'ಕಬ್ಜ' ನಿರ್ದೇಶಕ ಫಾಲೋ ಮಾಡಿ ವೇದಿಕೆ ಮೇಲೆ ಕಾಲೆಳೆದ ಶ್ರಿಯಾ ಶರಣ್: ನಾಚಿ ನೀರಾದ ಆರ್‌. ಚಂದ್ರು

By ಫಿಲ್ಮಿಬೀಟ್ ಡೆಸ್ಕ್

'ಕಬ್ಜ' ಸಿನಿಮಾ ಬಿಡುಗಡೆ ಇನ್ನು ಎರಡು ದಿನ ಬಾಕಿಯಿದೆಯಷ್ಟೇ. ಅದಕ್ಕೂ ಮುನ್ನ ಚಿತ್ರತಂಡ ಬೆಂಗಳೂರಿನಲ್ಲಿ ಪ್ರಿ ರಿಲೀಸ್ ಇವೆಂಟ್ ಮಾಡಿ ಮುಗಿಸಿದೆ. ದೊಡ್ಡ ಮಟ್ಟದಲ್ಲಿ ಈ ಇವೆಂಟ್ ಹಮ್ಮಿಕೊಂಡಿದ್ದು, ಚಿತ್ರರಂಗದ ಪ್ರಮುಖ ತಾರೆಯರು ಆಗಮಿಸಿ, ಸಿನಿಮಾಗೆ ಶುಭ ಹಾರೈಸಿದ್ದಾರೆ.

ಉಪೇಂದ್ರ, ಕಿಚ್ಚ ಸುದೀಪ್, ಶಿವರಾಜ್‌ಕುಮಾರ್ ಮೂವರೂ ಒಂದೇ ಸಿನಿಮಾದಲ್ಲಿ ನಟಿಸಿರೋ ಈ ಸಿನಿಮಾ ಬಾಕ್ಸಾಫೀಸ್ 'ಕಬ್ಜ' ಮಾಡೋಕೆ ರೆಡಿಯಾಗಿದೆ. ಹೀಗಾಗಿ ಕೊನೆಯ ಹಂತದ ಪ್ರಚಾರ ಮಾಡಿದೆ. ಅದ್ಧೂರಿಯಾಗಿ ನಡೆದ ಈ ಪ್ರಿ-ರಿಲೀಸ್ ಇವೆಂಟ್‌ ಸಿನಿಪ್ರಿಯರಿಗೆ ಮಾಹಿತಿಯಷ್ಟೇ ಅಲ್ಲ, ಸಖತ್ ಮನರಂಜನೆಯನ್ನೂ ನೀಡಿದೆ. ಇದೇ ಇವೆಂಟ್‌ನಲ್ಲಿ ಬಹುಭಾಷಾ ನಟಿ ಶ್ರಿಯಾ ಶರಣ್ ಹಾಗೂ ನಿರ್ದೇಶಕ ಆರ್‌ ಚಂದ್ರು ನಡುವಿನ ಬಾಂಧವ್ಯ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತ್ತು.

Shriya Saran And Tanya Hope Making Fun Of Director R Chandru In Kabzaa Pre Release Event In Bengaluru

ಆರ್‌ ಚಂದ್ರು ಪಕ್ಕದಲ್ಲೇ ನಿಂತ ಶ್ರಿಯಾ ಶರಣ್

ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶಿಸಿ, ನಿರ್ಮಿಸಿರೋ ಆರ್‌ ಚಂದ್ರು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಐದು ಭಾಷೆಯಲ್ಲಿ ಏಕಕಾಲಕ್ಕೆ ಸಿನಿಮಾ ರಿಲೀಸ್ ಆಗುತ್ತಿದ್ದರಿಂದ ಕೊನೆಯ ಹಂತದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಪ್ರಿ ರಿಲೀಸ್ ಇವೆಂಟ್‌ಗೂ ಚಂದ್ರು ಭಾಗಿಯಾಗಿರಲಿಲ್ಲ. ನಿನ್ನೆ(ಮಾರ್ಚ್ 14) ನಡೆದ ಇವೆಂಟ್‌ನಲ್ಲಿ ಚಂದ್ರು ಪ್ರತ್ಯಕ್ಷ ಆಗಿದ್ದರು. ಈ ವೇದಿಕೆ ಮೇಲೆ ಕಿಚ್ಚ ಸುದೀಪ್‌ಯಿಂದ ಹಿಡಿದು ಶ್ರಿಯಾ ಶರಣ್‌ವರೆಗೂ ಆರ್ ಚಂದ್ರು ಮೇಲೆ ಪ್ರೀತಿ ತೋರಿಸಿದ್ದಾರೆ.

'ಕಬ್ಜ' ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಕೊನೆಯ ಹಂತ ತಲುಪಿತ್ತು. ಈ ವೇಳೆ ಇಡೀ ತಂಡ ವೇದಿಕೆ ಮೇಲೆ ಒಟ್ಟಿಗೆ ಕ್ಯಾಮರಾಗೆ ಪೋಸ್ ಕೊಡುತ್ತಿದ್ದರು. ನಟಿ ತಾನ್ಯಾ ಹೋಪ್ ಪಕ್ಕದಲ್ಲಿ ನಿಂತಿದ್ದ ಆರ್ ಚಂದ್ರು, ಅಲ್ಲಿಂದ ಡಾಲಿ ಧನಂಜಯ್ ಪಕ್ಕ ಹೋಗಿ ನಿಂತಿದ್ದರು. ಇದನ್ನು ಗಮನಿಸಿದ ಶ್ರಿಯಾ ಶರಣ್, ಫಾಲೋ ಮಾಡಿ ಆರ್ ಚಂದ್ರು ಪಕ್ಕದಲ್ಲಿ ನಿಂತರು. ಆ ಬಳಿಕ ತಾನ್ಯಾ ಹೋಪ್ ಕೂಡ ಸೇರಿಕೊಂಡರು. ಈ ಘಟನೆ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸುವಂತೆ ಮಾಡಿತ್ತು.

Shriya Saran And Tanya Hope Making Fun Of Director R Chandru In Kabzaa Pre Release Event In Bengaluru

ನಾಚಿ ನೀರಾದ ಆರ್‌. ಚಂದ್ರು

ಶ್ರಿಯಾ ಶರಣ್ ಪ್ರತಿ ಸಂದರ್ಶನ ನೀಡುವಾಗಲೂ ನಿರ್ದೇಶಕ ಆರ್‌ ಚಂದ್ರು ಗುಣಗಾನ ಮಾಡುತ್ತಲೇ ಇದ್ದಾರೆ. ಚಂದ್ರು ಸಿನಿಮಾ ಕಥೆಯನ್ನು ಹೇಗೆ ವಿವರಿಸುತ್ತಾರೆ ಎನ್ನುವುದರಿಂದ ಹಿಡಿದು, ಕೊನೆಯ ಪ್ರಿ ರಿಲೀಸ್ ಇವೆಂಟ್‌ವರೆಗೂ ನಿರ್ದೇಶಕರ ಬೆಂಬಲಕ್ಕೆ ನಿಂತಿದ್ದಾರೆ. ಈಗ ವೇದಿಕೆ ಮೇಲೆ ಅವರ ಪಕ್ಕದಲ್ಲೇ ನಿಂತು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ್ರು. ಈ ವೇಳೆ ಚಂದ್ರು ನಾಚಿ ನೀರಾದರು.

ಹಾಗಂತ ಆರ್ ಚಂದ್ರು ಬಗೆ ಶ್ರಿಯಾ ಶರಣ್ ಒಬ್ಬರೇ ಅಲ್ಲ. ಕಿಚ್ಚ ಸುದೀಪ್ ಹಾಗೂ ಉಪೇಂದ್ರ ವೇದಿಕೆ ಮೇಲೆ ಪಾಸಿಟಿವ್ ಆಗಿ ಮಾತಾಡಿದ್ದಾರೆ. 'ಕಬ್ಜ'ದಂತಹ ಸಿನಿಮಾಗೆ ಕೈ ಹಾಕಿದ್ದ ಚಂದ್ರು ಜೊತೆ ನಿಂತಿದ್ದಾರೆ.

ಇನ್ನು 'ಕಬ್ಜ' ಪ್ರಿ ರಿಲೀಸ್ ಇವೆಂಟ್‌ನಲ್ಲಿ ಕನ್ನಡ ಚಿತ್ರರಂಗದಿಂದ ನೆನಪಿರಲಿ ಪ್ರೇಮ್,ಡಾಲಿ ಧನಂಜಯ್ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಹೀಗಾಗಿ 'ಕಬ್ಜ' ಪ್ರಿ ರಿಲೀಸ್ ಇವೆಂಟ್‌ಗೆ ಮತ್ತಷ್ಟು ಮೆರುಗು ಬಂದಂತಾಗಿತ್ತು.

More from Filmibeat

English summary
Shriya Saran And Tanya Hope Making Fun Of Director R Chandru In Kabzaa PreRelease Event In Bengaluru, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X