twitter
    For Quick Alerts
    ALLOW NOTIFICATIONS  
    For Daily Alerts

    ನಟಿ ಶ್ರುತಿ -ಶೋಭಾ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್

    By ಜೇಮ್ಸ್ ಮಾರ್ಟಿನ್
    |

    ನಟಿ ಶ್ರುತಿ ಹಾಗೂ ಅವರ ಮನೆಕೆಲಸದಾಕೆ ಶೋಭಾ ನಡುವಿನ ಹಲ್ಲೆ ಪ್ರಕರಣಕ್ಕೆ ಈಗ ಹೊಸ ತಿರುವು ಪಡೆದುಕೊಂಡಿದೆ. ಶೋಭಾ ಅವರು ನೀಡಿರುವ ಪ್ರಾಣ ಬೆದರಿಕೆ ಹಾಗೂ ಹಲ್ಲೆ ಪ್ರಕರಣ ದೂರಿಗೆ ವಿರುದ್ಧವಾಗಿ ಶ್ರುತಿ ಅವರು ಇಂದು ಪ್ರತಿ ದೂರು ಸಲ್ಲಿಸಿದ್ದು ಬೆಂಗಳೂರಿನ ಬಸವೇಶ್ವರ ನಗರ ಠಾಣೆಯಲ್ಲಿ ದೂರು ಸ್ವೀಕೃತಿಗೊಂಡಿದೆ.

    ಆದರೆ, ಇಲ್ಲೂ ಒಂದು ಟ್ವಿಸ್ಟ್ ಇದೆ. ಶ್ರುತಿ ದೂರು ನೀಡಿರುವುದು ಶೋಭಾ ಅವರ ಮೇಲೆ ಮಾತ್ರವಲ್ಲ. ಶೋಭಾ ಅವರು ಈ ರೀತಿ ಆಡಲು ಕಾರಣವಾಗಿರುವುದು ಚಂದ್ರಚೂಡ ಅವರು ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.

    ಮನೆಕೆಲಸದಾಕೆ ಶೋಭಾ ನನ್ನ ಕುಟುಂಬದ ಸದಸ್ಯಳಂತೆ ಇದ್ದಳು. ನಾನು ಆಕೆ ಮೇಲೆ ಏಕೆ ಹಲ್ಲೆ ಮಾಡಲಿ. ಅವಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಾನು ಎಷ್ಟು ಶ್ರಮ ವಹಿಸಿದ್ದೆ ಎಂಬುದನ್ನು ಕೇಳಿ. ಇದೆಲ್ಲ ನನ್ನ ಮೇಲಿನ ನಡೆದಿರುವ ರಾಜಕೀಯ ಪಿತೂರಿ. ಚಂದ್ರಚೂಡ ಅವರು ಶೋಭಾಗೆ ಕುಮ್ಮಕ್ಕು ನೀಡಿ ಧೈರ್ಯ ಹೇಳಿದ್ದರಿಂದಲೇ ಆಕೆ ನನ್ನ ವಿರುದ್ಧ ಈ ರೀತಿ ಇಲ್ಲಸಲ್ಲದ ಆರೋಪ ಮಾಡಿದ್ದಾಳೆ ಎಂದು ಶ್ರುತಿ ಹೇಳಿದ್ದಾರೆ.[ಬೈದಿದ್ದೀನಿ, ಕೆಲಸದಿಂದ ತೆಗೆದಿದ್ದೇನೆ, ಹೊಡೆದಿಲ್ಲ: ಶ್ರುತಿ]

    'ಸಂಸಾರದ ಗುಟ್ಟು ವ್ಯಾಧಿ ರಟ್ಟು' ಶ್ರುತಿ ಮನೆ ರಾಮಾಯಣ ಟಿವಿ ಮಾಧ್ಯಮಗಳಿಂದ ಜಿಗಿದು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಎರಡೂ ಕಡೆಗಳಿಂದ ಬಂದಿರುವ ದೂರಿನ ಪರಿಶೀಲನೆ ನಡೆಸುತ್ತಿರುವ ಬಸವೇಶ್ವರ ನಗರ ಪೊಲೀಸ್ ಠಾಣೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

    ಈ ಪ್ರಕರಣದಲ್ಲಿ ಪತ್ರಕರ್ತ, ಕವಿ ಚಂದ್ರಚೂಡ ಅವರ ಹೆಸರು ಏಕೆ ಕೇಳಿ ಬಂದಿದೆ? ಶ್ರುತಿ ಅವರಿಗೆ ಶೋಭಾ ಮಾಡಿದ್ದು ಬರೀ ನಂಬಿಕೆದ್ರೋಹಾನಾ? ಅಥವಾ ಇದೆಲ್ಲ ಪೂರ್ವ ನಿಯೋಜಿತ ಕುತಂತ್ರವಾ? ಪ್ರಕರಣ ಮುಂದೆ ಯಾವ ತಿರುವು ಪಡೆಯಬಹುದು ಎಂಬುದರ ಬಗ್ಗೆ ಮುಂದೆ ಓದಿ...

    ಖಾಸಗಿ ವಿಷಯ ಬಹಿರಂಗವಾಗಿದ್ದು ಹೇಗೆ

    ಖಾಸಗಿ ವಿಷಯ ಬಹಿರಂಗವಾಗಿದ್ದು ಹೇಗೆ

    ಮನೆಕೆಲಸದಾಕೆ ಹಿಂದೆ ಯಾರಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದರೆ ಪ್ರಕರಣದ ನಿಜಾಂಶ ಜಗತ್ತಿಗೆ ತಿಳಿಯುತ್ತದೆ. ನನ್ನ ಖಾಸಗಿ ಬದುಕಿನ ವಿಚಾರಗಳನ್ನು ಅಕ್ಕ ಪಕ್ಕದ ಮನೆಯವರ ಮುಂದೆ ಮಾತಾಡುವುದು ನನಗೆ ಇಷ್ಟವಿಲ್ಲ.

    ಈ ಬಗ್ಗೆ ಆಕೆಗೆ ತಿಳಿದಿದ್ದು ಕೂಡಾ ಚಂದ್ರಚೂಡ ಅವರಿಂದ ಎಂಬುದು ನನಗೆ ಗೊತ್ತು. ನನ್ನ ವೈಯಕ್ತಿಕ ವಿಚಾರವನ್ನು ಶೋಭಾ ಕಿವಿಗೆ ಹಾಕಿದವರಿಗೆ ಶಿಕ್ಷೆಯಾಗಲಿ ಎಂದು ಶ್ರುತಿ ದೂರು ಸಲ್ಲಿಸಿದ್ದಾರೆ.

    ನಾನು ಆಕೆ ಮೇಲೆ ಗದರಿದ್ದು ನಿಜ ಆದರೆ, ಪ್ರಾಣ ಬೆದರಿಕೆ ಹಾಕಿಲ್ಲ. ಮೇ ತಿಂಗಳಿನಲ್ಲಿ ನಡೆದ ಘಟನೆಯನ್ನು ಈಗ ಎತ್ತಿ ಹೇಳುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

    ಶ್ರುತಿ ಮನೆಕೆಲಸದಾಕೆ ನೀಡಿದ್ದ ದೂರೇನು?

    ಶ್ರುತಿ ಮನೆಕೆಲಸದಾಕೆ ನೀಡಿದ್ದ ದೂರೇನು?

    ಶ್ರುತಿ ಹಾಗೂ ಅವರ ಬೆಂಬಲಿಗರಾದ ಸತೀಶ್, ಬಾಬು ಎಂಬುವರು ನನ್ನ ಮೇಲೆ ಹಲ್ಲೆ ಮಾಡಿ, ನನಗೆ ಹಾಗೂ ನನ್ನ ಕುಟುಂಬಕ್ಕೆ ಪ್ರಾಣ ಬೆದರಿಕೆ ಹಾಕಿದ್ದಾರೆ. ನನ್ನ ಮೇಲೆ ಕಳ್ಳತನದ ಆರೋಪ ಹೊರೆಸಿದ್ದಲ್ಲದೆ ಊರು ಬಿಡುವಂತೆ ಸೂಚಿಸಿದ್ದಾರೆ.

    ಇತ್ತೀಚೆಗೆ ಮನೆಗೆ ಕರೆಸಿಕೊಂಡು ತಡರಾತ್ರಿ ತನಕ ನಿಂದಿಸಿದ್ದಲ್ಲದೆ, ರು. 2 ಲಕ್ಷ ಹಣ ಕಳವು ಮಾಡಿದ್ದೀಯ ಎಂದು ಆರೋಪಿಸಿ ಪತ್ರ ಬರೆಸಿಕೊಂಡು ಬೆದರಿಸಿ ನನ್ನ ಬಳಿ ಸಹಿ ಹಾಕಿಸಿಕೊಂಡಿದ್ದಾರೆ. ನಾನು ಯಾವುದೇ ಹಣ ಕಳವು ಮಾಡಿಲ್ಲ.

    ಈ ಘಟನೆ ನಡೆದ ಮೇಲೆ ರಸ್ತೆಯಲ್ಲಿ ಓಡಾಡಲು ಭಯವಾಗುತ್ತಿತ್ತು ಹಾಗಾಗಿ ತಕ್ಷಣವೇ ದೂರು ನೀಡಲು ಆಗಲಿಲ್ಲ. ಈಗ ಜೀವನೋಪಾಯ ಕಷ್ಟವಾದ್ದರಿಂದ ದೂರು ನೀಡಲೇಬೇಕಾಯಿತು ಎಂದು ಶೋಭಾ ಅವರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ದಾಖಲಿಸಿದ ನಂತರ ಹೇಳಿದ್ದರು.

    ಪ್ರಕರಣ ತನಿಖೆ ಯಾವ ಹಂತದಲ್ಲಿದೆ

    ಪ್ರಕರಣ ತನಿಖೆ ಯಾವ ಹಂತದಲ್ಲಿದೆ

    * ಶೋಭಾ ಅವರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನೀಡಿರುವ ದೂರು ಇನ್ನೂ ಬಸವೇಶ್ವರ ನಗರ ಠಾಣೆಗೆ ವರ್ಗಾವಣೆಯಾಗಿಲ್ಲ.
    * ಶ್ರುತಿ ಬಸವೇಶ್ವರ ನಗರ ಠಾಣೆಯಲ್ಲಿ ನೀಡಿರುವ ದೂರಿನ ಮೇರೆಗೆ ಶೋಭಾ ಅವರು ಠಾಣೆಗೆ ವಕೀಲ ವರದರೆಡ್ಡಿ ಜತೆ ಗುರುವಾರ ಹಾಜರಾಗಿ ಹೇಳಿಕೆ ನೀಡಿದ್ದಾರೆ.
    * ಎರಡೂ ದೂರಿನ ಬಗ್ಗೆ ಪೊಲೀಸರು ಕ್ರಮ ಜರುಗಿಸಿಲ್ಲ. ಎಫ್ ಐಆರ್ ದಾಖಲು ಮಾಡಿಲ್ಲ.

    ಪತ್ರಕರ್ತ ಚಂದ್ರಚೂಡ ಅವರ ಹೆಸರು ಏಕೆ?

    ಪತ್ರಕರ್ತ ಚಂದ್ರಚೂಡ ಅವರ ಹೆಸರು ಏಕೆ?

    ಶ್ರುತಿ ಅವರ ಖಾಸಗಿ ವಿಷಯಗಳನ್ನು ಚಂದ್ರಚೂಡ ಅವರು ಶೋಭಾಗೆ ತಿಳಿಸುತ್ತಿದ್ದರು. ಇದನ್ನು ಬಳಸಿಕೊಂಡು ಆಕೆ ಬ್ಲಾಕ್ ಮೇಲ್ ಮಾಡತೊಡಗಿದ್ದಳು. ಸಿನಿಮಾ ರಂಗ, ರಾಜಕೀಯ ರಂಗದಲ್ಲಿ ಶ್ರುತಿ ಹೆಸರು ಹಾಳಾಗುವುದು ಇದರ ಹಿಂದಿನ ಉದ್ದೇಶವಾಗಿತ್ತು ಎಂಬುದು ಈ ಪ್ರಕರಣದ ಹಿಂದಿನ ಉದ್ದೇಶ ಎಂದು ಶ್ರುತಿ ಅವರೇ ಸ್ಪಷ್ಟಪಡಿಸಿದ್ದಾರೆ. ಆದರೆ, ಚಂದ್ರಚೂಡ ಅವರು ಆರೋಪವನ್ನು ಅಲ್ಲಗೆಳೆದಿದ್ದು, ನಾನು ಯಾರ ಖಾಸಗಿ ಬದುಕಿನ ಮಾಹಿತಿಯನ್ನು ಯಾರಿಗೂ ನೀಡಿಲ್ಲ ಎಂದಿದ್ದಾರೆ.

    ಚಿತ್ರದಲ್ಲಿ : ಕೊಲ್ಲೂರಿನಲ್ಲಿ ಚಂದ್ರಚೂಡ ಹಾಗೂ ಶ್ರುತಿ ವಿವಾಹದ ಸಂದರ್ಭದ ಚಿತ್ರ. ಇಬ್ಬರ ಮದುವೆಯನ್ನು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಅನೂರ್ಜಿತಗೊಳಿಸಿತ್ತು.

    English summary
    Kannada actress Shruthi lodges complaint against her ex husband Chandrachud in Basaveshwaranagar police station, Bangalore. Shruti's complaint is in reply to the alleged harassment allegation made by housemaid Shobha.
    Thursday, June 19, 2014, 16:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X