ರಿವೀಲ್ ಆಯ್ತು 'ಕೋಟಿಗೊಬ್ಬ 3' ಮೇಕಿಂಗ್ ಫೋಟೋಗಳು
Recommended Video

ನಟ ಸುದೀಪ್ ಈಗ 'ಕೋಟಿಗೊಬ್ಬ 3' ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿದ್ದಾರೆ. ಈ ಚಿತ್ರದ ಚಿತ್ರೀಕರಣ ಸರ್ಬಿಯಾದಲ್ಲಿ ನಡೆಯುತ್ತಿದ್ದು, ಇದೀಗ ಚಿತ್ರದ ಕೆಲವು ಮೇಕಿಂಗ್ ಫೋಟೋಗಳು ಹೊರಬಂದಿವೆ.
ಟಾಲಿವುಡ್ ನಟಿ ಶ್ರದ್ಧಾ ದಾಸ್ ಸಿನಿಮಾದ ಕೆಲವು ಫೋಟೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಶೂಟಿಂಗ್ ವೇಳೆ ಸುದೀಪ್ ಜೊತೆಗೆ ಫೋಟೋ ತೆಗೆಸಿಕೊಂಡಿರುವ ಅವರು ''ಕನ್ನಡ ಚಿತ್ರರಂಗದ ದೊಡ್ಡ ನಟ ಸುದೀಪ್ ಅವರ ಜೊತೆಗೆ 'ಕೋಟಿಗೊಬ್ಬ 3' ಸಿನಿಮಾ ಮಾಡುತ್ತಿರುವುದಕ್ಕೆ ನಾನು ಆಬಾರಿ ಆಗಿದ್ದೇನೆ. ಅವರ ಜೊತೆಗೆ ಶೂಟಿಂಗ್ ಸೆಟ್ ನಲ್ಲಿ ಪ್ರತಿ ಕ್ಷಣ ಕೂಡ ಹೊಸ ವಿಷಯ ಕಲಿಯುತ್ತಿದ್ದೇನೆ. ಈ ಚಿತ್ರದಲ್ಲಿ ನಾನು ನನ್ನ ಕನಸಿನ ಪಾತ್ರವನ್ನು ಮಾಡಿದ್ದೇನೆ'' ಎಂದಿದ್ದಾರೆ.

ಈ ಹಿಂದೆ ಕನ್ನಡದಲ್ಲಿ ಎರಡು ಸಣ್ಣ ಸಿನಿಮಾ ಮಾಡಿದ್ದ ಶ್ರದ್ಧಾ ದಾಸ್ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಜೊತೆಗೆ ಅವರು ಸ್ಕ್ರೀನ್ ಶೇರ್ ಮಾಡಿದ್ದು, ಪೊಲೀಸ್ ಅಧಿಕಾರಿ (ಇಂಟರ್ ಪೋಲ್ ಆಫೀಸರ್ ) ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
'ಕೋಟಿಗೊಬ್ಬ 3' ಸಿನಿಮಾದ ಲೀಡ್ ರೋಲ್ ನಲ್ಲಿ ಮಡೋನಾ ಸೆಬಾಸ್ಟಿಯನ್ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅವರ ಮೊದಲ ಕನ್ನಡ ಸಿನಿಮಾ ಆಗಿದೆ. ಅಂದಹಾಗೆ, ಈ ಚಿತ್ರಕ್ಕೆ ಶಿವಕಾರ್ತಿಕ್ ನಿರ್ದೇಶನ ಮಾಡುತ್ತಿದ್ದು, ಸೂರಪ್ಪ ಬಾಬು ನಿರ್ಮಾಣ ಮಾಡುತ್ತಿದ್ದಾರೆ.


Click it and Unblock the Notifications











