For Quick Alerts
  ALLOW NOTIFICATIONS  
  For Daily Alerts

  ವೈರಲ್ ಆಗಿದೆ ನಟಿ ಶ್ರೀಯಾ ಶರಣ್ ಚುಂಬನದ ದೃಶ್ಯ

  |
  Shriya Saran kissed to her husband in Public | FILMIBEAT KANNADA

  ಬಹುಭಾಷ ನಟಿ ಶ್ರೀಯಾ ಶರಣ್ ವರ್ಷದ ಬಳಿಕ ಮತ್ತೆ ಸುದ್ದಿಯಲ್ಲಿದ್ದಾರೆ. ರಷ್ಯಾ ಮೂಲಕ ಆಂಡ್ರೇ ಕೊಸ್ಚೀವ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಶ್ರೀಯಾ ಚಿತ್ರರಂಗದಿಂದ ಕೊಂಚ ಅಂತರ ಕಾಯ್ದು ಕೊಂಡಿದ್ದಾರೆ. ಇತ್ತೀಚಿಗೆ ಎನ್.ಟಿ.ಆರ್ ಜೀವನಧಾರಿತ ಚಿತ್ರದಲ್ಲಿ ಕೊನೆಯದಾಗಿ ಶ್ರೀಯಾ ಕಾಣಿಸಿಕೊಂಡಿದ್ದರು.

  ಮದುವೆ ನಂತರ ಶ್ರೀಯಾ ಪತಿ ಆಂಡ್ರೇ ಕೊಸ್ಚೀವ್ ಜೊತೆ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದ್ರೆ ಇತ್ತೀಚಿಗೆ ಬಾಲಿವುಡ್ ನಲ್ಲಿ ನಡೆದ ಪಾರ್ಟಿವೊಂದರಲ್ಲಿ ಶ್ರೀಯಾ ಕಾಣಿಸಿಕೊಂಡಿದ್ದರು. ನಿರ್ಮಾಪಕ ರಮೇಶ್ ತೌರಾನಿಯ ಆಯೋಜಿಸಿದ್ದ ಪಾರ್ಟಿಯಲ್ಲಿ ಅನೇಕ ಬಾಲಿವುಡ್ ಸ್ಟಾರ್ ಭಾಗಿಯಾಗಿದ್ದರು.

  ಶ್ರೀಯಾ ಶರಣ್ ಮದುವೆ ಆಗಿರುವ ಹುಡುಗ ಸಾಮಾನ್ಯದವನಲ್ಲ.!ಶ್ರೀಯಾ ಶರಣ್ ಮದುವೆ ಆಗಿರುವ ಹುಡುಗ ಸಾಮಾನ್ಯದವನಲ್ಲ.!

  ಶ್ರೀಯಾ ಪತಿ ಜೊತೆ ಎಂಟ್ರಿ ಕೊಟ್ಟಿದ್ದರು. ಬಿಳಿ ಬಣ್ಣದ ಲೆಹಂಗಾ ಮತ್ತು ದೊಡ್ಡ ಬಿಂದಿ ಇಟ್ಟು ಕಂಗೊಳಿಸುತ್ತಿದ್ದ ಶ್ರೀಯಾ, ಪತಿ ಜೊತೆ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ನಂತರ ಪತಿ ಆಂಡ್ರೇ ಕೊಸ್ಚೀವ್ ಗೆ ತುಟಿಗೆ ಚುಂಬಿಸಿದ್ದಾರೆ. ಶ್ರೀಯಾ ಚುಂಬನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಈ ಜೋಡಿಯ ಪ್ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಇಬ್ಬರು ಸುಂದರವಾಗಿ ಕಾಣುತ್ತಿದ್ದೀರಾ, ಜೋಡಿ ಸೂಪರ್ ಎಂದು ಕಮೆಂಟ್ ಮಾಡುತ್ತಿದ್ದಾರೆ. ನಟಿ ಶ್ರೀಯಾ 2018ರಲ್ಲಿ ರಷ್ಯಾ ಮೂಲಕ ಆಂಡ್ರೇ ಕೊಸ್ಚೀವ್ ಜೊತೆ ಹಸೆಮಣೆ ಏರಿದ್ದರು. ಭಾರತೀಯ ಸಂಪ್ರದಾಯದ ಪ್ರಕಾರ ಶ್ರೀಯಾ ಮದುವೆ ನೆರವೇರಿತ್ತು.

  Shriya Saran Kissed To Her Husband At Ramesh Taurani’s Diwali Bash

  ಮೊನ್ನೆ ಮೊನ್ನೆಯಷ್ಟೆ ಶ್ರೀಯಾ ಕರ್ವ ಚೌತ್ ಆಚರಣೆ ಮಾಡಿರುವ ಫೋಟೋ ಕೂಡ ವೈರಲ್ ಆಗತ್ತು. ಶ್ರೀಯಾ ಸದ್ಯ ತಮಿಳು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೂಲತಹ ಉತ್ತರ ಭಾರತದವರಾದ ಶ್ರೀಯಾ ಖ್ಯಾತಿಗಳಿಸಿದ್ದು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ. ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ 'ಅರಸು' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಂತರ ನೆನಪಿರಲಿ ಪ್ರೇಮ್ ಅಭಿನಯದ 'ಚಂದ್ರ' ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ.

  Read more about: shriya saran
  English summary
  Multi Language Actress Shriya Saran kissed to her husband at Ramesh Taurani’s Diwali bash.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X