For Quick Alerts
  ALLOW NOTIFICATIONS  
  For Daily Alerts

  ಡಿಸೆಂಬರ್ 20 ರಿಂದ ಉಪೇಂದ್ರ 'ಕಬ್ಜ' ಚಿತ್ರೀಕರಣ ಆರಂಭ

  |

  ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಸಿನಿಮಾದ ಚಿತ್ರೀಕರಣ ಡಿಸೆಂಬರ್ ತಿಂಗಳಿನಿಂದ ಆರಂಭವಾಗಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಭಾರತೀಯ ಚಿತ್ರರಂಗದ ಬಹುದೊಡ್ಡ ಪ್ರಾಜೆಕ್ಟ್ ಎನಿಸಿಕೊಂಡಿರುವ ಕಬ್ಜ ಏಳು ಭಾಷೆಯಲ್ಲಿ ಬಿಡುಗಡೆಯಾಗಲಿದೆ.

  ಈ ಹಿಂದೆ ಅಕ್ಟೋಬರ್‌ ತಿಂಗಳಲ್ಲಿ ಶೂಟಿಂಗ್ ಆರಂಭಿಸಲು ಚಿತ್ರತಂಡ ಪ್ಲಾನ್ ಮಾಡಿತ್ತು. ಆದ್ರೆ, ನಿರ್ದೇಶಕ ಆರ್ ಚಂದ್ರು ಅನಾರೋಗ್ಯಕ್ಕೆ ತುತ್ತಾಗಿದ್ದ ಕಾರಣ ಸ್ವಲ್ಪ ದಿನಗಳ ಕಾಲ ಮುಂದೂಡಿದ್ದರು.

  ಸಿನಿಮಾರಂಗ ಪ್ರವೇಶದ ಬಗ್ಗೆ ಉಪೇಂದ್ರ ಮಗನ ಮಾತುಸಿನಿಮಾರಂಗ ಪ್ರವೇಶದ ಬಗ್ಗೆ ಉಪೇಂದ್ರ ಮಗನ ಮಾತು

  ಇದೀಗ, ನಿರ್ದೇಶಕ ಆರ್ ಚಂದ್ರು ಗುಣಮುಖರಾಗಿದ್ದು, ಮೂರನೇ ವಾರದಿಂದ ಕೆಲಸ ಶುರು ಮಾಡಲಿದ್ದಾರಂತೆ.

  1980ರ ಕಥಾಹಂದರ ಹೊಂದಿರುವ ಕಬ್ಜ ಸಿನಿಮಾ ಪರಿಪೂರ್ಣ ಅಂಡರ್‌ವರ್ಲ್ಡ್ ಚಿತ್ರವಾಗಿದೆ. ಕೆಜಿಎಫ್ ಚಿತ್ರಕ್ಕೆ ಸೆಟ್ ನಿರ್ಮಾಣ ಮಾಡಿದ್ದ ಶಿವಕುಮಾರ್ ಕಬ್ಜ ಚಿತ್ರಕ್ಕೂ ಸೆಟ್ ಹಾಕುತ್ತಿದ್ದು, ಮಿನರ್ವ್ ಮಿಲ್‌ನಲ್ಲಿ ಅದ್ಧೂರಿಯಾಗಿ ಜೈಲು ಸಂಚಿಕೆ ಚಿತ್ರೀಕರಿಸಲಿದ್ದಾರಂತೆ.

  ಸಿದ್ಧೇಶ್ವರ ಎಂಟರ್‌ಪ್ರೈಸ್‌ ಅಡಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಕಬೀರ್ ದುಹಾನ್ ಸಿಂಗ್, ಕೋಟ ಶ್ರೀನಿವಾಸ್ ರಾವ್, ಜಯಪ್ರಕಾಶ್, ಸುಬ್ಬರಾಜು, ಅವಿನಾಶ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.

  'ಸೀನಿಯರ್ಸ್ ಸಲಹೆ ಕೊಡೋದು ಮೊದಲು ಬಿಡಬೇಕು'- ಉಪೇಂದ್ರ'ಸೀನಿಯರ್ಸ್ ಸಲಹೆ ಕೊಡೋದು ಮೊದಲು ಬಿಡಬೇಕು'- ಉಪೇಂದ್ರ

  ಇದುವರೆಗೂ ಕಬ್ಜ ಸಿನಿಮಾದ ನಾಯಕಿಯ ಬಗ್ಗೆ ಸುಳಿವು ಸಹ ಸಿಕ್ಕಿಲ್ಲ. ಸದ್ಯದ ಮಾಹಿತಿ ಪ್ರಕಾರ, ಸ್ಟಾರ್ ನಟಿಯೊಬ್ಬರು ನಾಯಕಿಯಾಗಿ ಆಯ್ಕೆಯಾಗಿದ್ದು, ಜನವರಿಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

  ಇದಕ್ಕೋಸ್ಕರ ತುಂಬಾ ದಿನದಿಂದ ಕಾಯ್ತಾ ಇದ್ದೆ | prajwal Devaraj | Veeram | Filmibeat Kannada

  ಇದಕ್ಕೂ ಮುಂಚೆ ಬ್ರಹ್ಮ ಮತ್ತು ಐ ಲವ್ ಯೂ ಸಿನಿಮಾಗಳಲ್ಲಿ ಉಪೇಂದ್ರ ಮತ್ತು ಆರ್ ಚಂದ್ರು ಒಟ್ಟಿಗೆ ಕೆಲಸ ಮಾಡಿದ್ದಾರೆ.

  English summary
  Shooting of Upendra-Starrer Kabza Is All Set to Start from December 20.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X