For Quick Alerts
  ALLOW NOTIFICATIONS  
  For Daily Alerts

  ಶೃತಿ ಪ್ರಕಾಶ್ ಕಡೆಯಿಂದ ಜೆಕೆಗೆ ತಲುಪಿದ ಹುಟ್ಟುಹಬ್ಬ ಶುಭಾಶಯ

  By Naveen
  |
  ಜೆ ಕೆ ಹುಟ್ಟು ಹಬ್ಬಕ್ಕೆ ಸಿಕ್ತು ಸ್ಪೆಷಲ್ ವ್ಯಕ್ತಿಯಿಂದ ಸ್ಪೆಷಲ್ ಗಿಫ್ಟ್ | Oneindia Kannada

  ನಟ ಕಾರ್ತಿಕ್ ಜಯರಾಂಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಹುಟ್ಟುಹಬ್ಬ ಜೆಕೆ ಪಾಲಿಗೆ ನಿಜಕ್ಕೂ ವಿಶೇಷವಾಗಿದೆ. ಜೆಕೆ ಉಹಿಸದೆ ಇರುವ ಅನೇಕ ಉಡುಗೊರೆಗಳು ಅವರಿಗೆ ಬಂದಿದೆ. ಈಗ ಅವರ ಮೆಚ್ಚಿನ ಸ್ನೇಹಿತೆ ಶುಭಾಶಯ ಕೂಡ ಅವರಿಗೆ ತಲುಪಿದೆ.

  ಜೆಕೆ ಮತ್ತು ಶೃತಿ ಪ್ರಕಾಶ್ ಕಳೆದ ಬಿಗ್ ಬಾಸ್ ಸೀಸನ್ ನ ಸ್ಪರ್ಧಿಗಳಾಗಿದ್ದರು. ಜೋಡಿ ಹಕ್ಕಿಗಳಂತೆ ಬಿಗ್ ಮನೆಯೊಳಗೆ ಇದ್ದ ಇವರ ನಡುವೆ ಪ್ರೀತಿ ಗೀತಿ ಅಂತ ಏನಾದರೂ ಇದ್ಯಾ ಎನ್ನುವ ಗುಸು ಗುಸು ಆಗ ಇತ್ತು. ಅದೇನೇ ಸುದ್ದಿ ಇದ್ದರೂ ಈಗ ಜೆಕೆ ಹುಟ್ಟುಹಬ್ಬಕೆ ಶೃತಿ ಪ್ರಕಾಶ್ ಶುಭ ಕೋರಿದ್ದಾರೆ. ಶೃತಿ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಜೆಕೆ ಜೊತೆಗೆ ಇರುವ ಫೋಟೋ ಹಾಕಿ ವಿಶ್ ಮಾಡಿದ್ದಾರೆ. ಜೊತೆಗೆ ಜೆಕೆ ತುಂಬ ಡೌನ್ ಟು ಅರ್ಥ್, ಅವರಿಗೆ ನಗಿಸುವ ಗುಣ ಅವರಿಗೆ ಇದೆ, ಅವರೊಬ್ಬ ಅದ್ಬುತ ನಟ ಹಾಗೂ ಸ್ನೇಹಿತ ಎಂದು ಬರೆದುಕೊಂಡಿದ್ದಾರೆ.

  ಜೆ.ಕೆ ಹುಟ್ಟುಹಬ್ಬಕ್ಕೆ ಸಿಕ್ತು ಸರ್ಪ್ರೈಸ್ ಉಡುಗೊರೆಗಳು ಜೆ.ಕೆ ಹುಟ್ಟುಹಬ್ಬಕ್ಕೆ ಸಿಕ್ತು ಸರ್ಪ್ರೈಸ್ ಉಡುಗೊರೆಗಳು

  ಕಾರ್ತಿಕ್ ಜಯರಾಂ ಬರ್ತಡೇ ಪ್ರಯುಕ್ತ ಜೆಕೆ ಅಭಿನಯದ 'ಕರಾಳ ರಾತ್ರಿ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ದಯಾಳ್ ಪದ್ಮನಾಭನ್ ನಿರ್ದೇಶನ ಮಾಡಿದ್ದಾರೆ. ಇದರ ಜೊತೆಗೆ ಜೆಕೆ ಅವರ 'ಮೇ 1' ಸಿನಿಮಾದ ಆಡಿಯೋ ಸಹ ಇಂದೇ ರಿಲೀಸ್ ಆಗಿದೆ. ಸುದೀಪ್ ಕೂಡ ಜೆಕೆಗೆ ಟ್ವಿಟ್ಟರ್ ನಲ್ಲಿ ಶುಭ ಕೋರಿದ್ದಾರೆ.

  English summary
  Kannada actor Karthik Jayaram celebrates his 38th birthday. 'Bigg Boss kannada season 5' fame Shruthi Prakash wishes to Karthik Jayaram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X