For Quick Alerts
  ALLOW NOTIFICATIONS  
  For Daily Alerts

  'ಕನ್ನಡ ಚಿತ್ರಗಳ ಬಗ್ಗೆ ಹೆಚ್ಚು ಗೌರವ ಇದೆ' ಎಂದ ಕಮಲ್ ಪುತ್ರಿ ಶ್ರುತಿ ಹಾಸನ್

  By Harshitha
  |

  'ಧ್ರುವ ಸರ್ಜಾ ಜೊತೆಗೆ 'ಪೊಗರು' ಚಿತ್ರದಲ್ಲಿ ಶ್ರುತಿ ಹಾಸನ್ ನಟಿಸುತ್ತಾರಂತೆ' ಎಂಬ ಗಾಸಿಪ್ ಶ್ರುತಿ ಹಾಸನ್ ಕಿವಿಗೂ ಬಿದ್ಮೇಲೆ, ''ಸದ್ಯಕ್ಕೆ ಕನ್ನಡದ ಯಾವುದೇ ಸಿನಿಮಾದಲ್ಲಿ ನಟಿಸುವ ಪ್ಲಾನ್ ನನಗಿಲ್ಲ. ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಬಗ್ಗೆ ನಾನು ಯಾರೊಂದಿಗೂ ಮಾತುಕತೆ ನಡೆಸಿಲ್ಲ. ಎಲ್ಲವೂ ರೂಮರ್ ಅಷ್ಟೇ'' ಎಂದು ನಟಿ ಶ್ರುತಿ ಹಾಸನ್ ಟ್ವಿಟ್ಟರ್ ನಲ್ಲಿ ಸ್ಪಷ್ಟ ಪಡಿಸಿದ್ದರು.

  ಶ್ರುತಿ ಹಾಸನ್ ರವರ ಈ ಟ್ವೀಟ್ ನೋಡಿ ಕನ್ನಡಿಗರು ಸಿಡಿಮಿಡಿಗೊಂಡಿದ್ದರು. ಕನ್ನಡ ಸಿನಿಮಾಗಳ ಬಗ್ಗೆ, ಕನ್ನಡ ಚಿತ್ರರಂಗದ ಬಗ್ಗೆ ಹೆಮ್ಮೆ ಪಡದ 'ಸರ್ಜರಿ' ಹುಡುಗಿ ಶ್ರುತಿ ಹಾಸನ್ ಸ್ಯಾಂಡಲ್ ವುಡ್ ಗೆ ಬರುವುದು ಬೇಡ ಎಂದು ಟ್ವೀಟಿಗರು ಕುಹಕವಾಡಿದ್ದರು.

  'ಪ್ಲಾಸ್ಟಿಕ್ ಬೊಂಬೆ', 'ಸೊಕ್ಕಿನ ಹುಡುಗಿ' ಶ್ರುತಿ ಹಾಸನ್ ವಿರುದ್ಧ ಕನ್ನಡಿಗರು ಸಿಡಿಮಿಡಿ 'ಪ್ಲಾಸ್ಟಿಕ್ ಬೊಂಬೆ', 'ಸೊಕ್ಕಿನ ಹುಡುಗಿ' ಶ್ರುತಿ ಹಾಸನ್ ವಿರುದ್ಧ ಕನ್ನಡಿಗರು ಸಿಡಿಮಿಡಿ

  ಇದನ್ನೆಲ್ಲ ಗಮನಿಸಿರುವ ನಟಿ ಶ್ರುತಿ ಹಾಸನ್ ಇದೀಗ ಕನ್ನಡ ಚಿತ್ರರಂಗದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಮುಂದೆ ಓದಿರಿ...

  ರೂಮರ್ ಹೇಗೆ ಶುರುವಾಯಿತು ಅನ್ನೋದೇ ಗೊತ್ತಿಲ್ಲ

  ರೂಮರ್ ಹೇಗೆ ಶುರುವಾಯಿತು ಅನ್ನೋದೇ ಗೊತ್ತಿಲ್ಲ

  ''ಕನ್ನಡ ಚಿತ್ರವೊಂದರಲ್ಲಿ ನಾನು ನಟಿಸುವ ಬಗ್ಗೆ ರೂಮರ್ ಹೇಗೆ ಶುರುವಾಯಿತು ಅನ್ನೋದು ನನಗೆ ಗೊತ್ತಿಲ್ಲ. ಆದ್ರೆ, ಕನ್ನಡ ಚಿತ್ರದಲ್ಲಿ ಅಭಿನಯಿಸಲು ನನಗೆ ಇಷ್ಟ ಇದೆ'' ಎಂದು 'ಟೈಮ್ ಆಫ್ ಇಂಡಿಯಾ' ದಿನಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಶ್ರುತಿ ಹಾಸನ್ ಹೇಳಿದ್ದಾರೆ.

  ಅಂತೆ-ಕಂತೆಯೆಲ್ಲ ಸುಳ್ಳಾಯ್ತಲ್ಲ: ಕನ್ನಡಕ್ಕೆ ಕಮಲ್ ಪುತ್ರಿ ಶ್ರುತಿ ಬರ್ತಿಲ್ಲ.!ಅಂತೆ-ಕಂತೆಯೆಲ್ಲ ಸುಳ್ಳಾಯ್ತಲ್ಲ: ಕನ್ನಡಕ್ಕೆ ಕಮಲ್ ಪುತ್ರಿ ಶ್ರುತಿ ಬರ್ತಿಲ್ಲ.!

  ಕನ್ನಡದ ಹಾಡಿಗೆ ಶ್ರುತಿ ದನಿ

  ಕನ್ನಡದ ಹಾಡಿಗೆ ಶ್ರುತಿ ದನಿ

  ''ಈಗಾಗಲೇ ಕನ್ನಡದ 'ಪೃಥ್ವಿ' ಸಿನಿಮಾದ 'ನೆನಪಿದು...' ಹಾಡಿಗೆ ದನಿಯಾಗಿದ್ದೇನೆ. ಹೀಗಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಲು ನನಗೆ ಆಸಕ್ತಿ ಇದೆ. ಕನ್ನಡ ಚಿತ್ರರಂಗದ ಬಗ್ಗೆ ನನಗೆ ಹೆಚ್ಚು ಗೌರವ ಇದೆ'' ಎಂದಿದ್ದಾರೆ ಶ್ರುತಿ ಹಾಸನ್.

  ಹಲವು ಬಾರಿ ಆಫರ್ ಬಂದಿದೆ

  ಹಲವು ಬಾರಿ ಆಫರ್ ಬಂದಿದೆ

  ''ನನ್ನ ವೃತ್ತಿ ಜೀವನದ ಆರಂಭದಲ್ಲಿಯೇ, ಹಲವು ಕನ್ನಡ ಚಿತ್ರಗಳಲ್ಲಿ ನಟಿಸುವುದಕ್ಕಾಗಿ ನನಗೆ ಆಹ್ವಾನ ಬಂದಿತ್ತು'' ಎಂದೂ ಶ್ರುತಿ ಹಾಸನ್ ಹೇಳಿದ್ದಾರೆ.

  'ಪೊಗರು' ಚಿತ್ರದಲ್ಲಿಲ್ಲ ಶ್ರುತಿ ಹಾಸನ್

  'ಪೊಗರು' ಚಿತ್ರದಲ್ಲಿಲ್ಲ ಶ್ರುತಿ ಹಾಸನ್

  ಧ್ರುವ ಸರ್ಜಾ ಅಭಿನಯದ ನಂದ ಕಿಶೋರ್ ನಿರ್ದೇಶನದ 'ಪೊಗರು' ಚಿತ್ರದಲ್ಲಿ ನಟಿ ಶ್ರುತಿ ಹಾಸನ್ ಕಾಣಿಸಿಕೊಳ್ಳುತ್ತಿಲ್ಲ ಎಂಬುದು ಈಗಾಗಲೇ ಪಕ್ಕಾ ಆಗಿದೆ. ಮುಂದೆ ಕನ್ನಡದ ಯಾವ ಚಿತ್ರವನ್ನು ಶ್ರುತಿ ಹಾಸನ್ ಒಪ್ಪಿಕೊಳ್ತಾರೋ, ನೋಡೋಣ... (ಕೃಪೆ: ಟೈಮ್ಸ್ ಆಫ್ ಇಂಡಿಯಾ)

  English summary
  Actress Shruthi Haasan speaks about Kannada Film Industry

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X