ಬುಲೆಟ್ ಓಡಿಸಲು ಹೋಗಿ ಬಿದ್ದ ನಟಿ ಶ್ರದ್ಧಾ ಶ್ರೀನಾಥ್
ಸ್ಯಾಂಡಲ್ ವುಡ್ ನಟಿ ಶ್ರದ್ಧಾ ಶ್ರೀನಾಥ್ ಸದ್ಯ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿಯೂ ಬ್ಯುಸಿಯಾಗಿದ್ದಾರೆ. ದಕ್ಷಿಣ ಬಾರತದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ಶ್ರದ್ಧಾ ಸದ್ಯ ಕೃಷ್ಣ ಆಂಡ್ ಹಿಸ್ ಲೀಲಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಿದ್ಧರಾಗಿದ್ದಾರೆ.
Recommended Video
ಯೂ ಟರ್ನ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶ್ರದ್ಧಾ ಈಗ ಕನ್ನಡ, ತಮಿಳು, ತೆಲುಗು ಸೇರಿದ್ದಂತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಕೊರೊನಾ ವೈರಸ್ ಹಾವಳಿಯ ಪರಿಣಾಮ ಮನೆಯಲ್ಲಿಯೆ ಇದ್ದರೂ, ಕೃಷ್ಣ ಆಂಡ್ ಹಿಸ್ ಲೀಲಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈ ನಡುವೆ ಶ್ರದ್ಧಾ ಬುಲೆಟ್ ಓಡಿಸಿ ಕೆಳಗೆ ಬಿದ್ದಿರುವ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಮುಂದೆ ಓದಿ..

ಬುಲೆಟ್ ಓಡಿಸಿ ಬಿದ್ದ ಶ್ರದ್ಧಾ
ನಂದಿ ಬೆಟ್ಟದಲ್ಲಿ ಬುಲೆಟ್ ರೈಡ್ ಮಾಡಲು ಕೆಳಗೆ ಬಿದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಶೇರ್ ಮಾಡಿ "ಭಾರತೀಯ ಚಲನಚಿತ್ರದಲ್ಲಿ ಧೈರ್ಯಶಾಲಿ ಸ್ತ್ರೀ ಆಗಬೇಕಾದರೆ, ಕನಿಷ್ಟ ಒಂದು ಬೈಕ್ ರೈಡಿಂಗ್ ಶಾಟ್ ಹೊಂದಿಲ್ಲದಿದ್ದರೆ? "ಎಂದು ಪ್ರಶ್ನಿಸಿದ್ದಾರೆ.

ಶೂಟಿಂಗ್ ಸಮಯದಲ್ಲಿ ನಡೆದ ಘಟನೆ
"ಜೂನ್ 2017 ನಾವು ನಂದಿ ಬೆಟ್ಟದಲ್ಲಿ ಶೂಟಿಂಗ್ ಮಾಡುತ್ತಿದ್ದೆವು. ಇದು ಮೋಡ ಕವಿದ ದಿನ ಮತ್ತು ರಸ್ತೆಗಳು ಒದ್ದೆಯಾಗಿತ್ತು. ರವಿ ಪೆರ್ಪು ಆಕಸ್ಮಿಕವಾಗಿ ನನ್ನ ಬಳಿ ಬಂದು ಬೈಕ್ ಸವಾರಿ ಮಾಡಲು ಬರುತ್ತಾ ಎಂದು ಕೇಳಿದರು. ನಾನು ನೇರವಾಗಿ ಇಲ್ಲ ಅಂತ ಹೇಳಿದೆ. ಆದರೆ ನಾನು ಪ್ರಯತ್ನ ಪಡುತ್ತೇನೆ ಎಂದು ಹೇಳಿ ಬೈಕ್ ಸ್ಟಾರ್ಟ್ ಮಾಡಿದೆ" ಎಂದಿದ್ದಾರೆ.

ರಾಯಲ್ ಎನ್ ಫೀಲ್ಡ್ ಯಾಕೆ ಇಷ್ಟು ಭಾರ
"8 ವರ್ಷದವಳಾಗಿದ್ದಾಗ ಬೈಕ್ ಓಡಿಸಲು ಕಲಿತಿದ್ದೆ. ಹಾಗಾಗಿ ತುಂಬಾ ಕಷ್ಟವಿಲ್ಲ ಎಂದು ಭಾವಿಸಿದ್ದೆ. ಗೇರ್ ಬದಲಾಯಿಸುವ ಬಗ್ಗೆ ಗೊತ್ತಿತ್ತು. ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ನಾನು ಬಿದ್ದಾಗ ಎಲ್ಲರೂ ನನಗೆ ಸಹಾಯ ಮಾಡಲು ಧಾವಿಸದರು. ಆದರೆ ಬೈಕ್ ಹಾಳಾಗುತ್ತೆ ಎಂದು ಕಳವಳ ವ್ಯಕ್ತಪಡಿಸಿದರು. ರಾಯಲ್ ಎನ್ ಫೀಲ್ಡ್ ಯಾಕೆ ಇಷ್ಟು ಭಾರ" ಎಂದು ಶ್ರದ್ಧಾ ಬರೆದುಕೊಂಡಿದ್ದಾರೆ.

ಶ್ರದ್ಧಾ ಶ್ರೀನಾಥ್ ಬಳಿ ಇರುವ ಸಿನಿಮಾಗಳು
ಶ್ರದ್ಧಾ ಶ್ರೀನಾಥ್ ಬಳಿ ಸಾಕಷ್ಟು ಸಿನಿಮಾಗಳಿವೆ. ಕೃಷ್ಣ ಅಂಡ್ ಹಿಸ್ ಲೀಲಾ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಜೊತೆಗೆ ತಮಿಲಿನ ಮಾರಾ, ಚಕ್ರ ಸಿನಿಮಾ ಸೇರಿದ್ದಂತೆ ಕನ್ನಡದಲ್ಲಿ ಗೋದ್ರ, ಫ್ಯಾಂಟಮ್, ರುದ್ರಪ್ರಯಾಗ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











