ರಾಮ ಪ್ರಾಣ ಪ್ರತಿಷ್ಠಾ ದಿನವೇ ಮತ್ತೊಂದು ಭಕ್ತಿ ಪ್ರಧಾನ ಸಿನಿಮಾ: 'ಶ್ರೀ ರಾಮ್, ಜೈ ಹನುಮಾನ್' ಪೋಸ್ಟರ್ ರಿಲೀಸ್

ಅಯೋಧ್ಯೆಯಲ್ಲಿ ರಾಮ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಐತಿಹಾಸಿಕ ಕ್ಷಣದಲ್ಲಿ ಇಡೀ ದೇಶವೇ ಸಾಕ್ಷಿಯಾಗಿದೆ. ಈ ಶುಭ ದಿನದಂದು, ಮತ್ತೊಂದು ಭಕ್ತಿ ಪ್ರಧಾನ ಸಿನಿಮಾದ ಘೋಷಣೆಯಾಗಿದೆ. ಈಗಾಗಲೇ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ 'ಹನುಮಾನ್' ಚಿತ್ರ ಭರ್ಜರಿ ಕಮಾಲ್ ಮಾಡುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ಇಡೀ ದೇಶದಲ್ಲಿ ಸದ್ದು ಮಾಡುತ್ತಿದೆ.

ಇದೇ ರೀತಿಯಲ್ಲಿ ಸುರೇಶ್ ಆರ್ಟ್ಸ್ ತಮ್ಮ ಮುಂಬರುವ ಚಿತ್ರ "ಶ್ರೀ ರಾಮ್, ಜೈ ಹನುಮಾನ್" ಪೋಸ್ಟರ್ ಅನ್ನು ಬಹಿರಂಗಪಡಿಸಿದೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ 'ಶ್ರೀ ರಾಮ್, ಜೈ ಹನುಮಾನ್' ಚಿತ್ರವು ಪೂಜ್ಯ ರಾಮಾಯಣದ ಬಗ್ಗೆ ಹೊಸ ದೃಷ್ಟಿಕೋನವನ್ನು ನೀಡುವ ಗುರಿಯನ್ನು ಹೊಂದಿದೆ.

Shree Ram, Jai Hanuman poster release on Ayodhyas Ram Mandir Pran Pratistha Ceremony

'ಶ್ರೀ ರಾಮ್, ಜೈ ಹನುಮಾನ್' ಹೊಸ ಪ್ಯಾನ್ ಇಂಡಿಯಾ ಸಿನಿಮಾ

ರಾಮನಗರಿಯ ಜೊತೆಗೆ ಇಡೀ ದೇಶವೇ ರಾಮ ನಾಮ ಸ್ಮರಣೆ ಮಾಡುವ ಶುಭ ಘಳಿಗೆಯಲ್ಲಿ "ಶ್ರೀ ರಾಮ್, ಜೈ ಹನುಮಾನ್" ಎಂಬ ಹೊಚ್ಚ ಹೊಸ ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆಯಾಗಿದೆ. ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ರಾಮ ಮಂದಿರ ಉದ್ಘಾಟನೆಯ ಸಮಯಕ್ಕೆ (12.33) ಚಿತ್ರದ ಪೋಸ್ಟರ್ ಅನಾವರಣಗೊಂಡಿದೆ.

'ಶ್ರೀ ರಾಮ್, ಜೈ ಹನುಮಾನ್' ಸಿನಿಮಾದ ಪೋಸ್ಟರ್‌ಗೆ "An Untold Epic of RAMAYANA" ಎಂಬ ಅಡಿಬರಹವಿದೆ. ರಾಮಾಯಣದ ಕುರಿತು ಬಹುತೇಕರಿಗೆ ವಿಷಯ ತಿಳಿದಿದೆ. ಆದರೆ ಎಲ್ಲೂ ದಾಖಲಾಗದ ಕೆಲವು ವಿಷಯಗಳನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆ ಎಂಬುದು ಈ ಸಿನಿಮಾದ ಮತ್ತೊಂದು ವಿಶೇಷ. ಸದ್ಯ ಹರಿಬಿಟ್ಟಿರುವ ಪೋಸ್ಟರ್ ಸಾಕಷ್ಟು ಕುತೂಹಲ ಕೆರಳಿಸಿದೆ.

'ಶ್ರೀ ರಾಮ್, ಜೈ ಹನುಮಾನ್' ಟೈಟಲ್ ಪೋಸ್ಟರ್ ಹೇಗಿದೆ?

ಬೆಟ್ಟ, ಗುಡ್ಡ, ಬೆಂಕಿ, ನೀರು, ರಾಮ... ಹನುಮ... ಹೀಗೆ ಅನೇಕ ಸಂಗತಿಗಳು 'ಶ್ರೀ ರಾಮ್, ಜೈ ಹನುಮಾನ್' ಪೋಸ್ಟರ್‌ನಲ್ಲಿ ಅಡಕವಾಗಿವೆ. ಒಂದೆಡೆ ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ಖುಷಿಯಲ್ಲಿರುವ ಜನರಿಗೆ, ಈ ಪೋಸ್ಟರ್ ನೋಡುತ್ತಲೇ ಮೈ ಜುಂ ಎನಿಸುವಂತೆ ಮಾಡಿದೆ. ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟುವಂತೆ ಮಾಡಿದೆ.

Shree Ram, Jai Hanuman poster release on Ayodhyas Ram Mandir Pran Pratistha Ceremony

'ಶ್ರೀ ರಾಮ್, ಜೈ ಹನುಮಾನ್' ಚಿತ್ರಕ್ಕೆ ಯುವ ನಿರ್ದೇಶಕ ಅವಧೂತ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ಮಾಪಕ ಕೆ ಎ.ಸುರೇಶ್ ಅದ್ಧೂರಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕನ್ನಡದಲ್ಲಿ ಈಗಾಗಲೇ ಯಶಸ್ವಿ ನಿರ್ಮಾಣ ಸಂಸ್ಥೆ ಎನ್ನಿಸಿಕೊಂಡಿರುವ ಸುರೇಶ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾ ಮೂಡಿ ಬರುತ್ತಿದೆ.

ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂನ ಖ್ಯಾತ ನಟರು, ಕಲಾವಿದರು ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿ ಇರಲಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾಕ್ಕೆ ಸದ್ಯ ಸ್ಟೋರಿ ಬೋರ್ಡ್ ಮತ್ತು ವಿಎಫ್ಎಕ್ಸ್ ಕೆಲಸಗಳು ನಡೆಯುತ್ತಿವೆ.

More from Filmibeat

English summary
Shree Ram, Jai Hanuman poster release on Pran Pratistha Ceremony.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X