕ್ಕೂ ಯಶ್ ಶೆಟ್ಟಿ ನಟನೆಯ ಕಿರಾತಕ 2 ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಈ ಸಿನಿಮಾ ಬೇರೆ ಆ ಸಿನಿಮಾ ಬೇರೆ. ಆದ್ರೆ, ನಿರ್ದೇಶಕರು ಮಾತ್ರ ಅವರೇ.
Recommended Video

ಕಿರಾತಕ ಮತ್ತೆ ಆರಂಭವಾಗುತ್ತಾ?
'ಮೈ ನೇಮ್ ಈಸ್ ಕಿರಾತಕ' ಸಿನಿಮಾವನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ಮೇಲೆ ಸಂಪೂರ್ಣವಾಗಿ ಫೋಕಸ್ ಮಾಡಿದ್ದಾರೆ. ಚಾಪ್ಟರ್ 2 ಮುಗಿದ ಮೇಲೆ ಕಿರಾತಕ ಮತ್ತೆ ಆರಂಭಿಸಬಹುದು ಎಂಬ ನಿರೀಕ್ಷೆ ಇದೆ. ಆದ್ರೆ, ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಗಾಂಧಿನಗರದಲ್ಲಿ ಈ ಕುರಿತು ನಂಬಿಕೆ ಸಹ ಇಲ್ಲ.


Click it and Unblock the Notifications











