'ಯಶ್ ಅಥವಾ ನಾನಿ' ಇಬ್ಬರಲ್ಲಿ ಶ್ರದ್ಧಾ ಆಯ್ಕೆ ಮಾಡಿದ್ದು ಇವರನ್ನು

Recommended Video

ಯಶ್ ಬಗ್ಗೆ ನನಗೆ ಗೊತ್ತಿಲ್ಲ..! ನಾನಿ ಬೆಸ್ಟ್ ಎಂದ ಕನ್ನಡದ ನಟಿ..!

ನಟಿ ಶ್ರದ್ಧಾ ಶ್ರೀನಾಥ್ ಟಾಲಿವುಡ್ ಸಿನಿ ಪ್ರಪಂಚಕ್ಕೆ ಕಾಲಿಟ್ಟಿದ್ದಾರೆ. ಅವರ ನಟನೆಯ ಮೊದಲ ತೆಲುಗು ಸಿನಿಮಾ 'ಜರ್ಸಿ' ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ.

'ಜರ್ಸಿ' ಸಿನಿಮಾದ ಪ್ರಚಾರ ಕಾರ್ಯಕ್ರಮಗಳಲ್ಲಿ ತೊಡಗಿರುವ ಶ್ರದ್ಧಾ ಅಲ್ಲಿನ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದಾರೆ. ಅದೇ ರೀತಿ ಒಂದು ಸಂದರ್ಶನದಲ್ಲಿ 'ನಟ ಯಶ್ ಅಥವಾ ನಟ ನಾನಿ ಇಬ್ಬರಲ್ಲಿ ನಿಮ್ಮ ಆಯ್ಕೆ ಯಾರು ?' ಎನ್ನುವ ಪ್ರಶ್ನೆ ಬಂತು ಜೊತೆಗೆ, 'ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿ' ಎಂದು ಪ್ರಶ್ನೆ ಕೇಳಲಾಯಿತು.

ಆದರೆ, ಈ ಎಲ್ಲ ಪ್ರಶ್ನೆಗಳಿಗೆ ಬುದ್ದಿವಂತಿಕೆಯಿಂದ ನಟಿ ಶ್ರದ್ಧಾ ಶ್ರೀನಾಥ್ ಉತ್ತರ ನೀಡಿದ್ದಾರೆ. ಮುಂದೆ ಓದಿ....

ಯಶ್ ಅಥವಾ ನಾನಿ

ಯಶ್ ಅಥವಾ ನಾನಿ

''ಒಬ್ಬ ಸ್ಟಾರ್ ಆಗಿ ನಾನು ನಾನಿ ಅವರ ಜೊತೆಗೆ ಕೆಲಸ ಮಾಡಿದ್ದೇನೆ ಹಾಗಾಗಿ ನಾನು ಅವರನ್ನು ಆಯ್ಕೆ ಮಾಡುತ್ತೇನೆ. ಯಶ್ ಕೂಡ ಕಷ್ಟ ಪಟ್ಟು ಬೆಳೆದು ಬಂದ ನಟ. ಟಿವಿ ಸೀರಿಯಲ್ ನಿಂದ ಕಷ್ಟ ಪಟ್ಟ ಅವರ ಕಥೆ ನನಗೆ ನೆನಪಿದೆ. ಅವರು ಕನ್ನಡ ಸಿನಿಮಾ ಏನು ಎಂದು ಇಡೀ ದೇಶಕ್ಕೆ ತೋರಿಸಿದರು.'' ಎಂದು ಉತ್ತರ ನೀಡಿದ್ದಾರೆ.

ಯಶ್ ರನ್ನು ಒಮ್ಮೆ ಮಾತ್ರ ಭೇಟಿ ಮಾಡಿದ್ದೆ

ಯಶ್ ರನ್ನು ಒಮ್ಮೆ ಮಾತ್ರ ಭೇಟಿ ಮಾಡಿದ್ದೆ

''ಯಶ್ ಅವರನ್ನು ನಾನು ಅವರನ್ನು ಒಮ್ಮೆ ಮಾತ್ರ ಭೇಟಿ ಮಾಡಿದ್ದೇನೆ. ವೈಯಕ್ತಿಯವಾಗಿ ಅವರ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ. ಆ ಕಾರಣ ನಾನು ನಾನಿರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ.'' ಎಂದು ಹೇಳುವ ಮೂಲಕ ನಿರೂಪಕಿಯ ಪ್ರಶ್ನೆಯ ಬುದ್ದಿವಂತಿಕೆಯ ಉತ್ತರ ನೀಡಿದ್ದಾರೆ.

ನಾನಿ ಅಥವಾ ವಿಜಯ್ ಸೇತುಪತಿ

ನಾನಿ ಅಥವಾ ವಿಜಯ್ ಸೇತುಪತಿ

ಅದೇ ರೀತಿ ನಾನಿ ಅಥವಾ ವಿಜಯ್ ಸೇತುಪತಿ ಇಬ್ಬರಲ್ಲಿ 'ಆಕ್ಟರ್' ಆಗಿ ಯಾರನ್ನು ಆಯ್ಕೆ ಮಾಡುತ್ತೀರಿ ಎನ್ನುವ ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಶ್ರದ್ಧಾ, ವಿಜಯ್ ಸೇತುಪತಿರನ್ನು ಆಯ್ಕೆ ಮಾಡಿದರು. ಯಾಕೆಂದರೆ ಅವರು ವಿಜಯ್ ಸೇತುಪತಿ ಅವರ ಅನೇಕ ಸಿನಿಮಾಗಳನ್ನು ನೋಡಿದ್ದಾರಂತೆ.

ಟಾಲಿವುಡ್ ಅಥವಾ ಸ್ಯಾಂಡಲ್ ವುಡ್

ಟಾಲಿವುಡ್ ಅಥವಾ ಸ್ಯಾಂಡಲ್ ವುಡ್

'ಟಾಲಿವುಡ್ ಅಥವಾ ಸ್ಯಾಂಡಲ್ ವುಡ್ ಯಾವುದು ನಿಮ್ಮ ಆಯ್ಕೆ?' ಎನ್ನುವ ಇಕ್ಕಟ್ಟಿನ ಪರಿಸ್ಥಿತಿ ಬಂತು. ಆಗ ಶ್ರದ್ಧಾ ''ಎಲ್ಲ ವುಡ್ ಗಳು ನನಗೆ ಇಷ್ಟ. ಕೆಲಸ ಅಂದರೆ ಕೆಲಸ ಅಷ್ಟೇ. ಅದರಲ್ಲಿ ನಾನು ಯಾವುದೇ ಒಂದನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಒಂದನ್ನು ಆಯ್ಕೆ ಮಾಡಿ, ಇನ್ನೊಂದು ಕಡೆಯ ಪ್ರೇಕ್ಷಕರನ್ನು ಕಳೆದುಕೊಳ್ಳಲು ಇಷ್ಟ ಪಡುವುದಿಲ್ಲ'' ಎಂದರು.

More from Filmibeat

English summary
'Jersey' movie actress Shraddha Srinath's Comments About kannada actor Yash in telugu interview.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X