For Quick Alerts
  ALLOW NOTIFICATIONS  
  For Daily Alerts

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರುಣ್ ಧವನ್ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ ಶ್ರದ್ಧಾ

  |

  ಬಾಲಿವುಡ್ ನಟ ವರುಣ್ ಧವನ್ ಬಹುಕಾಲದ ಗೆಳತಿ ನತಾಶಾ ದಲಾಲ್ ಜೊತೆ ಭಾನುವಾರ (ಜನವರಿ 24) ಹಸೆಮಣೆ ಏರಿದ್ದಾರೆ. ವರುಣ್ ಮದುವೆ ಮಹಾರಾಷ್ಟ್ರದ ಅಲಿಬಾಗ್ ನಲ್ಲಿರುವ ಐಷಾರಾಮಿ ಹೋಟೆಲ್ ದಿ ಮ್ಯಾನ್ಷನ್ ಹೌಸ್ ನಲ್ಲಿ ನೆರವೇರಿದೆ.

  ಕುಟುಂಬದವರು ಮತ್ತು ತೀರ ಆಪ್ತರ ಸಮ್ಮುಖದಲ್ಲಿ ವರುಣ್ ಮತ್ತು ನತಾಶಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೇವಲ 150 ರಿಂದ 200 ಮಂದಿ ಮಾತ್ರ ಮದುವೆಯಲ್ಲಿ ಹಾಜರಾಗಿ ನವಜೋಡಿಗೆ ಶುಭಹಾರೈಸಿದ್ದಾರೆ. ವರುಣ್ ಮತ್ತು ನತಾಶಾ ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಹೊಸ ಜೋಡಿಗೆ ಬಾಲಿವುಡ್ ಗಣ್ಯರಿಂದ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಆದರೆ ಕನ್ನಡದ ನಟಿ ಶ್ರದ್ಧಾ ಶ್ರೀನಾಥ್ ನಟ ವರುಣ್ ಧವನ್ ಬಗ್ಗೆ ಮಾಡಿರುವ ಶಾಕಿಂಗ್ ಕಾಮೆಂಟ್ ಎಲ್ಲರ ಗಮನ ಸೆಳೆಯುತ್ತಿದೆ.

  ಸಂಕಷ್ಟದಲ್ಲಿರುವ ಕನ್ನಡ ಸಹಾಯಕ ನಿರ್ದೇಶಕರ ನೆರವಿಗೆ ನಿಂತ ನಟಿ ಶ್ರದ್ಧಾ ಶ್ರೀನಾಥ್ಸಂಕಷ್ಟದಲ್ಲಿರುವ ಕನ್ನಡ ಸಹಾಯಕ ನಿರ್ದೇಶಕರ ನೆರವಿಗೆ ನಿಂತ ನಟಿ ಶ್ರದ್ಧಾ ಶ್ರೀನಾಥ್

  ಮತ್ತೊಬ್ಬ ಉತ್ತಮ ನಟನ ವೃತ್ತಿ ಬದುಕು ಕೊನೆಯಾಯಿತು

  ಮತ್ತೊಬ್ಬ ಉತ್ತಮ ನಟನ ವೃತ್ತಿ ಬದುಕು ಕೊನೆಯಾಯಿತು

  ವರುಣ್ ಧವನ್ ದಂಪತಿಗೆ ಅಭಿನಂದನೆ ಸಲ್ಲಿಸುವ ಜೊತೆಗೆ ಶ್ರದ್ಧಾ ವ್ಯಂಗ್ಯವಾಡಿದ್ದಾರೆ. ಇನ್ಸ್ಟಾ ಗ್ರಾಮ್ ನಲ್ಲಿ ಬರೆದುಕೊಂಡಿರುವ ಶ್ರದ್ಧಾ 'ಇನ್ನೊಬ್ಬ ಉತ್ತಮ ನಟನ ವೃತ್ತಿ ಬದುಕು ಕೊನೆಯಾಯಿತು. ನಾವು ಮತ್ತೆ ಅವರನ್ನು ಪರದೆ ಮೇಲೆ ನೋಡಲು ಸಾಧ್ಯವಿಲ್ಲ ಎನ್ನುವ ಬೇಸರವಿದೆ. ಅವರ ಪತ್ನಿ ಮತ್ತು ಅತ್ತೆ ಮನೆಯರು ಬೇರೆ ನಾಯಕಿಯರ ಜೊತೆ ನಟಿಸುವದನ್ನು ಇಷ್ಟಪಡುವುದಿಲ್ಲ' ಎಂದಿದ್ದಾರೆ.

  ಪುರುಷ ಪ್ರಧಾನ ಸಿನಿಮಾಗಳನ್ನು ಮಾತ್ರ ಮಾಡುತ್ತಾರಾ?

  ಪುರುಷ ಪ್ರಧಾನ ಸಿನಿಮಾಗಳನ್ನು ಮಾತ್ರ ಮಾಡುತ್ತಾರಾ?

  'ಬಹುಶಃ ಅವರು ಇನ್ಮುಂದೆ ಪುರುಷ ಪ್ರಧಾನ ಸಿನಿಮಾಗಳನ್ನು ಮಾತ್ರ ಮಾಡಲು ಬದಲಾಗುತ್ತಾರೆಯೇ? ಅವರ ವೈಯಕ್ತಿಕ ಜೀವನ ಮತ್ತು ವೃತ್ತಿ ಜೀವನವನ್ನು ಹೇಗೆ ನಿಭಾಯಿಸಿಕೊಂಡು ಹೋಗುತ್ತಾರೆ. ತುಂಬಾ ಕಷ್ಟ. ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಅಭಿನಂದನೆಗಳು ವರುಣ್ ಧವನ್' ಎಂದು ವ್ಯಂಗ್ಯ ವಾಡಿದ್ದಾರೆ.

  ಮಲಯಾಳಂ ಸಿನಿಮಾದ ಚಿತ್ರೀಕರಣ ಆರಂಭಿಸಿದ ಶ್ರದ್ಧಾ ಶ್ರೀನಾಥ್ ಮಲಯಾಳಂ ಸಿನಿಮಾದ ಚಿತ್ರೀಕರಣ ಆರಂಭಿಸಿದ ಶ್ರದ್ಧಾ ಶ್ರೀನಾಥ್

  ಪುರುಷ ಪ್ರಧಾನ ವ್ಯಸ್ಥೆಯನ್ನು ಅಣಕಿಸಿದ ಶ್ರದ್ಧಾ

  ಪುರುಷ ಪ್ರಧಾನ ವ್ಯಸ್ಥೆಯನ್ನು ಅಣಕಿಸಿದ ಶ್ರದ್ಧಾ

  ಮದುವೆಯ ಬಳಿಕ ನಟಿಮಣಿಯರಿಗೆ ಎದುರಾಗುವ ಪ್ರಶ್ನೆಗಳನ್ನು ವರುಣ್ ಧವನ್ ಗೆ ಹೇಳುವ ಮೂಲಕ ಪುರುಷ ಪ್ರಧಾನ ವ್ಯವಸ್ಥೆಯನ್ನು ಅಣಕಿಸಿದ್ದಾರೆ. ನಟಿಯರು ಮದುವೆಯಾದ ಬಳಿಕ ವೃತ್ತಿ ಜೀವನ ಕೊನೆೆಯಾಯಿತು, ಗಂಡನ ಮನೆಯವರ ಅನುಮತಿ ಪಡೆಯಬೇಕು ಎನ್ನುವ ಮಾತುಗಳು ಬರುತ್ತಿವೆ. ಹಾಗಾಗಿ ವರುಣ್ ಧವನ್ ಮದುವೆಯನ್ನು ಶ್ರದ್ಧಾ ವ್ಯಂಗ್ಯವಾಡಿದ್ದಾರೆ.

  ವರುಣ್ ಮತ್ತು ನತಾಶಾ ಬಾಲ್ಯದ ಗೆಳೆಯರು

  ವರುಣ್ ಮತ್ತು ನತಾಶಾ ಬಾಲ್ಯದ ಗೆಳೆಯರು

  ವರುಣ್ ಧವನ್ ಮತ್ತು ನತಾಶಾ ದಲಾಲ್ ಇಬ್ಬರು ಬಾಲ್ಯದ ಗೆಳೆಯರು. ಇಬ್ಬರು 6ನೇ ತರಗತಿಯಲ್ಲೇ ಇದ್ದಾಗಲೇ ಸ್ನೇಹಿತರು. ಇದೇ ಸ್ನೇಹ ಪ್ರೀತಿಗೆ ತಿರುಗೆ ಅನೇಕ ವರ್ಷಗಳ ಬಳಿಕ ಹಸೆಮಣೆ ಏರಿದ್ದಾರೆ. ನತಾಶಾ ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್. ಅವರದ್ದೇ ಆದ ಸ್ವಂತ ಬ್ರ್ಯಾಂಡ್ ಹೊಂದಿದ್ದಾರೆ.

  ಬಾಲ್ಯದ ಗೆಳತಿ ನತಾಶಾ ದಲಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ವರುಣ್ ಧವನ್ಬಾಲ್ಯದ ಗೆಳತಿ ನತಾಶಾ ದಲಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ವರುಣ್ ಧವನ್

  ಮಾರ ಸಿನಿಮಾ ರಿಲೀಸ್ ಆಗಿದೆ

  ಮಾರ ಸಿನಿಮಾ ರಿಲೀಸ್ ಆಗಿದೆ

  ನಟಿ ಶ್ರದ್ಧಾ ಶ್ರೀನಾಥ್ ಸದ್ಯ ತಮಿಳು ಮತ್ತು ತೆಲುಗು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಮಾರ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆರ್. ಮಾಧವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರಕ್ಕೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ.

  English summary
  Kannada actress Shraddha Srinath sarcastic jokes on Varun Dhawan after he got married.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X