»   » ಸೌತ್ ಫಿಲ್ಮ್ ಫೇರ್ ಕಾರ್ಯಕ್ರಮದಲ್ಲಿ ಕುಣಿಯಲು ಅನನ್ಯ ಟೀಚರ್ ರೆಡಿ

ಸೌತ್ ಫಿಲ್ಮ್ ಫೇರ್ ಕಾರ್ಯಕ್ರಮದಲ್ಲಿ ಕುಣಿಯಲು ಅನನ್ಯ ಟೀಚರ್ ರೆಡಿ

Posted By:
Subscribe to Filmibeat Kannada

2017ರ ಸೌತ್ ಫಿಲ್ಮ್ ಫೇರ್ ಪ್ರಶಸ್ತಿ ಕಾರ್ಯಕ್ರಮ ಇದೇ ಜೂನ್ 17ಕ್ಕೆ ನಡೆಯಲಿದೆ. ಈ ಬಾರಿಯ ಕಾರ್ಯಕ್ರಮದಲ್ಲಿ ಕನ್ನಡದ ನಟಿಮಣಿಯರು ಸಖತ್ ಆಗಿ ಮಿಂಚುವುದಕ್ಕೆ ಸಜ್ಜಾಗಿದ್ದಾರೆ. ರಾಗಿಣಿ ದ್ವಿವೇದಿ ಕಾರ್ಯಕ್ರಮದ ನಿರೂಪಕಿಯಾಗಿಲಿದ್ದು, ನಟಿ ಶ್ರದ್ಧಾ ಶ್ರೀನಾಥ್ ವೇದಿಕೆ ಮೇಲೆ ಹೆಜ್ಜೆ ಹಾಕಲಿದ್ದಾರೆ.

'ಯೂ ಟರ್ನ್' ಹುಡುಗಿ ನಟಿ ಶ್ರದ್ಧಾ ಶ್ರೀನಾಥ್ ಅದ್ದೂರಿ ಕಾರ್ಯಕ್ರಮದಲ್ಲಿ ಕುಣಿಯುವುದಕ್ಕೆ ಸಜ್ಜಾಗಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದ ಗಣ್ಯತಿಗಣ್ಯರ ಮುಂದೆ

Shraddha Srinath will Dance in South Filmfare Awards

ಅನನ್ಯ ಟೀಚರ್ ಸೊಂಟ ಬಳುಕಿಸಲಿದ್ದಾರೆ. ಇದರ ಜೊತೆಗೆ 'ಯೂಟರ್ನ್' ಸಿನಿಮಾದಿಂದ ಅತ್ಯುತ್ತಮ ನಾಯಕಿಯಾಗಿ ಶ್ರದ್ಧಾ ನಾಮಾಂಕಿತರಾಗಿದ್ದಾರೆ.

ಸೌತ್ ಫಿಲ್ಮ್ ಫೇರ್ ಕಾರ್ಯಕ್ರಮದಲ್ಲಿ ಭಾಗಿಯಾಗುವ ಬಗ್ಗೆ ತಮ್ಮ ಸಂತಸ ಹಂಚಿಕೊಂಡಿರುವ ಶ್ರದ್ಧಾ ''ನಾನು ಫಿಲ್ಮ್ ಫೇರ್ ಅರ್ವಾಡ್ ಕಾರ್ಯಕ್ರಮಗಳನ್ನು ನೋಡುತ್ತಾ ಬೆಳೆದ ಹುಡುಗಿ, ಇಂದು ನನ್ನ ಕನಸು ಇಂದು ನನಸಾಗಿದೆ'' ಅಂತ ಹೇಳಿದ್ದಾರೆ.

Shraddha Srinath will Dance in South Filmfare Awards

ಶ್ರದ್ಧಾ ಶ್ರೀನಾಥ್ ಕನ್ನಡ ಚಿತ್ರರಂಗದ ಮಾತ್ರವಲ್ಲದೆ ತಮಿಳು ಚಿತ್ರರಂಗದಲ್ಲಿ ಸಹ ಗಮನ ಸೆಳೆದಿರುವ ನಟಿ. ಹೀಗೀರುವಾಗ ಶ್ರದ್ಧಾ ಈ ಬಾರಿಯ ಸೌತ್ ಫಿಲ್ಮ್ ಫೇರ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮತ್ತಷ್ಟು ಶೈನ್ ಆಗಲಿದ್ದಾರೆ.

English summary
Kannada Actress Shraddha Srinath to shake her legs in South Filmfare Awards 2017.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada