For Quick Alerts
  ALLOW NOTIFICATIONS  
  For Daily Alerts

  ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ 'ಚಂದ್ರ'ಮುಖಿ ಶ್ರಿಯಾ ಸರಣ್

  By Harshitha
  |

  ಚಂದನವನದ 'ಚಂದ್ರ' ಚಕೋರಿ ಶ್ರಿಯಾ ಸರಣ್ ಮದುವೆ ಆಗಲು ಮನಸ್ಸು ಮಾಡಿದ್ದಾರಂತೆ ಎಂಬ ಗುಸು-ಗುಸು ಕಳೆದ ಕೆಲ ದಿನಗಳ ಹಿಂದೆ ಬಿಟೌನ್ ನಲ್ಲಿ ಕೇಳಿಬಂದಿತ್ತು.

  ಆದ್ರೆ, ಅದೆಲ್ಲ ಬರೀ ಸುಳ್ಳು ಎಂದು ಶ್ರಿಯಾ ಸರಣ್ ಹಾಗೂ ಆಕೆಯ ತಾಯಿ ಅಂದು ಸ್ಪಷ್ಟ ಪಡಿಸಿದ್ದರು. ಈಗ ನೋಡಿದ್ರೆ, ಆ ಗುಸುಗುಸು-ಪಿಸುಪಿಸು ಮಾತುಗಳೇ ನಿಜ ಆಗುವ ಹಾಗೆ ಕಾಣುತ್ತಿದೆ.

  ಮಾರ್ಚ್ 17, 18 ಹಾಗೂ 19 ರಂದು ಶ್ರಿಯಾ ಸರಣ್ ಮದುವೆ ಉದಯ್ ಪುರದಲ್ಲಿ ನಡೆಯಲಿದೆ ಎಂದು ವರದಿ ಆಗಿದೆ. ರಷ್ಯದ Andrei Koscheev ಎಂಬುವರ ಕೈಹಿಡಿಯಲಿದ್ದಾರೆ ನಟಿ ಶ್ರಿಯಾ ಸರಣ್.

  ಬಹುಕಾಲದಿಂದ ರಷ್ಯದ Andrei Koscheev ಎಂಬುವವರನ್ನ ಶ್ರಿಯಾ ಸರಣ್ ಪ್ರೇಮಿಸುತ್ತಿದ್ದರು. ಇಬ್ಬರ ಪ್ರೇಮಕ್ಕೆ ಕುಟುಂಬದ ಒಪ್ಪಿಗೆ ಸಿಕ್ಕಿದೆ. ಹೀಗಾಗಿ ಉದಯ್ ಪುರದ ಅರಮನೆಯಲ್ಲಿ ಈ ಜೋಡಿಯ ವಿವಾಹ ಮಹೋತ್ಸವ ನಡೆಯಲಿದೆ. ಹಿಂದು ಸಂಪ್ರದಾಯದ ಪ್ರಕಾರ, ಮದುವೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

  ಮದುವೆಗೆ ಈಗಾಗಲೇ ಶಾಪಿಂಗ್ ಮುಗಿಸಿರುವ ಶ್ರಿಯಾ ಸರಣ್, ಸ್ನೇಹಿತರು ಹಾಗೂ ಕುಟುಂಬಸ್ಥರಿಗೆ ಆಹ್ವಾನ ನೀಡುವಲ್ಲಿ ಬಿಜಿಯಾಗಿದ್ದಾರಂತೆ.

  ಓಹೋ... 'ಚಂದ್ರ' ಚಕೋರಿ ಶ್ರಿಯಾಗೆ ಮದುವೆ ಅಂತೆ! ಹುಡುಗ ಯಾರಂತೆ?ಓಹೋ... 'ಚಂದ್ರ' ಚಕೋರಿ ಶ್ರಿಯಾಗೆ ಮದುವೆ ಅಂತೆ! ಹುಡುಗ ಯಾರಂತೆ?

  ಯಾರೀ ಗಾಸಿಪ್ ಹಬ್ಬಿಸಿದ್ದು ಶ್ರಿಯಾ ಮದುವೆ ಆಗ್ತಾರೆ ಅಂತ.?! ಯಾರೀ ಗಾಸಿಪ್ ಹಬ್ಬಿಸಿದ್ದು ಶ್ರಿಯಾ ಮದುವೆ ಆಗ್ತಾರೆ ಅಂತ.?!

  English summary
  According to the latest reports, Shriya Saran to marry her Russian Boyfriend Andrei Koscheev in March.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X