ಸಾಯಿ ಕುಮಾರ್ ಮಗನಿಗೆ 'ಜೋಡಿ'ಯಾದ ಶ್ರದ್ಧಾ ಶ್ರೀನಾಥ್
ಬಹುಭಾಷ ನಟ ಸಾಯಿಕುಮಾರ್ ಪುತ್ರ ಆದಿ ಸಾಯಿಕುಮಾರ್ ಜೊತೆ ಇರುವ ನಟಿ ಶ್ರದ್ದಾ ಶ್ರೀನಾಥ್ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾಗಂತ ಅಚ್ಚರಿ ಪಡಬೇಡಿ ಸಾಯಿಕುಮಾರ್ ಮಗ ಆದಿ ಅಭಿನಯದ 'ಜೋಡಿ' ತೆಲುಗು ಸಿನಿಮಾದಲ್ಲಿ ನಟಿ ಶ್ರದ್ದಾ ಶ್ರೀನಾಥ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೊದಲ ಲುಕ್ ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಹೌದು, ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಇಬ್ಬರು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಫಸ್ಟ್ ಲುಕ್ ಮೂಲಕವೇ ಸದ್ದು ಮಾಡುತ್ತಿರುವ 'ಜೋಡಿ' ಸಿನಿಮಾಗೆ ಯುವ ಪ್ರತಿಭೆ ವಿಶ್ವನಾಥ್ ಅಕ್ಷನ್ ಕಟ್ ಹೇಳುತ್ತಿದ್ದಾರೆ. ಇದೊಂದು ರೋಮ್ಯಾಂಟಿಕ್ ಸಿನಿಮಾವಾಗಿದ್ದು ಚಿತ್ರದ ಬಗ್ಗೆ ಹೆಚ್ಚೇನು ಬಿಟ್ಟು ಕೊಟ್ಟಿಲ್ಲ ಚಿತ್ರತಂಡ.
ನಟಿ ಶ್ರದ್ಧಾ ಶ್ರೀನಾಥ್ ಅಭಿನಯದ ಮೊದಲ ತೆಲುಗು ಸಿನಿಮಾ 'ಜೆರ್ಸಿ' ರಿಲೀಸ್ ಗೆ ರೆಡಿಯಾಗಿದೆ. ಈಗ ಇದರ ಬೆನ್ನಲ್ಲೆ ಮತ್ತೊಂದು ಟಾಲಿವುಡ್ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಡುವ ಮೂಲಕ ಶ್ರದ್ಧಾ ತೆಲುಗು ಚಿತ್ರರಂಗದಲ್ಲೂ ಬ್ಯುಸಿಯಾಗುತ್ತಿದ್ದಾರೆ.

ಶ್ರದ್ಧಾ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು ಮತ್ತು ತೆಲುಗು, ಮಲಯಾಳಂ ಚಿತ್ರರಂಗದಲ್ಲೂ ಮಿಂಚುತ್ತಿದ್ದಾರೆ. ಇತ್ತೀಚಿಗಷ್ಟೆ ಶ್ರದ್ಧಾ ಅಭಿನಯದ ಮೊದಲ ಬಾಲಿವುಡ್ ಸಿನಿಮಾ 'ಮಿಲನ್ ಟಾಕೀಸ್' ರಿಲೀಸ್ ಆಗಿದೆ. ಅಲ್ಲದೆ ಶಿವಣ್ಣ ಜೊತೆ ನಾಯಕಿಯಾಗಿ ಮಿಂಚಿರುವ ಕನ್ನಡದ 'ರಸ್ತುಂ' ಸಿನಿಮಾ ಕೂಡ ರಿಲೀಸ್ ಗೆ ರೆಡಿಯಾಗಿದೆ.


Click it and Unblock the Notifications











