ಮೊದಲ ಹಂತದ ಚಿತ್ರೀಕರಣ ಮುಗಿಸಿದ 'ಲವ್ ಯೂ ರಚ್ಚು'

ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಅಜಯ್ ರಾವ್ ನಟನೆಯ ಲವ್ ಯೂ ರಚ್ಚು ಸಿನಿಮಾ ತಂಡ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ಸಕಲೇಶಪುರದಲ್ಲಿ ಆರಂಭಿಕ ಹಂತದ ಶೂಟಿಂಗ್ ಯಶಸ್ವಿಯಾಗಿ ಮಾಡಿದೆ.

ಈ ಕುರಿತು ನಿರ್ಮಾಪಕ ಗುರುದೇಶಪಾಂಡೆ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ. ''ಈಗಷ್ಟೇ ಲವ್ ಯೂ ರಚ್ಚು ಸಿನಿಮಾದ ಮೊದಲ ಹಂತದ ಶೂಟಿಂಗ್ ಮುಗಿದಿದೆ. ಶಂಕರ್ ರಾಜ್, ರಚಿತಾ ರಾಮ್, ಅಜಯ್ ರಾವ್ ಪಾಲ್ಗೊಂಡಿದ್ದರು. ಹೆಚ್ಚಿನ ಮಾಹಿತಿಗಾಗಿ ಕಾಯ್ತರಿ'' ಎಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನಟ ಅಜಯ್ ರಾವ್ ಸಹ ಲವ್ ಯೂ ರಚ್ಚು ಚಿತ್ರದ ಫೋಟೋಗಳನ್ನು ಶೇರ್ ಮಾಡಿದ್ದು, ''ಈ ಫೋಟೋ ಸಾಕು, ಎಲ್ಲವನ್ನು ಹೇಳುತ್ತದೆ'' ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

 Shooting for the first schedule of Love You Racchu completed in Sakleshpur

ಚೊಚ್ಚಲ ನಿರ್ದೇಶಕ ಶಂಕರ್ ರಾಜ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಜಿ ಸಿನಿಮಾಸ್ ಬ್ಯಾನರ್‌ ಅಡಿಯಲ್ಲಿ ಗುರುದೇಶಪಾಂಡೆ ಬಂಡವಾಳ ಹಾಕಿದ್ದಾರೆ.

ಜನವರಿ ತಿಂಗಳಲ್ಲಿ ಲವ್ ಯೂ ರಚ್ಚು ಸಿನಿಮಾ ಆರಂಭವಾಗಿತ್ತು. ಮುಹೂರ್ತದ ಬಳಿಕ ಚಿತ್ರೀಕರಣ ಪ್ರಾರಂಭಿಸಿದ್ದ ಚಿತ್ರತಂಡ ಈಗ ಮೊದಲ ಹಂತ ಮುಗಿಸಿದೆ.

ಇನ್ನುಳಿದಂತೆ ರಚಿತಾ ರಾಮ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಮೇಶ್ ಅರವಿಂದ್ ಜೊತೆ 100, ಪ್ರಜ್ವಲ್ ಜೊತೆ ವೀರಂ, ಸತೀಶ್ ನೀನಾಸಂ ಜೊತೆ ಮ್ಯಾಟ್ನಿ, ಏಪ್ರಿಲ್, ಲಿಲ್ಲಿ, ಮಾನ್ಸೂನ್ ರಾಗಾ ಅಂತಹ ಸಿನಿಮಾದಲ್ಲಿ ರಚ್ಚು ಅಭಿನಯಿಸುತ್ತಿದ್ದಾರೆ.

More from Filmibeat

English summary
Shooting for the first schedule of Love You Racchu completed in Sakleshpura.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X