ಮೊದಲ ಮಹಿಳಾ ಸೂಪರ್ ಹೀರೋ ಸಿನಿಮಾ ಚಿತ್ರೀಕರಣ ಮುಕ್ತಾಯ
ಕನ್ನಡದಲ್ಲಿ ತಯಾರಾಗುತ್ತಿರುವ ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ.
ಅದಿತಿ ಪ್ರಭುದೇವ ಈ ಚಿತ್ರದ ನಾಯಕಿಯಾಗಿದ್ದು, ಅಕ್ಟೋಬರ್ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಿತ್ತು. ಒಂದೂವರೆ ತಿಂಗಳಲ್ಲಿ ಈ ಪ್ರಾಜೆಕ್ಟ್ ಶೂಟಿಂಗ್ ಮುಗಿಸಿದೆ. ಅಂದ್ಹಾಗೆ, ಈ ಚಿತ್ರದ ಹೆಸರು ಆನ.
ಮನೋಜ್.ಪಿ.ನಡುಲಮನೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಿನಿಮಾ ಬಗ್ಗೆ ಹೆಚ್ಚೇನು ಮಾಹಿತಿ ಬಿಟ್ಟು ಕೊಡದ ನಿರ್ದೇಶಕರು ಪೋಸ್ಟರ್ ಹಂಚಿಕೊಂಡಾಗ ''ಬೆಂಕಿಯ ಜ್ವಾಲೆಗೆ ಧುಮುಕುವರಾರು? ಸುನಾಮಿ ಅಲೆಗಳ ಎದುರು ನಿಲ್ಲುವರಾರು? ಮಿಂಚಿನ ವೇಗವ ಮೀರಿಸುವವರಾರು? ಅವಳ ಶಕ್ತಿಯ ತಡ್ಯೋರ್ಯಾರು??? ಆಕೆ ಬರ್ತಾಯಿದ್ದಾಳೆ. ಆನ '' ಎಂದು ಮನೋಜ್.ಪಿ.ನಡುಲಮನೆ ಪೋಸ್ಟರ್ ಹಾಕಿದ್ದರು.

ಅಂದ್ಹಾಗೆ, ಈ ಚಿತ್ರದಲ್ಲಿ ಅದಿತಿ ವಿಭಿನ್ನ ಪಾತ್ರ ನಿರ್ವಹಿಸಿದ್ದು, ಪ್ರೇಕ್ಷಕರಿಗೆ ಹೊಸ ರೀತಿ ಮನರಂಜನೆ ಸಿಗಲಿದೆಯಂತೆ.
ಬ್ರಹ್ಮಾಚಾರಿ ಸಿನಿಮಾ ಬಳಿಕ ಸಾಲು ಸಾಲು ಚಿತ್ರಗಳಲ್ಲಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. ತೋತಾಪುರಿ, ದಿಲ್‌ಮಾರ್, ಒಂಬತ್ತನೇ ದಿಕ್ಕು, ಓಲ್ಡ್ ಮಂಕ್, ಚಾಂಪಿಯನ್, ಗಜಾನನ ಗ್ಯಾಂಗ್, ಭಗವಾನ್ ಶ್ರೀಕೃಷ್ಣ ಪರಮಾತ್ಮ, ತ್ರಿಬಲ್ ರೈಡಿಂಗ್ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಅದಿತಿ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











