For Quick Alerts
  ALLOW NOTIFICATIONS  
  For Daily Alerts

  ಸಮಂತಾ ಬಗ್ಗೆ ಶ್ರದ್ಧಾ ಶ್ರೀನಾಥ್ ಅಚ್ಚರಿ ಕಾಮೆಂಟ್, ತೆಲುಗು ಫ್ಯಾನ್ಸ್ ಫುಲ್ ಗರಂ!

  |
  ಸಮಂತಾ ಅಕ್ಕಿನೇನಿ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಶ್ರದ್ಧಾ ಶ್ರೀನಾಥ್

  ಕನ್ನಡದ ನಟಿಯರು ಟಾಲಿವುಡ್ ಚಿತ್ರರಂಗದಲ್ಲಿ ಮಿಂಚುತ್ತಿರುವುದು ಹೆಚ್ಚಾಗುತ್ತಿದೆ. ನಟಿ ರಶ್ಮಿಕಾ ಮಂದಣ್ಣ ನಂತರ ಶ್ರದ್ಧಾ ಶ್ರೀನಾಥ್ ಕೂಡ ತೆಲುಗು ಚಿತ್ರರಂಗದಲ್ಲಿ ಖಾತೆ ತೆರೆದಿದ್ದಾರೆ.

  ನಟ ನಾನಿ ಜೊತೆಗೆ 'ಜರ್ಸಿ' ಸಿನಿಮಾ ಮಾಡುವ ಮೂಲಕ ಶ್ರದ್ಧಾ ಶ್ರೀನಾಥ್ ಟಾಲಿವುಡ್ ಪ್ರವೇಶ ಮಾಡಿದ್ದಾರೆ. ಆದರೆ, ಈ ನಟಿ ಮೊದಲ ಹೆಜ್ಜೆಯಲ್ಲಿಯೇ ಎಡವಟ್ಟು ಮಾಡಿಕೊಂಡಿದ್ದಾರೆ. ನಟಿ ಸಮಂತಾ ಬಗ್ಗೆ ಶ್ರದ್ಧಾ ನೀಡಿರುವ ಹೇಳಿಕೆ ಇದೀಗ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

  ಸಾಯಿ ಕುಮಾರ್ ಮಗನಿಗೆ 'ಜೋಡಿ'ಯಾದ ಶ್ರದ್ಧಾ ಶ್ರೀನಾಥ್ ಸಾಯಿ ಕುಮಾರ್ ಮಗನಿಗೆ 'ಜೋಡಿ'ಯಾದ ಶ್ರದ್ಧಾ ಶ್ರೀನಾಥ್

  'ಜರ್ಸಿ' ಸಿನಿಮಾದ ಪ್ರಚಾರದ ಸಮಯದಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಮಾಧ್ಯಮದ ಪ್ರಶ್ನೆಗೆ ಉತ್ತರ ನೀಡಿದ ಶ್ರದ್ಧಾ ಈಗ ಸಮಂತಾ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದ್ದಾರೆ. ಮುಂದೆ ಓದಿ....

  ಶ್ರದ್ಧಾಗೆ 'ಯೂ ಟರ್ನ್' ಬಗ್ಗೆ ಪ್ರಶ್ನೆ

  ಶ್ರದ್ಧಾಗೆ 'ಯೂ ಟರ್ನ್' ಬಗ್ಗೆ ಪ್ರಶ್ನೆ

  ನಟಿ ಶ್ರದ್ಧಾ 'ಜರ್ಸಿ' ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ನಡೆದ ಸಂದರ್ಶನದಲ್ಲಿ 'ಯೂ ಟರ್ನ್' ಸಿನಿಮಾದ ಬಗ್ಗೆ ಪ್ರಶ್ನೆಯೊಂದು ಬಂತು. ಕನ್ನಡದ 'ಯೂ ಟರ್ನ್' ತೆಲುಗು ಹಾಗೂ ತಮಿಳಿನಲ್ಲಿ ರಿಮೇಕ್ ಆಗಿತ್ತು. ಆ ಚಿತ್ರದಲ್ಲಿ ಸಮಂತಾ ಕಾಣಿಸಿಕೊಂಡಿದ್ದರು.

  ಸಮಂತಾ ನಟನೆ ಇಷ್ಟ ಆಗಲಿಲ್ಲ

  ಸಮಂತಾ ನಟನೆ ಇಷ್ಟ ಆಗಲಿಲ್ಲ

  ನಿಮ್ಮ 'ಯೂ ಟರ್ನ್' ಸಿನಿಮಾದ ರಿಮೇಕ್ ನಲ್ಲಿ ಸಮಂತಾ ಅಕ್ಕಿನೇನಿ ಕಾಣಿಸಿಕೊಂಡಿದ್ದರು. ಎಂದು ಅದರ ಬಗ್ಗೆ ಸಂದರ್ಶನದಲ್ಲಿ ಪ್ರಶ್ನೆ ಮಾಡಲಾಯಿತು. ಈ ಬಗ್ಗೆ ಮಾತಾನಾಡಿದ ಶ್ರದ್ಧಾ ಶ್ರೀನಾಥ್ ತಮ್ಮ ಮಾತುಗಳ ಮೂಲಕ 'ಯೂ ಟರ್ನ್' ಸಿನಿಮಾದಲ್ಲಿ ಸಮಂತಾ ನಟಿಸಿದ್ದು ನನಗೆ ಇಷ್ಟ ಆಗಲಿಲ್ಲ ಎಂದರು.

  ತೆಲುಗು ನಟ ನಾನಿ ಹೊಸ ಚಿತ್ರಕ್ಕೆ ಕನ್ನಡ ನಟಿ ನಾಯಕಿ ತೆಲುಗು ನಟ ನಾನಿ ಹೊಸ ಚಿತ್ರಕ್ಕೆ ಕನ್ನಡ ನಟಿ ನಾಯಕಿ

  ಅರ್ಧ ಗಂಟೆಗೂ ಹೆಚ್ಚು ನೋಡಲು ಆಗಲಿಲ್ಲ

  ಅರ್ಧ ಗಂಟೆಗೂ ಹೆಚ್ಚು ನೋಡಲು ಆಗಲಿಲ್ಲ

  ''ತೆಲುಗು 'ಯೂ ಟರ್ನ್' ಚಿತ್ರವನ್ನು ಅರ್ಧ ಗಂಟೆಗೂ ಹೆಚ್ಚು ನೋಡಲು ನನ್ನಿಂದ ಆಗಲಿಲ್ಲ. ನಾನು ಮಾಡಿದ ಆ ಪಾತ್ರವನ್ನು ಬೇರೆಯವರ ಜೊತೆಗೆ ಉಹಿಸಲು ಸಾಧ್ಯ ಇಲ್ಲ.'' ಎಂದು ಹೇಳುವ ಮೂಲಕ ಸಮಂತಾ ನಟಿಸಿದ್ದ ಪಾತ್ರವನ್ನು ಹಂಗಿಸಿದ್ದಾರೆ. ಎಂದು ಅಭಿಮಾನಿಗಳು ಕೋಪಗೊಂಡಿದ್ದಾರೆ.

  ಸಮಂತಾ ಫ್ಯಾನ್ಸ್ ಗರಂ

  ಸಮಂತಾ ಫ್ಯಾನ್ಸ್ ಗರಂ

  ಈಗ ತಾನೇ ತೆಲುಗು ಚಿತ್ರರಂಗಕ್ಕೆ ಬಂದಿರುವ ಶ್ರದ್ಧಾ ಈ ರೀತಿ ಮಾತನಾಡುವುದು ಸರಿ ಅಲ್ಲ ಎಂದು ಸಮಂತಾ ಫ್ಯಾನ್ಸ್ ಗರಂ ಆಗಿದ್ದಾರೆ. ನಾನು ಆ ಪಾತ್ರವನ್ನು ಚೆನ್ನಾಗಿ ಮಾಡಿದ್ದೇನೆ ಎಂದರೆ ಓಕೆ. ಆದರೆ, ಸ್ಟಾರ್ ನಟಿಯ ಬಗ್ಗೆ ಮಾತನಾಡಿದ್ದು ತಪ್ಪು. ಸಮಂತಾ ನಟನೆ ಏನು ಎಂದು ಇಡೀ ಸೌತ್ ಇಂಡಿಯಾಗೆ ತಿಳಿದಿದೆ'' ಎಂದು ಅಭಿಮಾನಿಗಳ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

  ಇದೇ ವಾರ ಚಿತ್ರ ಬಿಡುಗಡೆ

  ಇದೇ ವಾರ ಚಿತ್ರ ಬಿಡುಗಡೆ

  ಶ್ರದ್ಧಾ ಶ್ರೀನಾಥ್ ನಟನೆಯ ಮೊದಲ ತೆಲುಗು ಸಿನಿಮಾ 'ಜರ್ಸಿ' ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಕ್ರಿಕೆಟ್ ಆಟಗಾರನ ಕಥೆ ಹೊಂದಿದೆ. ನಾನಿಗೆ ಜೋಡಿಯಾಗಿ ಶ್ರದ್ಧಾ ನಟಿಸಿದ್ದಾರೆ. ಇದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಮನ್ ಲಂಬ ಅವರ ಜೀವನಾಧಾರಿತ ಸಿನಿಮಾ ಎನ್ನಲಾಗುತ್ತಿದೆ.

  English summary
  'Jersey' movie actress Shraddha Srinath's Shocking Comments About Samantha Akkineni. Samantha fans unhapppy with Shraddha's Comment.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X