For Quick Alerts
  ALLOW NOTIFICATIONS  
  For Daily Alerts

  ಕೊರೊನಾದಿಂದ ತಪ್ಪಿಸಿಕೊಂಡ ಪತಿಯ ಹುಟ್ಟುಹಬ್ಬ ಆಚರಿಸಿದ ಶ್ರೀಯಾ ಸರಣ್

  |

  ಕೊರೊನಾ ವೈರಸ್ ಕಾರಣದಿಂದ ಎರಡನೆಯ ವಿವಾಹ ವಾರ್ಷಿಕೋತ್ಸವದ ಸಂಭ್ರಮವನ್ನು ಆಚರಿಸುವ ಅವಕಾಶ ತಪ್ಪಿಸಿಕೊಂಡಿದ್ದ ದಕ್ಷಿಣ ಭಾರತದ ನಟಿ ಶ್ರೀಯಾ ಸರಣ್, ತಮ್ಮ ಪತಿಯ ಹುಟ್ಟುಹಬ್ಬದ ಸಂಭ್ರಮವನ್ನು ಕ್ವಾರೆಂಟೀನ್‌ನಲ್ಲಿ ಆಚರಿಸುತ್ತಿದ್ದಾರೆ.

  ಜಂಟಲ್ ಮೆನ್ ಚಿತ್ರದ ಟ್ರೇಲರ್ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ ಸ್ಯಾಂಡಲ್ ವುಡ್ ತಾರೆಯರು | GENTLEMAN | PRAJWAL

  ಇಂದು ದಕ್ಷಿಣ ಭಾರತದ ನಟಿ ಶ್ರೀಯಾ ಸರಣ್ ಪತಿಯ ಜನ್ಮದಿನ. ಆದರೆ ಅವರು ಅದನ್ನು ಸಂಭ್ರಮಿಸುವ ಸ್ಥಿತಿಯಲ್ಲಿರಲಿಲ್ಲ. ಜನ್ಮದಿನವನ್ನು ಆಚರಿಸುವುದೊ ಅಥವಾ ಗಂಡ ಅನುಭವಿಸುತ್ತಿರುವ ನೋವಿಗೆ ಅವರನ್ನು ಆರೈಕೆ ಮಾಡುವುದಷ್ಟೇ ಉಳಿಯಲಿದೆಯೇ ಎಂಬ ಕಳವಳ ಅವರಲ್ಲಿತ್ತು. ಅವರ ಆತಂಕ ದೂರವಾಗಿದೆ. ಹೀಗಾಗಿ ಪತಿಯೊಂದಿಗೆ ಪುಟ್ಟದಾಗಿ ಸಂಭ್ರಮಿಸುತ್ತಿದ್ದಾರೆ. ಮುಂದೆ ಓದಿ...

  ಸೋಂಕು ಬರಬಹುದು ಎಂದು ಮನೆಗೆ ವಾಪಸ್

  ಸೋಂಕು ಬರಬಹುದು ಎಂದು ಮನೆಗೆ ವಾಪಸ್

  ಈಗಾಗಲೇ ಸುದ್ದಿಯಾಗಿರುವಂತೆ ಶ್ರೀಯಾ ಸರಣ್ ಪತಿ ಆಂಡ್ರೆ ಕೋಶಿವ್ ಅವರಲ್ಲಿ ಕೊರೊನಾ ವೈರಸ್ ಲಕ್ಷಣಗಳು ಕಾಣಿಸಿಕೊಂಡಿದ್ದವು. ಆದರೆ ಅದು ವೈರಸ್‌ನಿಂದಲೇ ಆಗಿರುವ ಆರೋಗ್ಯ ಸಮಸ್ಯೆ ಎನ್ನುವುದು ದೃಢಪಟ್ಟಿರಲಿಲ್ಲ. ಆಸ್ಪತ್ರೆಯ ವೈದ್ಯರು ಕೂಡ ಅವರನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ಇಷ್ಟು ಗಂಭೀರ ಸಮಸ್ಯೆ ಇರುವ ನೀವು ಆಸ್ಪತ್ರೆಗೆ ದಾಖಲಾದರೆ ಇಲ್ಲಿಯ ಕಾರಣದಿಂದಲೇ ಕೊರೊನಾ ವೈರಸ್ ಬರಬಹುದು ಎಂದು ಹೇಳಿ ಮನೆಗೆ ವಾಪಸ್ ಕಳುಹಿಸಿದ್ದರು.

  ಶ್ರಿಯಾ ಪತಿಗೆ ಕೊರೊನಾ ಲಕ್ಷಣ: ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ ವೈದ್ಯರುಶ್ರಿಯಾ ಪತಿಗೆ ಕೊರೊನಾ ಲಕ್ಷಣ: ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ ವೈದ್ಯರು

  ಹ್ಯಾಪಿ ಬರ್ಥಡೇ ಹಾರ್ಟ್‌ ಬೀಟ್

  ಹ್ಯಾಪಿ ಬರ್ಥಡೇ ಹಾರ್ಟ್‌ ಬೀಟ್

  ಶ್ರೀಯಾ ಪತಿ ಆಂಡ್ರೆ ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಶ್ರೀಯಾ ಅವರಿಗೆ ದೊರೆತ ಗಿಫ್ಟ್ ಇದು. ಪತಿಯ ಹುಟ್ಟುಹಬ್ಬಕ್ಕೆ ತಮ್ಮಿಬ್ಬರ ಸುಂದರವಾದ ಕಪ್ಪು-ಬಿಳುಪು ಚಿತ್ರವನ್ನು ಶ್ರೀಯಾ ಹಂಚಿಕೊಂಡಿದ್ದಾರೆ. 'ಹ್ಯಾಪಿ ಬರ್ಥಡೇ ಮೈ ಹಾರ್ಟ್ ಬೀಟ್' ಎಂದು ಶ್ರೀಯಾ ಬರೆದುಕೊಂಡಿದ್ದಾರೆ.

  ವಾರ್ಷಿಕೋತ್ಸವ ಆಚರಣೆಗೆ ಅವಕಾಶ ಸಿಗಲಿಲ್ಲ

  ವಾರ್ಷಿಕೋತ್ಸವ ಆಚರಣೆಗೆ ಅವಕಾಶ ಸಿಗಲಿಲ್ಲ

  ಸ್ಪೇನ್‌ನ ಆಂಡ್ರೆ ಕೋಶಿವ್ ಎಂಬುವವರು ಮಾರ್ಚ್ 13ರಂದು ಮದುವೆಯಾಗಿರುವ ಶ್ರೀಯಾ, ಸ್ಪೇನ್‌ನಲ್ಲಿಯೇ ನೆಲೆಸಿದ್ದಾರೆ. ಮಾರ್ಚ್ 13ರಂದು ಎರಡನೆಯ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಲು ಹೊರಗೆ ಹೋಗಿದ್ದ ಜೋಡಿಗೆ, ರೆಸ್ಟೋರೆಂಟ್‌ಗಳೆಲ್ಲವೂ ಮುಚ್ಚಿಕೊಂಡಿದ್ದನ್ನು ಕಾಣಿಸಿತ್ತು. ಅಲ್ಲಿಂದ ಬಾರ್ಸಿಲೋನಾದಲ್ಲಿ ಎಲ್ಲವೂ ಬದಲಾಗಿತ್ತು ಎಂಬುದನ್ನು ಅವರು ಸಂದರ್ಶನವೊಂದರಲ್ಲಿ ಇತ್ತೀಚೆಗೆ ತಿಳಿಸಿದ್ದಾರೆ.

  ಶ್ರೀಯಾ ಶರಣ್ ಮದುವೆ ಆಗಿರುವ ಹುಡುಗ ಸಾಮಾನ್ಯದವನಲ್ಲ.!ಶ್ರೀಯಾ ಶರಣ್ ಮದುವೆ ಆಗಿರುವ ಹುಡುಗ ಸಾಮಾನ್ಯದವನಲ್ಲ.!

  ಕೋವಿಡ್ ಇಲ್ಲ ಎಂದ ವೈದ್ಯರು

  ಕೋವಿಡ್ ಇಲ್ಲ ಎಂದ ವೈದ್ಯರು

  ಮನೆಯಿಂದ ಒಬ್ಬರು ಮಾತ್ರ ಅಗತ್ಯ ವಸ್ತು ಖರೀದಿಗೆ ಬರಬೇಕೆಂದು ಪೊಲೀಸರು ಕಡ್ಡಾಯ ಸೂಚನೆ ಹೊರಡಿಸಿದ್ದರು. ಈ ಸಂಕಷ್ಟದ ನಡುವೆ ಪತಿಯಲ್ಲಿ ಒಣ ಕೆಮ್ಮು ಮತ್ತು ಜ್ವರ ಕಾಣಿಸಿಕೊಂಡಿದ್ದರಿಂದ ಅವರ ಸಂಕಷ್ಟ ಹೆಚ್ಚಾಗಿತ್ತು. ಕೂಡಲೇ ಆಸ್ಪತ್ರೆಗೆ ಧಾವಿಸಿದಾಗ ಪರೀಕ್ಷಿಸಿದ ವೈದ್ಯರು, ಕೋವಿಡ್ ಲಕ್ಷಣಗಳಿಲ್ಲ. ಆದರೆ ನೀವಿಲ್ಲಿದ್ದರೆ ಸೋಂಕು ಬರುವ ಸಾಧ್ಯತೆ ಹೆಚ್ಚು. ಮನೆಗೆ ಹೋಗಿ ಎಂದು ಕಳುಹಿಸಿದ್ದರು.

  ಪತಿ ಗುಣಮುಖ

  ಪತಿ ಗುಣಮುಖ

  ಬಳಿಕ ದಂಪತಿ ಪ್ರತ್ಯೇಕ ಕೊಠಡಿಗಳಲ್ಲಿ ವಾಸಿಸಲು ನಿರ್ಧರಿಸಿದ್ದರು. ಪತಿಗೆ ಸೂಕ್ತ ಔಷಧಗಳನ್ನು ಶ್ರೀಯಾ ತಂದುಕೊಟ್ಟರು. ಬಳಿಕ ಆಂಡ್ರೆ ಚೇತರಿಸಿಕೊಂಡರಂತೆ. ಯೋಗ, ಧ್ಯಾನ, ಅಡುಗೆ, ಓದುವುದು, ಸಿನಿಮಾ ನೋಡುವ ಮೂಲಕ ಶ್ರೀಯಾ ತಮ್ಮನ್ನು ಬಿಜಿಯಾಗಿರಿಸಿಕೊಳ್ಳುತ್ತಿದ್ದಾರಂತೆ. ಪ್ರತಿ ದಿನವೂ ರಾತ್ರಿ 8 ಗಂಟೆಗೆ ಹತ್ತು ನಿಮಿಷ ಬಾಲ್ಕನಿಗೆ ಹೊರಬಂದು ಎಲ್ಲರೂ ಚಪ್ಪಾಳೆ ತಟ್ಟುತ್ತಾ ಹಾಡು ಹಾಡುತ್ತಾರೆ ಎಂಬುದನ್ನು ಶ್ರೀಯಾ ತಿಳಿಸಿದ್ದಾರೆ.

  English summary
  South Indian actress Shriya Saran has celebrated her husband Andrei Koscheev's birthday in quarantine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X