»   » ಸ್ಯಾಂಡಲ್ ವುಡ್ ಗೆ 'ನಿರ್ಮಾಪಕಿ'ಯಾಗಿ ಶ್ರುತಿ ನಾಯ್ಡು ಎಂಟ್ರಿ

ಸ್ಯಾಂಡಲ್ ವುಡ್ ಗೆ 'ನಿರ್ಮಾಪಕಿ'ಯಾಗಿ ಶ್ರುತಿ ನಾಯ್ಡು ಎಂಟ್ರಿ

Posted By:
Subscribe to Filmibeat Kannada

ಕನ್ನಡ ಕಿರುತೆರೆ ಲೋಕದಲ್ಲಿ ಜನಪ್ರಿಯ ನಿರ್ದೇಶಕಿ ಆಗಿ ಗುರುತಿಸಿಕೊಂಡಿರುವ ಶ್ರುತಿ ನಾಯ್ಡು ಇದೀಗ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದಾರೆ. 'ಶ್ರೀರಸ್ತು ಶುಭಮಸ್ತು', 'ಪುನರ್ ವಿವಾಹ', 'ಮಹಾದೇವಿ', 'ಬ್ರಹ್ಮಗಂಟು' ಮುಂತಾದ ಧಾರಾವಾಹಿಗಳ ರೂವಾರಿ ಆಗಿರುವ ಶ್ರುತಿ ನಾಯ್ಡು ಈಗ ಚಿತ್ರ ನಿರ್ಮಾಪಕಿ ಆಗಲು ಹೊರಟಿದ್ದಾರೆ.

'ಪ್ರೀಮಿಯರ್ ಪದ್ಮಿನಿ' ಎಂಬ ಚಿತ್ರಕ್ಕೆ ಬಂಡವಾಳ ಹಾಕಲು ಶ್ರುತಿ ನಾಯ್ಡು ಮುಂದಾಗಿದ್ದಾರೆ. ಈಗಾಗಲೇ 'ಪ್ರೀಮಿಯರ್ ಪದ್ಮಿನಿ' ಚಿತ್ರದ ಫೋಟೋ ಶೂಟ್ ಕೂಡ ನಡೆದಿದ್ದು, ಸದ್ಯದಲ್ಲೇ ಶೂಟಿಂಗ್ ಶುರು ಆಗಲಿದೆ.

ವಿಶೇಷ ಅಂದ್ರೆ, ಈ 'ಪ್ರೀಮಿಯರ್ ಪದ್ಮಿನಿ' ಚಿತ್ರಕ್ಕೆ ಶ್ರುತಿ ನಾಯ್ಡು ನಿರ್ಮಾಪಕಿ ಆಗಿದ್ದರೆ, ರಮೇಶ್ ಇಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ರಮೇಶ್ ಇಂದ್ರ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ.

Shruthi Naidu to produce Kannada Movie Premier Padmini

ಜೀ ಕನ್ನಡದಲ್ಲಿ ಶ್ರುತಿ ನಾಯ್ಡು 'ಪುನರ್ ವಿವಾಹ'

'ಪ್ರೀಮಿಯರ್ ಪದ್ಮಿನಿ' ಚಿತ್ರದ ನಾಯಕ ಬೇರೆ ಯಾರೂ ಅಲ್ಲ, ನವರಸ ನಾಯಕ ಜಗ್ಗೇಶ್. ಇವರೊಂದಿಗೆ ನಟಿ ಮಧೂ ಕೂಡ ಅಭಿನಯಿಸುತ್ತಿದ್ದಾರೆ. ಸುಧಾರಾಣಿ, ಸಿಹಿ ಕಹಿ ಗೀತಾ, ಪ್ರಮೋದ್ ಕೂಡ ತಾರಾಬಳಗದಲ್ಲಿದ್ದಾರೆ.

ಮೈಸೂರು ಮತ್ತು ಬೆಂಗಳೂರು ಸುತ್ತಮುತ್ತ 40 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಲಿದ್ದಾರೆ. ಇದೇ ತಿಂಗಳ 18 ರಂದು ಮುಹೂರ್ತ ಸಮಾರಂಭ ನಡೆಯಲಿದೆ.

English summary
Serial Producer, Director Shruthi Naidu to produce Kannada Movie Premier Padmini which features Jaggesh and Madoo in lead.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X