For Quick Alerts
  ALLOW NOTIFICATIONS  
  For Daily Alerts

  'ಪವರ್ ಸ್ಟಾರ್' ಆಗಿ ಮಲಯಾಳಂಗೆ ಕಾಲಿಟ್ಟ ಕೆ.ಮಂಜು ಪುತ್ರ ಶ್ರೇಯಸ್

  |

  ಸ್ಯಾಂಡಲ್ ವುಡ್ ನ ಖ್ಯಾತ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಮಂಜು ಹೊಸ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಪಡ್ಡೆ ಹುಲಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ, ಶ್ರೇಯಸ್ ಸದ್ಯ ವಿಷ್ಣು ಪ್ರಿಯಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.

  ಈ ಸಿನಿಮಾ ರಿಲೀಸ್ ಆಗುವ ಮೊದಲೇ ಶ್ರೇಯಸ್ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದು, ಸ್ಯಾಂಡಲ್ ವುಡ್ ನಿಂದ ಮಾಲಿವುಡ್ ಗೆ ಜಿಗಿದಿದ್ದಾರೆ. ಹೌದು, ಶ್ರೇಯಸ್ ಇದೀಗ ಮಲಯಾಳಂ ಸಿನಿಮಾರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

  ಈಗಾಗಲೇ ಚಿತ್ರದ ಬಗ್ಗೆ ಮಾತುಕತೆ ನಡೆದಿದ್ದು, ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ. ಅಂದಹಾಗೆ ಶ್ರೇಯಸ್ ಮೊದಲ ಮಲಯಾಳಂ ಚಿತ್ರಕ್ಕೆ 'ಒರು ಆಡಾರ್ ಲವ್' ಖ್ಯಾತಿಯ ನಿರ್ದೇಶಕ ಓಮರ್ ಲುಲು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ 'ಪವರ್ ಸ್ಟಾರ್' ಎಂದು ಟೈಟಲ್ ಇಡಲಾಗಿದೆ.

  ನಿರ್ದೇಶಕ ಓಮರ್, 'ಒರು ಆಡಾರ್ ಲವ್' ಸಿನಿಮಾ ಮೂಲಕ ದೇಶದಾದ್ಯಂತ ಸದ್ದು ಮಾಡಿದ್ದರು. ಅಲ್ಲದೆ ಈ ಸಿನಿಮಾ ಮೂಲಕ ಕಣ್ಸನ್ನೆಯ ಸುಂದರಿ ಪ್ರಿಯ ವಾರಿಯರ್ ಅವರನ್ನು ಪರಿಚಯಿಸಿದ್ದು ಇದೇ ನಿರ್ದೇಶಕ. ಇದೀಗ ಓಮರ್ ಕನ್ನಡದ ನಟ ಶ್ರೇಯಸ್ ಜೊತೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ.

  ಅಂದಹಾಗೆ 'ಪವರ್ ಸ್ಟಾರ್' ಸಿನಿಮಾ ಮಲಯಾಳಂ ಜೊತೆಗೆ ಕನ್ನಡದಲ್ಲೂ ತಯಾರಾಗುತ್ತಿದೆ. ಮೊದಲ ಬಾರಿಗೆ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಶ್ರೇಯಸ್ ಈ ಸಿನಿಮಾದ ಬಗ್ಗೆ ಸಖತ್ ಎಕ್ಸಾಯಿಟ್ ಆಗಿದ್ದಾರೆ.

  Recommended Video

  ಪೊಗರು ರಿಲೀಸ್ ಗೆ ಮೊದಲೆ ಮತ್ತೊಂದು ಸುರ್ಪ್ರೈಸ್ ಕೊಟ್ಟ ಧ್ರುವ ಸರ್ಜಾ | Filmibeat Kannada

  ಅಂದಹಾಗೆ ಒರು ಆಡಾರ್ ಲವ್ ಸಿನಿಮಾ ಮೂಲಕ ದೇಶದಾದ್ಯಂತ ಸಂಚಲನ ಮೂಡಿಸಿದ್ದ ನಟಿ ಪ್ರಿಯ ವಾರಿಯರ್ ಸದ್ಯ ಶ್ರೇಯಸ್ ಜೊತೆ ವಿಷ್ಣುಪ್ರಿಯಾ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರಿಯಾ ಕನ್ನಡದ ಮೊದಲ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ.

  English summary
  Kannada Actress Shreyas Manju to make his Malayalam debut with Happy Wedding and Powerstar Movie.
  Thursday, December 24, 2020, 13:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X