ಪ್ರಪಂಚ ಪರ್ಯಟನೆ 'ರೂಟ್'ನಲ್ಲಿ ದೀಪಕ್, ನವೀನ್

<ul id="pagination-digg"><li class="previous"><a href="/news/route-no-1-short-film-naveen-kumar-dd-deepak-gowda-069182.html">« Previous</a>

Deepak Naveen
ಇನ್ನು ಎಲ್ಲರಂತೆ, ನಿದ್ದೆ ಹಾಗೂ ದೈನಂದಿನ ಕೆಲಸಗಳು ಅವರಿಗೂ ಇರುವುದರಿಂದ ಸಹಜವಾಗಿಯೇ ಬೇರೇನೂ ಯೋಚಿಸಲು ಅವರಿಗೆ ಸಮಯ ಸಿಗುವುದಿಲ್ಲ. ಆದರೂ ಸಮಾಜದ ರೀತಿ-ನೀತಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅವರು ಮುಂದಾದಾಗ ಪ್ರಮುಖ ಪಾತ್ರ ವಹಿಸುವುದು ಹುಡುಗನಿಗೆ ಬರುವ ಸಂಬಳ.

ಹೀಗಾಗಿಯೇ ಇಂದು ಕಾರ್ಪೋರೇಟ್ ಜಗತ್ತಿನ ಮದುವೆಯೆಂದರೆ ಅದು ಎರಡು ಹೃದಯಗಳ ಬೆಸುಗೆ ಎಂಬುದಕ್ಕಿಂತ ಹೆಚ್ಚಾಗಿ ಹಣದ ನಡುವೆ ನಡೆಯುವ ವ್ಯವಹಾರ ಎನ್ನುವುದೇ ಹೆಚ್ಚು ಸೂಕ್ತ. ಎಲ್ಲದರಲ್ಲೂ ಕೆಲವು ಅಪವಾದಗಳಿರುವಂತೆ ಇಲ್ಲೂ ಇದ್ದರೂ 'ಅಡ್ವಾನ್ಸ್ಡ್ ಜನರೇಶನ್' ಎಂಬ ಹಣೆಪಟ್ಟಿ ಇರುವುದರಿಂದ ಇವರು ಆಡಿದ್ದೇ ಆಟ, ಮಾಡಿದ್ದೇ ಜೀವನ ಎಂಬಂತಾಗಿದೆ.

ಇಂತಹ ಸಬ್ಜೆಕ್ಟ್ ಹೊಂದಿರುವ 'ರೂಟ್ ನಂ.1' ಕಿರುಚಿತ್ರವು ಉಳಿದ ಆಯಾಮಗಳತ್ತಲೂ ಸಾಕಷ್ಟು ಬೆಳಕು ಚೆಲ್ಲಿದೆ. ಜೀವನದ ದೃಷ್ಟಿಕೋನದ ಮೂಲಕ, 'ಹಿಂದಕ್ಕೆ ನೋಡಿ ಅನುಭವ ಪಡೆಯಿರಿ.., ಮುಂದಕ್ಕೆ ನೋಡುವ ಭರವಸೆಯಿರಲಿ.., ಸುತ್ತಲೂ ನೋಡಿ ವಾಸ್ತವತೆ ಅರಿತುಕೊಳ್ಳಿ.., ನಿಮ್ಮೊಳತೆ ಇಣುಕಿ ನಿಮ್ಮನ್ನು ಅರಿತುಕೊಳ್ಳಿ...'

ಈ ತತ್ವವನ್ನೂ ಒಳಗೊಂಡಿರುವ ಕಿರುಚಿತ್ರವು, 'ಮನುಷ್ಯನೊಬ್ಬ ಭೂಮಿಗೆ ಬರುವುದು ಆಯ್ಕೆಯಲ್ಲ, ಆದರೆ ಜೀವನವನ್ನು ಅವನಿಷ್ಟದಂತೆ ಬದುಕುವ ಸ್ವಾತಂತ್ರ್ಯದ ಮಧ್ಯೆ ಹೇಗೆ ಬದುಕುತ್ತಾನೆ' ಎಂಬುದೇ ಜೀವನಕ್ಕೊಂದು ವಿಶೇಷ ಅರ್ಥ ಕಲ್ಪಿಸುತ್ತದೆ ಎಂದ ಸಂದೇಶವನ್ನೂ ಸಾರುವಂತಿದೆಯೇ? ಉತ್ತರಕ್ಕೆ ಕಿರುಚಿತ್ರ ರೂಟ್ ನಂ.1 ನೋಡಿ..(ರೂಟ್ ನಂ.1 ಹಾಡು)

ನವೀನ್ ಕುಮಾರ್ ಜಿಜಿ ನಿರ್ದೇಶನದ ಈ ಕಿರುಚಿತ್ರಕ್ಕೆ ನಿರ್ಮಾಪಕರಾಗಿ ಸಾಥ್ ನೀಡುತ್ತಿರುವವರು ಪ್ರತಾಪ್ ಹಾಗೂ ನಾಗೇಶ್. ಈ ಕಿರುಚಿತ್ರದಲ್ಲಿ ದೀಪಕ್ ಆರ್ ಗೌಡ, ಧನರಾಜ್ ಸುವರ್ಣ ಹಾಗೂ ದಿವ್ಯಾ ಎ ನಟಿಸಿದ್ದಾರೆ. ನವೀನ್ ಕುಮಾರ್, ಮೈಸೂರು ಛಾಯಾಗ್ರಹಣ ಚಿತ್ರಕ್ಕಿದ್ದು, ಸಾಹಿತ್ಯ ಮತ್ತು ಸಂಗೀತ ವಿಜಯ್ ಶ್ರೀನಿವಾಸ್ ಅವರದು. ರಂಜನ್ ನಾಗ್ ಹಾಗೂ ಸಿಲ್ ನವೀನ್ ಸಂಕಲನದ ಚಿತ್ರವನ್ನು ಕಥೆ-ಚಿತ್ರಕಥೆ, ಸಂಭಾಷಣೆ ಜೊತೆ ನಿರ್ದೇಶಿಸಿರುವವರು ನವೀನ್ ಕುಮಾರ್ ಜಿಜಿ.

ರೂಟ್ ನಂ.1 ಚಿತ್ರವನ್ನು ಮಲ್ಲೇಶ್ವರಂ ರೇಣುಕಾ ಥಿಯೇಟರ್ ಪರದೆ ಮೇಲೆ ತರಲು ನಿರ್ಧರಿಸಿದೆ ಚಿತ್ರತಂಡ. ಈ ಚಿತ್ರವು 10-11-12 ರಂದು ಅಂದರೆ ನವೆಂಬರ್ 10, 2012 ರಂದು ಪರದೆ ಮೇಲೆ ಪ್ರದರ್ಶನಗೊಳ್ಳಲಿದೆ. ಕನ್ನಡದಲ್ಲಿ ಯಶಸ್ವಿಯಾದರೆ ಮುಂದೆ ಈ ಚಿತ್ರವನ್ನು ದಕ್ಷಿಣ ಭಾರತದ ಇನ್ನುಳಿದ ಭಾಷೆಗಳಾದ ತೆಲುಗು, ತಮಿಳು ಹಾಗೂ ಮಲಯಾಳಂಗೂ ಡಬ್ ಮಾಡಲು ನಿರ್ಧರಿಸಲಾಗಿದೆ.

ಸಿನಿಮಾ ಹಾಗೂ ಕಿರುತೆರೆ ವೀಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಿರುಚಿತ್ರವನ್ನು ವೀಕ್ಷಿಸಿ ತಮ್ಮ ವಿಭಿನ್ನ ಹೊಸ ಪ್ರಯತ್ನಕ್ಕೆ ಬೆನ್ನುತಟ್ಟುತ್ತಾರೆ ಎಂಬ ಭರವಸೆ ಚಿತ್ರತಂಡಕ್ಕಿದೆ. ಕಾಲ ನೀಡಲಿರುವ ಉತ್ತರಕ್ಕಾಗಿ 'ರೂಟ್ ನಂ.1' ಚಿತ್ರತಂಡ ಕಾಯುತ್ತಿದೆ... (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/route-no-1-short-film-naveen-kumar-dd-deepak-gowda-069182.html">« Previous</a>

More from Filmibeat

English summary
The part of the Films, short movies are now coming into limelight. Here is Kannada Short Film titled 'Route No 1' to release nex month, on 10th November 2012. Deepak R Gowda and Divya are in lead role for this Naveen Kumar GG Directed movie. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X