For Quick Alerts
  ALLOW NOTIFICATIONS  
  For Daily Alerts

  ಕಪ್ಪು ಕನ್ನಡಕ ಇಲ್ಲದೆ, ದಿಗಂತ್ ಮನೆಯಿಂದೀಗ ಆಚೆ ಬರಲ್ಲ.! ಯಾಕೆ.?

  By Harshitha
  |

  ಮೊನ್ನೆಯಷ್ಟೇ ದ್ವಾರಕೀಶ್ ನಿರ್ಮಾಣದ ಪ್ರಜ್ವಲ್ ದೇವರಾಜ್, ದಿಗಂತ್, ಲವ್ಲಿ ಸ್ಟಾರ್ ಪ್ರೇಮ್, ವಿಜಯ್ ರಾಘವೇಂದ್ರ ಅಭಿನಯದ 'ಚೌಕ' ಚಿತ್ರದ ಪತ್ರಿಕಾಗೋಷ್ಠಿ ಇತ್ತು.

  ಕಾರ್ಯಕ್ರಮಕ್ಕೆ ಕ್ಯಾಶುವಲ್ ಉಡುಗೆ ತೊಟ್ಟು, ತಲೆಗೆ ಟೋಪಿ ಹಾಕೊಂಡಿದ್ದ ದಿಗಂತ್ ಇಡೀ ಪ್ರೆಸ್ ಮೀಟ್ ಮುಗಿಯುವವರೆಗೂ ಕಣ್ಣಿಂದ ಕಪ್ಪು ಕ್ಲೂಲಿಂಗ್ ಗ್ಲಾಸ್ ತೆಗೆಯಲೇ ಇಲ್ಲ.

  'ಚೌಕ' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಕಪ್ಪು ಕನ್ನಡಕ ತೊಟ್ಟಿದ್ದ ನಟ ದಿಗಂತ್

  'ಚೌಕ' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಕಪ್ಪು ಕನ್ನಡಕ ತೊಟ್ಟಿದ್ದ ನಟ ದಿಗಂತ್

  'ಚೌಕ' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಕಪ್ಪು ಕನ್ನಡಕ ತೊಟ್ಟಿದ್ದ ನಟ ದಿಗಂತ್

  'ಚೌಕ' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಕಪ್ಪು ಕನ್ನಡಕ ತೊಟ್ಟಿದ್ದ ನಟ ದಿಗಂತ್

  ಶೂಟಿಂಗ್ ನಲ್ಲಾದ ಅವಗಡದಲ್ಲಿ ದಿಗಂತ್ ಬಲಗಣ್ಣಿಗೆ ಬಲವಾದ ಪಟ್ಟು ಬಿ ದ್ದಿದೆ

  ಶೂಟಿಂಗ್ ನಲ್ಲಾದ ಅವಗಡದಲ್ಲಿ ದಿಗಂತ್ ಬಲಗಣ್ಣಿಗೆ ಬಲವಾದ ಪಟ್ಟು ಬಿ ದ್ದಿದೆ

  ಬರೀ ಪ್ರೆಸ್ ಮೀಟ್ ನಲ್ಲಿ ಮಾತ್ರ ಅಲ್ಲ, ಎಲ್ಲೇ ಹೋದರೂ ದಿಗಂತ್ ಗೆ ಕಪ್ಪು ಕನ್ನಡಕ ಇರಲೇಬೇಕಂತೆ. ಅದಕ್ಕೆ ಕಾರಣ ಏನು ಅಂತ ಹುಡುಕುತ್ತಾ ಹೊರಟಾಗ ಸಿಕ್ಕ ಉತ್ತರ - ''ಕಣ್ಣಿಗೆ ಬಿದ್ದಿರುವ ಬಲವಾದ ಪೆಟ್ಟು''.!

  ಹೌದು, 'ಟಿಕೆಟ್ ಟು ಬಾಲಿವುಡ್' ಎಂಬ ಹಿಂದಿ ಚಿತ್ರದಲ್ಲಿ ದಿಗಂತ್ ಅಭಿನಯಿಸುತ್ತಿದ್ದಾರೆ. ಆ ಚಿತ್ರದಲ್ಲಿ ಸ್ಟಂಟ್ ಮಾಡುವಾಗ ದಿಗಂತ್ ಕಣ್ಣಿಗೆ ಮೆಟಲ್ ಪೀಸ್ ಬಿದ್ದಿದೆ. [ದಿಗಂತ್ ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ಬಿಜಿ]

  ಕಣ್ಣಿನ ಲೆನ್ಸ್ ಹಾಗೂ ರೆಟಿನಾಗೆ ಬಲವಾದ ಪೆಟ್ಟಾಗಿರುವ ಕಾರಣ ಲಂಡನ್ ಹಾಗೂ ಸ್ಕಾಟ್ ಲ್ಯಾಂಡ್ ನಲ್ಲಿ ಈಗಾಗಲೇ ಮೂರು ಬಾರಿ ಕಣ್ಣಿನ ಸರ್ಜರಿ ಮಾಡಿಸಿಕೊಂಡಿದ್ದಾರೆ ನಟ ದಿಗಂತ್.

  ಹೀಗಾಗಿ, ನಟ ದಿಗಂತ್ ಗೆ ಪ್ರಖರವಾದ ಬೆಳಕನ್ನು ಸಹಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಶೂಟಿಂಗ್ ಹಾಗೂ ಪ್ರೆಸ್ ಮೀಟ್ ನಲ್ಲಿ ಬಳಸುವ ಲೈಟ್ಸ್ ಗಳಿಂದಲೂ ಅವರಿಗೆ ಕಿರಿಕಿರಿ ಆಗುತ್ತಿದೆ. ಬಿಸಿಲಿಗೆ ಹೋದರಂತೂ, ದಿಗಂತ್ ಗೆ ಕಣ್ಣು ಬಿಡುವುದು ಕಷ್ಟವಾಗಿದೆ. [ದಿಗಂತ್ ಬಾಲಿವುಡ್ ಕನಸು ಕೊನೆಗೂ ನನಸು]

  ಇದೇ ಕಾರಣಕ್ಕೆ, ಮಾಧ್ಯಮಗಳ ಮುಂದೆ ಕನ್ನಡಕ ಹಾಕಿಕೊಂಡೇ ದಿಗಂತ್ ಮಾತನಾಡಿದರು. ಅಷ್ಟು ನೋವು ಇದ್ದರೂ, ನಗು ಮೊಗದಿಂದಲೇ 'ಚೌಕ' ಪತ್ರಿಕಾಗೋಷ್ಠಿಯಲ್ಲಿ ಓಡಾಡುತ್ತಿದ್ದರು. ['ಶಾರ್ಪ್ ಶೂಟರ್' ದಿಗಂತ್ ಗೆ ಶುಕ್ರದೆಸೆ ಶುರು]

  ದಿಗಂತ್ ಬಹುಬೇಗ ಗುಣಮುಖವಾಗಲಿ ಎಂಬುದೇ ಅವರ ಅಭಿಮಾನಿಗಳ ಹಾಗೂ ನಮ್ಮ ಹಾರೈಕೆ.

  English summary
  While Shooting his Hindi Film, 'Ticket to Bollywood', Diganth involved in a freak accident resulting in Eye injury. Diganth has already been operated in London and Scotland thrice. On recovery, Diganth never steps out of his house without Black Glares.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X