ನನ್ನ ತಂದೆಗೆ ವಿಷ್ಣು ಸರ್ ಹೇಗೋ, ನನಗೆ ಡಿ ಬಾಸ್ ಹಾಗೆ: ನಿರ್ಮಾಪಕನ ಪುತ್ರ

Recommended Video

ನನ್ನ ತಂದೆಗೆ ವಿಷ್ಣು ಸರ್ ಹೇಗೋ, ನನಗೆ ಡಿ ಬಾಸ್ ಹಾಗೆ |FILMIBEAT KANNADA

ಪ್ರತಿಯೊಬ್ಬರ ಹೀರೋ, ನಿರ್ಮಾಪಕ, ನಿರ್ದೇಶಕನೂ ಒಬ್ಬರ ಅಭಿಮಾನಿಯಾಗಿಯೇ ಇಂಡಸ್ಟ್ರಿಗೆ ಬರ್ತಾರೆ. ದರ್ಶನ್, ಸುದೀಪ್, ಯಶ್, ಉಪೇಂದ್ರ, ಗಣೇಶ್ ಹೀಗೆ ಈ ನಟರಲ್ಲಿ ಡಾ ರಾಜ್ ಕುಮಾರ್, ಡಾ ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್ ಅಂತಹ ಲೆಜೆಂಡ್ ಗಳು ನಡೆದು ಹೋದ ದಾರಿಯಲ್ಲಿ ಹೆಜ್ಜೆ ಇಡ್ತಿದ್ದಾರೆ.

ಅದೇ ರೀತಿ ಈಗ ಇಂಡಸ್ಟ್ರಿಗೆ ಬರ್ತಿರುವ ಯುವ ನಟರು, ದರ್ಶನ್, ಸುದೀಪ್, ಶಿವಣ್ಣ, ಪುನೀತ್, ಉಪೇಂದ್ರ ಅಂತಹ ಕಲಾವಿದರ ಜರ್ನಿಯನ್ನ ನೋಡಿ ಮಾರ್ಗದರ್ಶನ ಪಡೆದುಕೊಂಡು ಬರ್ತಿದ್ದಾರೆ.

ಹೀಗೆ ಸ್ಯಾಂಡಲ್ ವುಡ್ ಗೆ ಹೊಸದಾಗಿ ಎಂಟ್ರಿಕೊಟ್ಟಿರುವ ಯುವ ನಟ ಶ್ರೇಯಸ್. ಗಂಡುಗಲಿ ನಿರ್ಮಾಪಕ ಅಂತಾನೇ ಖ್ಯಾತಿ ಗಳಿಸಿಕೊಂಡಿರುವ ಕೆ ಮಂಜು ಅವರ ಮಗ ಶ್ರೇಯಸ್ 'ಪಡ್ಡೆಹುಲಿ'ಯಾಗಿ ಬೆಳ್ಳಿತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಈ ಮಧ್ಯೆ ಶ್ರೇಯಸ್ ಡಿ ಬಾಸ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಏನಂದ್ರು? ಮುಂದೆ ಓದಿ....

ಪಡ್ಡೆಹುಲಿ ಟ್ರೈಲರ್ ಬಿಡುಗಡೆ ಮಾಡಿದ ದರ್ಶನ್

ಪಡ್ಡೆಹುಲಿ ಟ್ರೈಲರ್ ಬಿಡುಗಡೆ ಮಾಡಿದ ದರ್ಶನ್

ಶ್ರೇಯಸ್ ಅಭಿನಯದ ಮೊದಲ ಸಿನಿಮಾ ಪಡ್ಡೆಹುಲಿ ಟ್ರೈಲರ್ ನಿನ್ನೆ ರಿಲೀಸ್ ಆಗಿದೆ. ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿದ್ದರು. ಜಮಿನ್ದಾರ್ರು, ಹೃದಯವಂತ, ಸಾಹುಕಾರ, ಲಂಕೇಶ್ ಪತ್ರಿಕೆ, ಒಡಹುಟ್ಟಿದವರು, ರಾಮಾ ಬಾಮಾ ಶಾಮ ಅಂತಹ ಚಿತ್ರಗಳನ್ನ ನಿರ್ಮಿಸಿದ ನಿರ್ಮಾಪಕನ ಮಗನ ಚಿತ್ರಕ್ಕೆ ಈಗ ದರ್ಶನ್ ಸಾಥ್ ನೀಡಿದ್ದಾರೆ.

ಅಪ್ಪಂಗೆ ವಿಷ್ಣು ಸರ್, ನನಗೆ ಡಿ ಬಾಸ್

ಅಪ್ಪಂಗೆ ವಿಷ್ಣು ಸರ್, ನನಗೆ ಡಿ ಬಾಸ್

ಟ್ರೈಲರ್ ಲಾಂಚ್ ಸಮಾರಂಭದಲ್ಲಿ ದರ್ಶನ್ ಬಗ್ಗೆ ಮಾತನಾಡಿದ ನಟ ಶ್ರೇಯಸ್, ''ನಮ ತಂದೆ ಇಂಡಸ್ಟ್ರಿಗೆ ಬಂದಾಗ ವಿಷ್ಣು ಸರ್ ಅವರ ಅಭಿಮಾನಿಯಾಗಿ ಬಂದರು. ಅವರ ಚಿತ್ರಗಳನ್ನ ನಿರ್ಮಾಣ ಮಾಡಿದ್ರು. ಅಂದು ಆ ಯಜಮಾನ ನಮ್ಮ ತಂದೆಗೆ ಜೊತೆಯಾಗಿದ್ರು. ಇಂದು ನಮ್ಮಂತ ಯುವ ಕಲಾವಿದರಿಗೆ ಡಿ ಬಾಸ್ ಸಪೋರ್ಟ್ ಮಾಡ್ತಾರೆ. ನನಗೆ ಡಬಲ್ ಶಕ್ತಿ. ಒಂದು ವಿಷ್ಣು ಸರ್, ಇನ್ನೊಂದು ದರ್ಶನ್ ಸರ್'' ಎಂದು ಸಂತಸ ವ್ಯಕ್ತಪಡಿಸಿದ್ರು.

ಇಷ್ಟ ಆದ್ರೆ ಪ್ರಾಣ ಕೊಡ್ತಾರೆ

ಇಷ್ಟ ಆದ್ರೆ ಪ್ರಾಣ ಕೊಡ್ತಾರೆ

ಇನ್ನು ನಿರ್ಮಾಪಕ ಕೆ ಮಂಜು ಮಾತನಾಡಿ ''ದರ್ಶನ್ ಯಾರಾನ್ನಾದರೂ ಇಷ್ಟ ಪಟ್ಟರೇ ಪ್ರಾಣ ಬೇಕಾದರೇ ಕೊಡ್ತಾರೆ. ಅದೇ ಇಷ್ಟ ಆಗದೇ ಹೋದರೆ ಯಾರೇ ಆದ್ರೂ ನೋಡಲ್ಲ, ದೂರ ಮಾಡ್ತಾರೆ. ಅದು ಅವರ ನೇರ ಸ್ವಭಾವ. ಹೊಸ ತಂಡಗಳನ್ನ ಪ್ರೋತ್ಸಾಹಿಸುವ ಗುಣ ಹೊಂದಿರುವ ದರ್ಶನ್ ಚಿತ್ರೀಕರಣ ಮಾಡ್ತಿದ್ರು ಅದನ್ನ ಬೇಗ ಮುಗಿಸಿ ನಮ್ಮ ಕಾರ್ಯಕ್ರಮಕ್ಕೆ ಬಂದಿದ್ದಾರೆ'' ಎಂದು ನಿರ್ಮಾಪಕ ಕೆ ಮಂಜು ಸಂತಸ ವ್ಯಕ್ತಪಡಿಸಿದ್ರು.

ಊಟ ಮಾಡಿಸದೆ ಕಳಸಲ್ಲ

ಊಟ ಮಾಡಿಸದೆ ಕಳಸಲ್ಲ

ದರ್ಶನ್ ಅವರ ಬಹುದೊಡ್ಡ ಗುಣ ಅಂದ್ರೆ, ಅವರ ಮನೆಗೆ ಹೋದಾಗ ಅಥವಾ ಸೆಟ್ ಗೆ ಹೋದಾಗ ಊಟ ಮಾಡಿಸಿದ ಕಳಸಲ್ಲ ಎಂದು ನಿರ್ದೇಶಕ ಗುರುದೇಶಪಾಂಡೆ ಹೇಳಿದ್ರು. ಸದ್ಯ ಪಡ್ಡೆಹುಲಿ ಟ್ರೈಲರ್ ರಿಲೀಸ್ ಆಗಿದ್ದು, ರವಿಚಂದ್ರನ್, ರಕ್ಷಿತ್ ಶೆಟ್ಟಿ, ನಿಶ್ವಿಕಾ ನಾಯ್ಡು ನಟಿಸಿದ್ದಾರೆ.

More from Filmibeat

English summary
Producer K manju son Shreyas's starrer first movie 'Padde Huli' movie trailer released by challenging star darshan. the movie starring Nishvika, rakshit shetty, ravichandran. Directed by Guru Despande.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X