5 ವರ್ಷದ ಹಿಂದಿನ ಫೋಟೋದ ಕುತೂಹಲಕರ ವಿಷಯ ಬಿಚ್ಚಿಟ್ಟ ಶ್ರದ್ಧಾ

ಬೆಳಗ್ಗೆ ಎದ್ದ ತಕ್ಷಣ ಕೆಲಸಕ್ಕೆ ಅಂತ ಓಡುವ ಅನೇಕರು ವ್ಯಾಯಾಮವನ್ನು ಮರೆತುಬಿಡುತ್ತಾರೆ. ಎಷ್ಟೋ ಜನರು ದಿನದ 24 ಗಂಟೆಗಳಲ್ಲಿ ಅರ್ಧ ಗಂಟೆಯನ್ನೂ ತಮ್ಮ ದೇಹಕ್ಕಾಗಿ ನೀಡುವುದಿಲ್ಲ. ಇದೇ ರೀತಿಯ ಮನಸ್ಥಿತಿ ನಟಿ ಶ್ರದ್ಧಾ ಶ್ರೀನಾಥ್ ಕೂಡ ಹೊಂದಿದ್ದರು.

'ಯೂ ಟರ್ನ್' ಸಿನಿಮಾದಿಂದ ಕೆರಿಯರ್ ಶುರು ಮಾಡಿ ಈಗ ಟಾಲಿವುಡ್, ಕಾಲಿವುಡ್, ಬಾಲಿವುಡ್ ಚಿತ್ರರಂಗದಲ್ಲಿ ಶ್ರದ್ಧಾ ಶ್ರೀನಾಥ್ ನಟಿಸುತ್ತಿದ್ದಾರೆ. ಈ ಅವಕಾಶಗಳಿಗೆ ಕಾರಣ ಅವರ ನಟನ ಸಾಮರ್ಥ್ಯದ ಜೊತೆಗೆ ಅಂದ ಕೂಡ ಆಗಿದೆ. ತಮ್ಮ ಸೌಂದರ್ಯದ ಮೂಲಕ ಅನೇಕ ಅಭಿಮಾನಿಗಳನ್ನು ಆಕೆ ಹೊಂದಿದ್ದಾರೆ.

Recommended Video

ಶ್ರದ್ಧಾ ಮಕ್ಕಳು ಬೇಡ ಎನ್ನಲು ಇಲ್ಲಿದೆ ಕಾರಣ..? | Shraddha Srinath | FILMIBEAT KANNADA

ಈಗ ತೆಳಗೆ, ಸಖತ್ ಕ್ಯೂಟ್ ಆಗಿ ಇರುವ ಶ್ರದ್ಧಾ ಶ್ರೀನಾಥ್ ಐದು ವರ್ಷಗಳ ಹಿಂದೆ ತುಂಬ ದಪ್ಪಗಿದ್ದರು. ಆ ಫೋಟೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಶ್ರದ್ಧಾ ಶ್ರೀನಾಥ್ ಹಳೆಯ ನೆನಪುಗಳ ಬಗ್ಗೆ ಹೇಳಿಕೊಂಡಿದ್ದಾರೆ. ಎರಡು ಫೋಟೋಗಳು ಮೂಲಕ ಆಗ ಮತ್ತು ಈಗ ಅವರು ಹೇಗಿದ್ದಾರೆ ಎಂದು ತಿಳಿಸಿದ್ದಾರೆ.

ಶ್ರದ್ಧಾ ಶ್ರೀನಾಥ್ ತುಂಬ ದಪ್ಪಗಿದ್ದರು

ಶ್ರದ್ಧಾ ಶ್ರೀನಾಥ್ ತುಂಬ ದಪ್ಪಗಿದ್ದರು

2014.. ಶ್ರದ್ಧಾ ಶ್ರೀನಾಥ್ ಎಲ್ ಎಲ್ ಬಿ ಮುಗಿಸಿ, ಲಾಯರ್ ಆಗಿ ಕೆಲಸ ಮಾಡುತ್ತಿದ್ದರು. ಸಂಬಳ ಸಿಕ್ಕ ಮೇಲೆ ಶ್ರದ್ಧಾ ಶ್ರೀನಾಥ್ ಹೆಚ್ಚು ಖರ್ಚು ಮಾಡಲು ಶುರು ಮಾಡಿದರು. ಬಟ್ಟೆ, ಊಟ, ತಿಂಡಿ, ಸಿನಿಮಾ, ಶಾಪಿಂಗ್ ಹೀಗೆ ಸಿಕ್ಕಾಪಟ್ಟೆ ಖರ್ಚು ಮಾಡುತ್ತಿದ್ದರು. ಅದರಲ್ಲಿಯೂ ತಿನ್ನುವ ವಿಷಯದ ಬಗ್ಗೆ ತಲೆ ಕಡಿಸಿಕೊಳ್ಳದ ಶ್ರದ್ಧಾ ಇಷ್ಟಪಟ್ಟ ಎಲ್ಲ ತಿಂಡಿಗಳು ರುಚಿ ನೋಡುತ್ತಿದ್ದರು. ಇದರ ಪರಿಣಾಮ ಶ್ರದ್ಧಾ ತುಂಬ ದಪ್ಪ ಆದರು.

ಫೋಟೋ ತೆಗೆದ ಕೆಲವೇ ದಿನಗಳಲ್ಲಿ ವ್ಯಾಯಾಮ ಶುರು

ಫೋಟೋ ತೆಗೆದ ಕೆಲವೇ ದಿನಗಳಲ್ಲಿ ವ್ಯಾಯಾಮ ಶುರು

ಶ್ರದ್ಧಾ ಶ್ರೀನಾಥ್ ತೂಕದ ಬಗ್ಗೆ ಎಂದಿಗೂ ತಲೆ ಕೆಡಿಸಿಕೊಂಡಿರಲಿಲ್ಲ, ವ್ಯಾಯಾಮ ಮಾಡುವ ಮನಸ್ಸು ಮಾಡಿರಲಿಲ್ಲ. ಎಷ್ಟೇ ದಪ್ಪದಿದ್ದರೂ, ತನ್ನ ಅಂದ ಯಾರಿಗೂ ಕಡಿಮೆ ಇಲ್ಲ ಎನ್ನುವುದು ಶ್ರದ್ಧಾ ಭಾವನೆ ಆಗಿತ್ತು. ಆದರೆ, ನಂತರ ತಮ್ಮ ದೇಹದ ಬಗ್ಗೆ ಕಾಳಜಿ ತೆಗೆದುಕೊಳ್ಳಲು ಶುರು ಮಾಡಿದರು. ಸದ್ಯ, ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋ 2014ರಲ್ಲಿ ಕ್ಲಿಕ್ಕಿಸಿದ್ದು. ಆ ಫೋಟೋದಲ್ಲಿ ಶ್ರದ್ಧಾ ತುಂಬ ದಪ್ಪ ಕಾಣುತ್ತಿದ್ದಾರೆ. ಈ ಫೋಟೋ ತೆಗೆದ ಕೆಲವೇ ದಿನಗಳಲ್ಲಿ ಅವರು ವ್ಯಾಯಾಮ ಶುರು ಮಾಡಿದರು.

40 ನಿಮಿಷ ಬ್ರೇಕ್ ಇಲ್ಲದೆ ಓಡುತ್ತಾರೆ

40 ನಿಮಿಷ ಬ್ರೇಕ್ ಇಲ್ಲದೆ ಓಡುತ್ತಾರೆ

ವ್ಯಾಯಾಮ ಪ್ರಾರಂಭ ಮಾಡಿದ ಶ್ರದ್ಧಾ ತಮ್ಮ ಅಪಾರ್ಟ್ ಮೆಂಟಿನ ಜಿಮ್ ನಲ್ಲಿ ಬೆವರಿಳಿಸುತ್ತಿದ್ದರು. ತೂಕ ಇದ್ದ ಕಾರಣ ಹೆಚ್ಚು ಓಡಲು ಆಗುತ್ತಿರಲಿಲ್ಲ. ಮೊದಲು 5 ನಿಮಷ ಓಡಲು ಶುರು ಮಾಡಿದ ಅವರು, ನಂತರ 15 ನಿಮಿಷ ಓಡಿದರು. ಹಾಗೆ ಅಭ್ಯಾಸ ಮಾಡಿ ಮಾಡಿ ಈಗ ಯಾವುದೇ ಬ್ರೇಕ್ ತೆಗೆದುಕೊಳ್ಳದೆ 40 ನಿಮಿಷ ಓಡುತ್ತಾರೆ. ಅಂದಿಗಿಂತ ಇಂದು 18 ಕೆಜಿ ಕಡಿಮೆ ಮಾಡಿಕೊಂಡಿದ್ದಾರೆ.

ಬೆಳಗಿನ ಜಾವ 4.30ಕ್ಕೆ ಕೆಲಸ ಪ್ರಾರಂಭ

ಬೆಳಗಿನ ಜಾವ 4.30ಕ್ಕೆ ಕೆಲಸ ಪ್ರಾರಂಭ

2014ರಲ್ಲಿ ಸೋಮಾರಿಯಾಗಿದ್ದ ಶ್ರದ್ಧಾ ಶ್ರೀನಾಥ್ 2019ರಲ್ಲಿ ಬದಲಾಗಿದ್ದಾರೆ. ಚಿತ್ರರಂಗಕ್ಕೆ ಬಂದ ಮೇಲೆ ಅವರ ಮೇಲೆ ಇರುವ ಜವಾಬ್ದಾರಿ ಜಾಸ್ತಿಯಾಗಿದೆ. ಬೆಳಗಿನ ಜಾವ 4.30ಕ್ಕೆ ಎದ್ದು ಕೆಲಸ ಪ್ರಾರಂಭ ಮಾಡುತ್ತಾರೆ. ಶ್ರದ್ಧಾಗೆ ಈಗಲೂ ಜಿಮ್ ಅಂದ್ರೆ ಅಷ್ಟೊಂದು ಇಷ್ಟ ಇಲ್ಲ. ಆದರೆ, ಫಿಟ್ ಆಗಿ ಇರಲು ವ್ಯಾಯಾಮ ಮಾಡುತ್ತಾರೆ. ಇನ್ಸ್ಟಾಗ್ರಾಮ್ ಫೋಟೋಗಳ ಮೂಲಕ ತಮ್ಮ ಫಾಲೋವರ್ಸ್ ಗೂ ಸಹ ಫಿಟ್ ಆಗಿರಿ ಎಂದು ಸಲಹೆ ನೀಡಿದರು.

More from Filmibeat

English summary
Actress Shraddha Srinath shared her 5 years old photo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X