For Quick Alerts
  ALLOW NOTIFICATIONS  
  For Daily Alerts

  ಋತುಚಕ್ರವಾದಾಗ ಪೂಜೆಯಲ್ಲಿ ಭಾಗಿಯಾಗಿದ್ದೆ: ನಟಿ ಶ್ರದ್ಧಾ ಶ್ರೀನಾಥ್ ಬೋಲ್ಡ್ ಹೇಳಿಕೆ

  |

  ಸ್ಯಾಂಡಲ್ ವುಡ್ ನ ನಟಿ ಶ್ರದ್ಧಾ ಶ್ರೀನಾಥ್ ಸದ್ಯ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ನೇರ ಮಾತುಗಳ ಮೂಲಕ ,ಪ್ರೇಕ್ಷಕರ ಮನಗೆದ್ದಿರುವ ಶ್ರದ್ಧಾ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಬೋಲ್ಡ್ ಹೇಳಿಕೆಯೊಂದನ್ನು ಪೋಸ್ಟ್ ಮಾಡಿದ್ದಾರೆ. 14ನೇ ವರ್ಷದಲ್ಲಿಯೆ ಸ್ತ್ರೀವಾದಿಯಾದ ಕಥೆಯನ್ನು ಬಹಿರಂಗ ಪಡಿಸಿದ್ದಾರೆ.

  ಶ್ರದ್ಧಾ ಮಕ್ಕಳು ಬೇಡ ಎನ್ನಲು ಇಲ್ಲಿದೆ ಕಾರಣ..? | Shraddha Srinath | FILMIBEAT KANNADA

  ಸಾಮಾನ್ಯವಾಗಿ ಖುತುಚಕ್ರದ ಬಗ್ಗೆ ಮಾತನಾಡಲು ಅನೇಕ ಮಹಿಳೆಯರು ಹಿಂಜರಿಯುತ್ತಾರೆ. ಆದರೆ ಶ್ರದ್ಧಾ ಶ್ರೀನಾಥ್ ಮುಟ್ಟಾದಾಗಲೂ ಪೂಜೆಯಲ್ಲಿ ಭಾಗಿಯಾಗಿದ್ದೆ ಎಂದು ಧೈರ್ಯವಾಗಿ, ಓಪನ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. "ಯು ಟರ್ನ್" ನಟಿಯ ಈ ಪೋಸ್ಟ್ ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮುಂದೆ ಓದಿ..

  ಶ್ರದ್ಧಾ ಇನ್ಸ್ಟಾಗ್ರಾಮ್ ನಲ್ಲಿ ಮಾಡಿರುವ ಪೋಸ್ಟ್

  ಶ್ರದ್ಧಾ ಇನ್ಸ್ಟಾಗ್ರಾಮ್ ನಲ್ಲಿ ಮಾಡಿರುವ ಪೋಸ್ಟ್

  ಋತುಚಕ್ರದ ಬಗ್ಗೆ ನಟಿ ಶ್ರದ್ಧಾ ಶ್ರೀನಾಥ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ "ನನಗೆ ಆಗ 14 ವರ್ಷ. ಕುಟುಂಬದ ಪೂಜೆಯಲ್ಲಿ ಭಾಗಿಯಾಗಿದ್ದೆ. ನನಗಾಗ ಪೀರಿಯಡ್ಸ್ ಆಯಿತು. ಆಗ ಅಮ್ಮ ಜೊತೆಯಲ್ಲಿ ಇರಲಿಲ್ಲ. ನನ್ನ ಪಕ್ಕದಲ್ಲೇ ಕುಳಿತಿದ್ದ ಚಿಕ್ಕಮ್ಮನಿಗೆ ಈ ವಿಚಾರ ತಿಳಿಸಿದೆ. ನಾನು ಆಗ ಸ್ಯಾನಿಟರಿ ಪ್ಯಾಡ್ ಧರಿಸಿರಲಿಲ್ಲ. ಎಂದಿದ್ದಾರೆ.

  ನಾನು 14ನೇ ವಯಸ್ಸಿನಲ್ಲಿ ಸ್ತ್ರೀವಾದಿಯಾದೆ

  ನಾನು 14ನೇ ವಯಸ್ಸಿನಲ್ಲಿ ಸ್ತ್ರೀವಾದಿಯಾದೆ

  "ಪಕ್ಕದಲ್ಲಿಯೆ ಮತ್ತೋರ್ವ ಒಳ್ಳೆಯ ಆಂಟಿ ಕುಳಿತ್ತಿದ್ದರು. ನಾನು ಚಿಂತೆಯಲ್ಲಿ ಆಂಟಿಗೆ ಹೇಳದ ಮಾತನ್ನು ಕೇಳಿಸಿಕೊಂಡರು. ಮತ್ತು ಅವರು ನನಗೆ ಪರ್ವಾಗಿಲ್ಲ ಚಿನ್ನ ಎಂದು ನಗುತ್ತ ಹೇಳಿದರು. ದೇವರು ಕ್ಷಮಿಸುತ್ತಾನೆ, ಚಿಂತಿಸಬೇಡ ಮಗು ಎಂದರು. ಆ ದಿನದಿಂದ ನಾನು ಮಹಿಳಾವಾದಿಯಾದೆ. ಮುಟ್ಟಿನ ಬಗ್ಗೆ ತಪ್ಪು ಕಲ್ಪನೆಯನ್ನು ತೆಗೆದು ಹಾಕಿದೆ" ಎಂದು ದೀರ್ಘವಾಗಿ ಪೋಸ್ಟ್ ಮಾಡಿದ್ದಾರೆ.

  ಶ್ರದ್ಧಾ ಸಿನಿಮಾ ಜರ್ನಿ

  ಶ್ರದ್ಧಾ ಸಿನಿಮಾ ಜರ್ನಿ

  ಕನ್ನಡದ ಯು ಟರ್ನ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಶ್ರದ್ಧಾ ಶ್ರೀನಾಥ್ ಮೊದಲ ಸಿನಿಮಾದಲ್ಲಿಯೇ ಭರ್ಜರಿ ಯಶಸ್ಸು ಪಡೆಯುತ್ತಾರೆ. ಆ ನಂತರ ತೆಲುಗು ಮತ್ತು ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಾರೆ. ಬಾಲಿವುಡ್ ನಲ್ಲಿಯೂ ಶ್ರದ್ಧಾ ಅಭಿನಯಿಸಿದ್ದಾರೆ. ವಿಕ್ರಂ ವೇದ, ಜೆರ್ಸಿ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

  ಸದ್ಯ ಶ್ರದ್ಧಾ ಬಳಿ ಇರುವ ಸಿನಿಮಾಗಳು

  ಸದ್ಯ ಶ್ರದ್ಧಾ ಬಳಿ ಇರುವ ಸಿನಿಮಾಗಳು

  ಸದ್ಯ ಶ್ರದ್ಧಾ ಶ್ರೀನಾಥ್ ಬಳಿ ಸಾಕಷ್ಟು ಸಿನಿಮಾಗಳಿವೆ. ಕನ್ನಡದಲ್ಲಿ ನೀನಾಸಂ ಸತೀಶ್ ಅಭಿನಯದ ಗೋದ್ರಾ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಇನ್ನೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜೊತೆ ಶ್ರದ್ಧಾ ತೆರೆಹಂಚಿಕೊಳ್ಳುತ್ತಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್ ಸಿನಿಮಾದಗಲ್ಲಿ ಶ್ರದ್ಧಾ ಶ್ರೀನಾಥ್ ನಾಯಕಿ. ಇನ್ನೂ ರಿಷಭ್ ಶೆಟ್ಟಿ ನಿರ್ದೇಶನದ ರುದ್ರಪ್ರಯಾಗ ಸಿನಿಮಾಗೂ ಶ್ರದ್ಧಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

  English summary
  Sandalwood Actress shraddha srinath shares childhood incident about she got periods at the family pooje.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X