For Quick Alerts
  ALLOW NOTIFICATIONS  
  For Daily Alerts

  ದಸರಾಗೆ 'ಶ್ರೀಕೃಷ್ಣಜಿಮೇಲ್.ಕಾಮ್', ದೀಪಾವಳಿಗೆ 'ಮುಗಿಲ್ ಪೇಟೆ'

  |

  ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ 'ಶ್ರೀಕೃಷ್ಣ@ಜಿಮೇಲ್.ಕಾಮ್' ಸಿನಿಮಾ ವಿಜಯ ದಶಮಿ ಹಬ್ಬದ ಪ್ರಯುಕ್ತ ಚಿತ್ರಮಂದಿರ ಬರಲು ತೀರ್ಮಾನಿಸಿದೆ. ನಾಗಶೇಖರ್ ಈ ಚಿತ್ರ ನಿರ್ದೇಶನ ಮಾಡಿದ್ದು, ಜಾಕಿ ಭಾವನಾ ನಾಯಕಿಯಾಗಿ ಅಭಿನಯಿಸಿದ್ದಾರೆ.

  ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಸಿನಿಮಾಗಳನ್ನು ಮಾಡಿರುವ ಸಂದೇಶ್ ಪ್ರೊಡಕ್ಷನ್ಸ್ ಈ ಚಿತ್ರ ನಿರ್ಮಿಸಿದೆ. ಬೃಂದಾ ಎನ್ ಜಯರಾಂ ಈ ಚಿತ್ರದ ಸಹ ನಿರ್ಮಾಪಕರು. ನಿರ್ದೇಶನದ ಜೊತೆಗೆ ಕಥೆ, ಸಂಭಾಷಣೆ ಹಾಗೂ ಚಿತ್ರಕಥೆಯನ್ನು ನಾಗಶೇಖರ್ ಬರೆದಿದ್ದಾರೆ. ಚಿತ್ರಕಥೆಯಲ್ಲಿ ಪ್ರೀತಂಗುಬ್ಬಿ ಸಹ ಕೈ ಜೋಡಿಸಿದ್ದಾರೆ.

  ಕ್ರೇಜಿಸ್ಟಾರ್ ಪುತ್ರನ 'ಮುಗಿಲ್ ಪೇಟೆ' ಚಿತ್ರದ ನಾಯಕಿ ಯಾರು?ಕ್ರೇಜಿಸ್ಟಾರ್ ಪುತ್ರನ 'ಮುಗಿಲ್ ಪೇಟೆ' ಚಿತ್ರದ ನಾಯಕಿ ಯಾರು?

  ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ಭಾವನಾ ಮೆನನ್ ನಟಿಸಿದ್ದಾರೆ. ಚಂದನ್ ಗೌಡ ದ್ವಿತೀಯ ನಾಯಕರಾಗಿ ಅಭಿನಯಿಸಿರುವ ಈ ಚಿತ್ರದ ಅತಿಥಿ ಪಾತ್ರದಲ್ಲಿ ನಿರ್ದೇಶಕ, ನಾಯಕ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ದತ್ತಣ್ಣ, ಸಾಧುಕೋಕಿಲ, ಅಚ್ಯುತರಾವ್,ಸಾತ್ವಿಕ್ (ಕಾರ್ಪೊರೇಟರ್), ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮುಂತಾದ ಅದ್ದೂರಿ ತಾರಾಬಳಗ ಈ ಚಿತ್ರದಲ್ಲಿದೆ. ಸಂದೇಶ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗಿದ್ದ "ಅಮರ್" ಚಿತ್ರವನ್ನು ನಾಗಶೇಖರ್ ಅವರೇ ನಿರ್ದೇಶಿಸಿದ್ದರು.

  ಐದು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರೆ. ಕವಿರಾಜ್ ಗೀತರಚನೆ ಮಾಡಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣವಿರುವ 'srikrishna@gmail.com' ಚಿತ್ರಕ್ಕೆ ದೀಪು ಎಸ್. ಕುಮಾರ್ ಹಾಗೂ ಅರುಣ್ ಸಾಗರ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

  ದೀಪಾವಳಿಗೆ 'ಮುಗಿಲ್‌ ಪೇಟೆ'

  ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನು ನಾಯಕನಾಗಿ ನಟಿಸಿರುವ 'ಮುಗಿಲ್ ಪೇಟೆ' ಚಿತ್ರದ ಪ್ರಥಮ ಪ್ರತಿ ಸದ್ಯದಲ್ಲೇ ಸಿದ್ದವಾಗಲಿದೆ. ಸಂಪೂರ್ಣ ಚಿತ್ರೀಕರಣ ಮುಗಿಸಿದ್ದ ಚಿತ್ರತಂಡ ಒಳ್ಳೆಯ ದಿನಕ್ಕಾಗಿ ಕಾಯುತ್ತಿತ್ತು. ಇದೀಗ, ಥಿಯೇಟರ್‌ಗಳಲ್ಲಿ 100% ಅನುಮತಿ ಸಿಕ್ಕಿರುವ ಹಿನ್ನೆಲೆ ಚಿತ್ರ ದೀಪಾವಳಿ ಹಬ್ಬಕ್ಕೆ ತೆರೆಗೆ ತರಲು ನಿರ್ಧರಿಸಿದ್ದಾರೆ.

  ಡಾರ್ಲಿಂಗ್ ಕೃಷ್ಣ ಜೊತೆ ಇಬ್ಬರು ಸ್ಟಾರ್ ನಾಯಕಿಯರು ರೊಮ್ಯಾನ್ಸ್ಡಾರ್ಲಿಂಗ್ ಕೃಷ್ಣ ಜೊತೆ ಇಬ್ಬರು ಸ್ಟಾರ್ ನಾಯಕಿಯರು ರೊಮ್ಯಾನ್ಸ್

  ಮುಗಿಲ್ ಪೇಟೆ ಚಿತ್ರದ ಟ್ರೇಲರ್ ರಿಲೀಸ್ ಆಗಿ ಭಾರಿ ಮೆಚ್ಚುಗೆ ಪಡೆದುಕೊಂಡಿದ್ದು, ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

   Shrikrishnagamildotcom movie releasing on Oct 15, Mugilpete Movie Releasing on Deepawali

  ಈ ಸಿನಿಮಾದಲ್ಲಿ ಮನು ರವಿಚಂದ್ರನ್‌ಗೆ ನಾಯಕಿಯಾಗಿ ಕಯಾದು ಲೋಹರ್ ನಟಿಸಿದ್ದಾರೆ. ಇವರ ಜೊತೆ ರಿಷಿ, ಅವಿನಾಶ್, ತಾರಾ ಅನುರಾಧ, ಸಾಧುಕೋಕಿಲ, ರಂಗಾಯಣ ರಘು ಹೀಗೆ ಹೆಸರಾಂತ ಕಲಾವಿದರು ಕಾಣಿಸಿಕೊಂಡಿದ್ದಾರೆ. ಭರತ್ ಎಸ್. ನಾವುಂದ ರಚನೆ ಹಾಗೂ ನಿರ್ದೇಶನದ ಈ ಚಿತ್ರವನ್ನು ಮೋತಿ ಮೂವೀ ಮೇಕರ್ಸ್ ಲಾಂಛನದಲ್ಲಿ ರಕ್ಷಾ ವಿಜಯ್ ಕುಮಾರ್ ನಿರ್ಮಿಸಿದ್ದಾರೆ. ಈ ಹಿಂದೆ 'ಅಡಚಣೆಗಾಗಿ ಕ್ಷಮಿಸಿ' ಚಿತ್ರ ನಿರ್ದೇಶಿಸಿದ್ದ ಭರತ್ ಅವರಿಗೆ ಇದು ಎರಡನೇ ಚಿತ್ರ.

  ಒಟ್ಟು ಆರು‌ ಸುಮಧುರ ಹಾಡುಗಳಿರುವ ಈ‌ ರೊಮ್ಯಾಂಟಿಕ್ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದಾರೆ. ರವಿವರ್ಮ (ಗಂಗು) ಅವರ ಛಾಯಾಗ್ರಹಣ 'ಮುಗಿಲ್ ಪೇಟೆ'ಯ ಸೌಂದರ್ಯವನ್ನು ಹೆಚ್ಚಿಸಿದೆ.‌ ಅರ್ಜುನ್ ಕಿಟ್ಟು ಸಂಕಲನ, ಡಾ ರವಿವರ್ಮ ಮತ್ತು ವಿಜಯ್ ಸಾಹಸ ನಿರ್ದೇಶನ, ಹರ್ಷ, ಮುರಳಿ, ಮೋಹನ್ ನೃತ್ಯ ನಿರ್ದೇಶನ ಹಾಗೂ ಸತೀಶ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಹನುಮಂತು ನಿರ್ಮಾಣ ನಿರ್ವಾಹಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

  English summary
  Darling Krishna Starrer Shrikrishnagamildotcom movie releasing on Oct 15 dussehra, Manoranjan starrer Mugilpete Movie Releasing on Deepawali.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X