For Quick Alerts
  ALLOW NOTIFICATIONS  
  For Daily Alerts

  'ತಲಾ' ಅಜಿತ್ ಚಿತ್ರದಲ್ಲಿ ಕನ್ನಡದ ಶ್ರದ್ಧಾ ಶ್ರೀನಾಥ್

  |
  'ತಲಾ' ಅಜಿತ್ ಚಿತ್ರದಲ್ಲಿ ಕನ್ನಡದ ಶ್ರದ್ಧಾ ಶ್ರೀನಾಥ್..! | FILMIBEAT KANNADA

  ಯು-ಟರ್ನ್ ಹುಡುಗಿ ಶ್ರದ್ಧಾ ಶ್ರೀನಾಥ್ ಕನ್ನಡಕ್ಕಿಂತ ಪರಭಾಷೆಯಲ್ಲೇ ಹೆಚ್ಚು ಡಿಮ್ಯಾಂಡ್ ಹೊಂದುತ್ತಿದ್ದಾರೆ. ಯು-ಟರ್ನ್, ಉರ್ವಿ, ಆಪರೇಷನ್ ಅಲಮೇಲಮ್ಮ ಚಿತ್ರಗಳ ಬಳಿಕ ನಾಯಕಿಯಾಗಿ ಅಭಿನಯಿಸಿದ ಯಾವ ಕನ್ನಡ ಸಿನಿಮಾನೂ ರಿಲೀಸ್ ಆಗಿಲ್ಲ.

  ದಿ ವಿಲನ್, ಮುಂಗಾರು ಮಳೆ-2 ಚಿತ್ರಗಳಲ್ಲಿ ಅತಿಥಿ ಪಾತ್ರ ಮಾಡಿದ್ದರು ಅಷ್ಟೇ. ಆದ್ರೆ, ಶಿವಣ್ಣ ಅಭಿನಯದ ರುಸ್ತುಂ, ಸತೀಶ್ ನೀನಾಸಂ ಜೊತೆ ಗೋದ್ರಾ ಚಿತ್ರಗಳಲ್ಲಿ ನಾಯಕಿಯಾಗಿದ್ದಾರೆ.

  ಆ ಕಡೆ ತೆಲುಗು ಮತ್ತು ತಮಿಳಿನಲ್ಲಿ ಒಂದರ ಹಿಂದೆ ಒಂದರಂತೆ ಅವಕಾಶಗಳು ಬರುತ್ತಲೇ ಇದೆ. ವಿಕ್ರಂ ವೇದಂ, ರಿಚ್ಚಿ, ಇವನ್ ತಂತೀರನ್ ಅಂತಹ ಸಿನಿಮಾ ಮಾಡಿದ್ದ ಶ್ರದ್ಧಾ ಈಗ ತಲಾ ಅಜಿತ್ ಕುಮಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಯಾವ ಸಿನಿಮಾ? ಮುಂದೆ ಓದಿ....

  ತಲಾ ಮುಂದಿನ ಸಿನಿಮಾದಲ್ಲಿ ಶ್ರದ್ಧಾ

  ತಲಾ ಮುಂದಿನ ಸಿನಿಮಾದಲ್ಲಿ ಶ್ರದ್ಧಾ

  'ವಿಶ್ವಾಸಂ' ಸೂಪರ್ ಸಕ್ಸಸ್ ಬಳಿಕ ಅಜಿತ್ ಅಭಿನಯಿಸುತ್ತಿರುವ ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್ ನಟಿಸುತ್ತಿದ್ದಾರೆ. ಇದು ಹಿಂದಿಯ 'ಪಿಂಕ್' ಚಿತ್ರದ ರೀಮೇಕ್ ಆಗಿದ್ದು, ಪ್ರಮುಖ ಪಾತ್ರದಲ್ಲಿ ಅಜಿತ್ ಅಭಿನಯಿಸುತ್ತಿದ್ದಾರೆ.

  ಕನ್ನಡದ ನಟರಿಗೆ ಶ್ರದ್ಧಾ ಶ್ರೀನಾಥ್ ಕೊಟ್ಟ ಸಲಹೆ ಇದು

  ತಾಪ್ಸಿ ಪಾತ್ರದಲ್ಲಿ ಶ್ರದ್ಧಾ

  ತಾಪ್ಸಿ ಪಾತ್ರದಲ್ಲಿ ಶ್ರದ್ಧಾ

  ಪಿಂಕ್ ಚಿತ್ರದಲ್ಲಿ ತಾಪ್ಸಿ ಪೆನ್ನು ಬಣ್ಣ ಹಚ್ಚಿದ್ದ ಪಾತ್ರದಲ್ಲಿ ಶ್ರದ್ಧಾ ಶ್ರೀನಾಥ್ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಅಮಿತಾಬ್ ಬಚ್ಚನ್, ತಾಪ್ಸಿ, ಕೃತಿ ಕುಲಾರಿ, ಆಂಡ್ರಿಯಾ, ವಿಜಯ್ ವರ್ಮಾ, ಅಂಗಾದ್ ಬೇಡಿ ಸೇರಿದಂತೆ ಹಲವರು ನಟಿಸಿದ್ದರು.

  ಶ್ರದ್ಧಾ ಶ್ರೀನಾಥ್ ಹಿಂದಿ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ

  ತಮಿಳಿಗೆ ವಿದ್ಯಾ ಬಾಲನ್

  ತಮಿಳಿಗೆ ವಿದ್ಯಾ ಬಾಲನ್

  ಪಿಂಕ್ ತಮಿಳು ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಬಾಲಿವುಡ್ ನಟಿ ವಿದ್ಯಾ ಬಾಲನ್ ನಟಿಸುತ್ತಿದ್ದಾರೆ. ಇದು ವಿದ್ಯಾ ಬಾಲನ್ ಅವರ ಚೊಚ್ಚಲ ತಮಿಳು ಸಿನಿಮಾ. ಶ್ರೀದೇವಿ ಪತಿ ಬೋನಿ ಕಪೂರ್ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದು, ಎಚ್ ವಿನೋದ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ತೆಲುಗು ನಟ ನಾನಿ ಹೊಸ ಚಿತ್ರಕ್ಕೆ ಕನ್ನಡ ನಟಿ ನಾಯಕಿ

  ಸೌತ್ ನಲ್ಲಿ ಶ್ರದ್ಧಾ ಕಮಾಲ್

  ಸೌತ್ ನಲ್ಲಿ ಶ್ರದ್ಧಾ ಕಮಾಲ್

  ಕಾಟ್ರು ವೆಲೈಯಾಡು ಚಿತ್ರದ ಮೂಲಕ ಕಾಲಿವುಡ್ ಪ್ರವೇಶ ಮಾಡಿದ ಶ್ರದ್ಧಾ ಶ್ರೀನಾಥ್, ವಿಕ್ರವೇದಂ, ಇವನ್ ತಂತೀರನ್, ರಿಚ್ಚಿ, ಸಿನಿಮಾದಲ್ಲಿ ನಟಿಸಿದ್ದರು. ಈಗ ಕೆ-13, ಎಕೆ-59, ಮಾರಾ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನೊಂದೆಡೆ ತೆಲುಗಿನಲ್ಲಿ ನಾನಿ ಜೊತೆ 'ಜೆರ್ಸಿ' ಸಿನಿಮಾ ಮಾಡ್ತಿದ್ದಾರೆ.

  English summary
  shraddha srinath has announced that she will star in AK-59 with superstar Ajith Kumar. The film is a remake of Pink.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X