11 ನಿಮಿಷದ ಸೀನ್ ಅನ್ನು ಸಿಂಗಲ್ ಶಾಟ್‌ನಲ್ಲಿ ನಟಿಸಿ ಗೆದ್ದ ನಟಿ ಶ್ರಾವ್ಯ-ಲೋಕೇಂದ್ರ!

By ಫಿಲ್ಮಿಬೀಟ್ ಡೆಸ್ಕ್

ಸಿಂಗಲ್ ಶಾಟ್‌ನಲ್ಲಿ ದೊಡ್ಡ ದೊಡ್ಡ ಸೀನ್ ಕಂಪೋಸ್ ಮಾಡೋದು ಕಷ್ಟ. ಇದು ಸಿನಿಮಾ ಮೇಕಿಂಗ್ ಮಾಡೋರಿಗೆ ತುಂಬಾ ಚೆನ್ನಾಗಿ ಗೊತ್ತಿರುತ್ತೆ. ಆದರೆ, ಇಲ್ಲೊಂದು ಸಿನಿಮಾ ತಂಡ 11 ನಿಮಿಷದ ಸೀನ್ ಅನ್ನು ಸಿಂಗಲ್ ಶಾಟ್‌ನಲ್ಲಿ ತೆಗೆದು ಮುಗಿಸಿದ್ದಾರೆ. ಆ ಸಿನಿಮಾವೇ 'ಅಥಿ ಐ ಲವ್ ಯು'.

'ಅಥಿ ಐ ಲವ್ ಯು' ಸಿನಿಮಾ ಚಿತ್ರೀಕರಣ ಇನ್ನೂ ಭರದಿಂದ ಸಾಗುತ್ತಿದೆ. ಒಂದೇ ದಿನದಲ್ಲಿ, ಒಂದು ಮನೆಯಲ್ಲಿ ನಡೆಯುವ ಕಥೆ ಈ ಸಿನಿಮಾದಲ್ಲಿದೆ. ಇದರಲ್ಲಿ ಗಂಡ-ಹೆಂಡತಿಯ ನಡುವಿನ ಆಪ್ತ ದೃಶ್ಯಗಳು ಇಲ್ಲಿವೆ. ಇದೇ ಸಿನಿಮಾ ಬರೋಬ್ಬರಿ ಹನ್ನೊಂದು ನಿಮಿಷದ ದೊಡ್ಡ ದೃಶ್ಯವನ್ನು ಕಂಪೋಸ್ ಮಾಡಲಾಗಿದೆ. ಅದೂ ಸಿಂಗಲ್‌ ಶಾಟ್‌ನಲ್ಲಿ ಅನ್ನೋದು ವಿಶೇಷ.

Shravya Rao And Lokendra Participated In 11 Long minutes Scene In Movie Athi I Love you

ಮಲಗಿದ್ದ ಗಂಡ-ಹೆಂಡತಿ ಎದ್ದ ಬಳಿಕ ನಡೆಯೋ ಘಟನೆಯ ದೀರ್ಘವಾದ ಈ ದೃಶ್ಯವನ್ನು ತೆಗೆಯಲು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಮನೆಯಲ್ಲೇ ವಿವಿಧ ಕೋನಗಳಲ್ಲಿ ಲೈಟಿಂಗ್‌ ವ್ಯವಸ್ಥೆ ರೂಪಿಸಲಾಗಿತ್ತು. ಕ್ಯಾಮೆರಾಗೂ ಪ್ಲೇಸ್‌ಮೆಂಟ್ ಮಾಡಲಾಗಿತ್ತು. 11 ನಿಮಿಷದ ಈ ಲಾಂಗ್ ಸೀನ್ ಅದ್ಭುತವಾಗಿ ಮೂಡಿಬಂದಿದ್ದು ಈ ಸಿನಿಮಾದ ವಿಶೇಷ. ಈ ದೃಶ್ಯವನ್ನು ಸ್ವತಃ ನಾಯಕನಾಗಿ ನಟಿಸಿ, ನಿರ್ದೇಶನವನ್ನೂ ಮಾಡಿರುವ ಲೋಕೇಂದ್ರ ಸೂರ್ಯ ಯಶಸ್ವಿಯಾಗಿ ಕಟ್ಟಿಕೊಟ್ಟಿದ್ದಾರೆ. ಜೊತೆಗೆ ನಾಯಕಿ ಶ್ರಾವ್ಯಾ ರಾವ್‌ ಕೂಡ ಈ ದೃಶ್ಯದಲ್ಲಿ ನಟಿಸಿದ್ದಾರೆ.

"ಉದ್ದೂದ ದೃಶ್ಯಗಳು ಸಿನಿಮಾದ ಉದ್ದಕ್ಕೂ ಸಹಜವಾಗಿಯೇ ಕಾಣಸಿಗುತ್ತವೆ. ಕತ್ತರಿಸಿ ಜೋಡಿಸಿದರೂ ಸಿಗದ ಅನುಭವವನ್ನು ಶಾಟ್ ಕಟ್ ಮಾಡದೇಯೇ ಪರದೆಯ ಮೇಲೆ ತರಬೇಕಾದರೆ, ಕಲಾವಿದರು ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಬೇಕಾಗುತ್ತದೆ. ಅಂತಹ ಪ್ರಯತ್ನದಲ್ಲಿ ಶ್ರಾವ್ಯಾ ನನಗೆ ಉತ್ತಮವಾದ ಸಾಥ್ ನೀಡಿದ್ದಾರೆ. ಭಾವನಾತ್ಮಕ ದೃಶ್ಯಗಳನ್ನು ಅಲ್ಲಲ್ಲಿ ಸಣ್ಣ ಶಾಟ್‌ಗಳಾಗಿ ವಿಭಾಗಿಸಿದರೆ, ಭಾವನೆಗಳನ್ನು ಹಿಡಿದಿಡುವುದು ಕಷ್ಟ. ಆದಕಾರಣ ಕೆಲವು ದೃಶ್ಯಗಳನ್ನು ಒಂದೊಂದೇ ಶಾಟ್‌ಗಳಲ್ಲಿ ಚಿತ್ರಿಸುತ್ತಿದ್ದೇವೆ." ಎನ್ನುತ್ತಾರೆ ನಿರ್ದೇಶಕ ಲೋಕೇಂದ್ರ ಸೂರ್ಯ.

"ಸಾಕಷ್ಟು ಸಿನಿಮಾಗಳಲ್ಲಿ ನಾನು ಅಭಿನಯಿಸಿದ್ದೇನೆ. ಎಲ್ಲವೂ ನನಗೆ ಇಷ್ಟವಾದವುಗಳೇ, ಆದರೆ, ಅಥಿ ಐ ಲವ್ ಯು ಚಿತ್ರದಲ್ಲಿ ನಾನು ಬೇರೊಂದು ಬಗೆಯಲ್ಲಿ ಅನುಭವ ಪಡೆದುಕೊಳ್ಳುತಿದ್ದೇನೆ. ಈ ಚಿತ್ರದ ಚಿತ್ರೀಕರಣ ನನಗೊಂದು ವಿಷೇಶವಾದ ಅನುಭವ ನೀಡುತ್ತಿದೆ." ಎಂದು ನಟಿ ಶ್ರಾವ್ಯಾ ರಾವ್ ಹೇಳಿದ್ದಾರೆ.

Shravya Rao And Lokendra Participated In 11 Long minutes Scene In Movie Athi I Love you

'ಅಥಿ ಐ ಲವ್ ಯು' ಸಿನಿಮಾದ ಶೂಟಿಂಗ್ ಇನ್ನೂ ನಡೆಯುತ್ತಿದೆ. ಅಂದ್ಕೊಂಡಂತೆ ಸಿನಿಮಾ ಮುಗಿದರೆ, ಮೇ ತಿಂಗಳಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಇದೆ. 'ಅಥಿ ಐ ಲವ್ ಯು' ಚಿತ್ರದಲ್ಲಿ ಲೋಕೇಂದ್ರ ಸೂರ್ಯ ಕಥೆ, ಚಿತ್ರಕತೆ, ಸಂಭಾಷಣೆಯ ಜೊತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಅನಂತ್ ಆರ್ಯನ್ ಸಂಗೀತ ಸಿನಿಮಾಗಿದೆ. ಬಹಳ ದಿನಗಳ ಬಳಿಕ ಎನ್.ಓಂ ಪ್ರಕಾಶ್ ರಾವ್ ಪುತ್ರಿ ಶ್ರಾವ್ಯಾ ರಾವ್ ಮತ್ತೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Shravya Rao And Lokendra Participated In 11 Long minutes Scene In Movie Athi I Love you, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X