»   » ಬಲಗಾಲಿಟ್ಟು ಒಳಗೆ ಬಂದ 'ಚಂದ್ರ'ಮುಖಿ ಶ್ರಿಯಾ

ಬಲಗಾಲಿಟ್ಟು ಒಳಗೆ ಬಂದ 'ಚಂದ್ರ'ಮುಖಿ ಶ್ರಿಯಾ

Posted By:
Subscribe to Filmibeat Kannada

ಕನ್ನಡಕ್ಕೆ ಮತ್ತೊಬ್ಬ ಚಂದ್ರಮುಖಿಯ ಆಗಮನವಾಗಿದೆ. ದಕ್ಷಿಣ ಭಾರತದಲ್ಲಿ ಒಂದು ಸುತ್ತು ಹಾಕಿ ಬಾಲಿವುಡ್‌ಗೂ ಜಿಗಿದು ಅಲ್ಲಿ ಒಂದಷ್ಟು ಹೆಸರು ಮಾಡಿ ಈಗ ಕನ್ನಡ ಚಿತ್ರರಂಗಕ್ಕೆ ಬಲಗಾಲಿಟ್ಟು ಬಂದಿದ್ದಾರೆ. ರೂಪಾ ಅಯ್ಯರ್ ನಿರ್ದೇಶಿಸುತ್ತಿರುವ ಕನ್ನಡ, ತಮಿಳು ದ್ವಿಭಾಷಾ ಚಿತ್ರ 'ಚಂದ್ರ' ಚಿತ್ರಕ್ಕೆ ಹುಣ್ಣಿಮೆ ಚಂದ್ರನ ಆಗಮನವಾಗಿದೆ.


ಬೆಂಗಳೂರು ಚೌಡಯ್ಯ ಸ್ಮಾರಕ ಭವನದಲ್ಲಿ 'ಚಂದ್ರ' ಚಿತ್ರಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ರಿಪ್ಪನ್ಸ್ ಇಂಡಿಯಾ ಲಿಮಿಟೆಡ್‌ನ ರಿಪ್ಪನ್ ಮಲ್ಹೋತ್ರಾ ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಅವರು 'ಚಂದ್ರ' ಚಿತ್ರಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಪ್ರಣಯರಾಜ ಡಾ.ಶ್ರೀನಾಥ್, ರೂಪಾ ಅಯ್ಯರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಚಿತ್ರದ ನಾಯಕ ನಟ ಲವ್ಲಿ ಸ್ಟಾರ್ ಪ್ರೇಮ್ ಕುಮಾರ್ ಜೊತೆಗೂ ಶ್ರಿಯಾ ಸರನ್ ಹೆಜ್ಜೆ ಹಾಕಿದರು. ಬಳಿಕ ಅವರು ಮಾತನಾಡುತ್ತಾ, "ಚಿತ್ರಕತೆ ಇಷ್ಟವಾಯಿತು. ಚಿತ್ರದಲ್ಲಿನ ನನ್ನ ಪಾತ್ರಕ್ಕೆ ಹಲವು ಆಯಾಮಗಳಿವೆ. ಹಾಗಾಗಿ ಈ ಚಿತ್ರವನ್ನು ಒಪ್ಪಿಕೊಂಡೆ." ಎಂದರು. (ಏಜೆನ್ಸೀಸ್)

English summary
South beauty Shriya Saran looking extremely grand appeared with lovely star Premkumar as the curtains were unveiled at 'Chandra' launch by Rippon Malhotra of Rippsons India Limited and ace music director Hamsalekha. Dr Srinath, Roopa Iyer and many more dais applauded for the entry given by Shriya Saran and Premkumar.
Please Wait while comments are loading...