ಬಿಗ್‌ಬಾಸ್ ಸೀಸನ್ 11 ಆರಂಭದಲ್ಲೇ ಮಾಜಿ ಸ್ಪರ್ಧಿಯ ವಿವಾದ; ಲೈವ್‌ನಲ್ಲೇ ಪತ್ನಿಗೆ ಥಳಿಸಿದ ಸಮೀರ್ ಆಚಾರ್ಯ
ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 11 ಇಂದು (ಸೆಪ್ಟೆಂಬರ್ 29) ಗ್ರ್ಯಾಂಡ್ ಆಗಿ ಆರಂಭ ಆಗಿದೆ. ಹೊಸ ಸ್ಪರ್ಧಿಗಳನ್ನು ನೋಡುವುದಕ್ಕೆ ವೀಕ್ಷಕರು ಕಾದು ಕೂತಿದ್ದಾರೆ. ಇದೇ ಬೆನ್ನಲ್ಲೇ ಒಬ್ಬೊಬ್ಬರಾಗಿಯೇ 11ನೇ ಸೀಸನ್‌ಗೆ ಕಾಲಿಡುತ್ತಿದ್ದಾರೆ. ಇದು ವೇಳೆ ಮಾಜಿ ಸ್ಪರ್ಧಿ ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಬಿಗ್‌ಬಾಸ್ ಶೋ ಆರಂಭ ಮಾಡುವುದಕ್ಕೂ ಮುನ್ನ ಈ ಹಿಂದಿನ ಸೀಸನ್‌ನಲ್ಲಿ ಸ್ಪರ್ಧಿಸಿದ್ದ ಸಮೀರ್ ಆಚಾರ್ಯ ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ. ಸಮೀರ್ ಆಚಾರ್ಯ ಬಿಗ್‌ಬಾಸ್ ಕನ್ನಡ ಸೀಸನ್ 5ರಲ್ಲಿ ಸ್ಪರ್ಧಿಯಾಗಿದ್ದರು. ಆ ವೇಳೆ ಸಮೀರ್ ಆಚಾರ್ಯ ಅವರೊಂದಿಗೆ ಪತ್ನಿ ಶ್ರಾವಣಿ ಕೂಡ ಜನಪ್ರಿಯರಾಗಿದ್ದರು.

ಸಮೀರ್ ಆಚಾರ್ಯ ಅವರೊಂದಿಗೆ ಪತಿ ಶ್ರಾವಣಿ ಕೂಡ ಆಗಾಗ ಕಾಣಿಸಿಕೊಂಡಿದ್ದರು. ಆ ವೇಳೆ ಸಮೀರ್ ಆಚಾರ್ಯ ಹಾಗೂ ಅವರ ಪತ್ನಿ ಶ್ರಾವಣಿ ದಾಂಪತ್ಯದ ಬಗ್ಗೆ ವೀಕ್ಷಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದ್ರೀಗ ಅದೇ ದಾಂಪತ್ಯದಲ್ಲಿ ಅಪಸ್ವರ ಎದ್ದಿದೆ. ಶ್ರಾವಣಿ ಇನ್‌ಸ್ಟಾಗ್ರಾಂನಲ್ಲಿ ಲೈವ್ ಬಂದು ಪತಿ ಹಾಗೂ ಅವರ ತಂದೆ-ತಾಯಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಸಮೀರ್ ಆಚಾರ್ಯ ಪತ್ನಿ ಶ್ರಾವಣಿ ಇನ್‌ಸ್ಟಾಗ್ರಾಂ ಲೈವ್ ಬಂದಿದ್ದರು. ಅದರಲ್ಲಿ ತನ್ನ ಮೇಲೆ ಪತ್ನಿ ಹಾಗೂ ತಂದೆ ತಾಯಿ ಹಲ್ಲೆ ಮಾಡಿದ್ದಾರೆಂದು ಆರೋಪ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ಅವರ ದಾಂಪತ್ಯದಲ್ಲಿ ಅಪಸ್ವರ ಎದ್ದಿದೆ ಅನ್ನೋ ಮಾತು ಹೇಳಿ ಬರುತ್ತಿದೆ. ಅಸಲಿಗೆ ಇಬ್ಬರ ನಡುವಿನ ವಿವಾದ ಏನಂದ್ರೆ?
ಶ್ರಾವಣಿ ಸಮೀರ್ ಆಚಾರ್ಯ ಇಂದು (ಸೆಪ್ಟೆಂಬರ್ 29) ಭಾನುವಾರ ಮನೆಯಲ್ಲಿ ಕೆಲಸದಲ್ಲಿ ನಿರತರಾಗಿದ್ದರು. ಈ ಸಂಬಂಧ ಅವರ ಮಗಳು ಗಲಾಟೆ ಮಾಡುತ್ತಿದ್ದರು. ಆ ವೇಳೆ ಸಹಜವಾಗಿ ಮಗಳಿಗೆ ಗದರಿದ್ದಾರೆ. ಇದನ್ನು ಇದನ್ನು ಗಮನಿಸಿದ ಸಮೀರ್ ಆಚಾರ್ಯ ತಂದೆ ಸೊಸೆಗೆ ಬೈಯುವುದಕ್ಕೆ ಶುರು ಮಾಡಿದ್ದರು. ಈ ವಿಚಾರವಾಗಿ ಮಾತಿಗೆ ಮಾತು ಬೆಳೆದು ಜಗಳ ಆರಂಭ ಆಗಿತ್ತು ಎನ್ನಲಾಗಿದೆ.
ಹೀಗೆ ಶುರುವಾದ ಜಗಳ ದೊಡ್ಡ ಮಟ್ಟಕ್ಕೆ ಬೆಳೆದಿದೆ. ಈ ವೇಳೆ ಶ್ರಾವಣಿಯವರಿಗೆ ಪತಿ ಸಮೀರ್ ಆಚಾರ್ಯ ಹಾಗೂ ಅವರ ತಂದೆ-ತಾಯಿ ಇಬ್ಬರೂ ಸೇರಿಕೊಂಡು ಮನಸ್ಸಿಗೆ ಬಂದಂತೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದು ತಾರಕಕ್ಕೆ ಏರುತ್ತಿದ್ದಂತೆ ಶ್ರಾವಣಿಯವರು ಇನ್‌ಸ್ಟಾಗ್ರಾಂನಲ್ಲಿ ಲೈವ್‌ಗೆ ಬಂದು ಘಟನೆಯನ್ನು ವಿವರಿಸಿದ್ದರು. ಇದನ್ನು ನೋಡುತ್ತಿದ್ದಂತೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಸಮೀರ್ ಆಚಾರ್ಯ ಮತ್ತಷ್ಟು ಸಿಟ್ಟಿಗೆದ್ದಿದ್ದರು ಎನ್ನಲಾಗಿದೆ.
ಸಮೀರ್ ಆಚಾರ್ಯ ಪತ್ನಿಯ ಮೊಬೈಲ್ ಒಡೆದು ಹಾಕಿದ್ದಾರೆ. ಈ ಕಿತ್ತಾಟದಲ್ಲಿ ಶ್ರಾವಣಿ ಕೈ ಹಾಗೂ ಮುಖಕ್ಕೆ ಗಾಯಗಳಾಗಿವೆ ಎನ್ನಲಾಗಿದೆ. ಇದೇ ವೇಳೆ ಶ್ರಾವಣಿ ಸಮೀರ್ ಆಚಾರ್ಯ ತಮ್ಮ ಮೇಲಿನ ಹಲ್ಲೆಯನ್ನು ಖಂಡಿಸಿ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ. ಅಲ್ಲದೆ ಈ ಗಲಾಟೆಯಲ್ಲಿ ಸಮೀರ್ ಆಚಾರ್ಯ ಅವರ ತಂದೆಯ ತಲೆಗೂ ಪೆಟ್ಟಾಗಿದೆ ಎನ್ನಲಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 5ರ ಸಮೀರ್ ಆಚಾರ್ಯ ಅವರಂತೆ ಶ್ರಾವಣಿ ಸಮೀರ್ ಆಚಾರ್ಯ ಕೂಡ ಇನ್‌ಸ್ಟಾಗ್ರಾಂನಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಟ್ರಾವೆಲ್, ಸಂಗೀತ ಹಾಗೂ ಮಗಳೊಂದಿಗೆ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಕೆಲವು ಗಂಟೆಗಳ ಹಿಂದೆ ಸಮೀರ್ ಆಚಾರ್ಯ, ಶ್ರಾವಣಿ ಇಬ್ಬರೂ ಮಗಳೊಂದಿಗೆ ಖುಷಿ ಖುಷಿಯಾಗಿದ್ದ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ಬೆನ್ನಲೇ ಇಂತಹದ್ದೊಂದು ಸುದ್ದಿ ಹೊರಬಿದ್ದಿದೆ.


Click it and Unblock the Notifications











