»   » ಶೃತಿ ಮೀರಿದ ನಟಿ ಶ್ರುತಿ ಹಾಟ್ ಫೋಟೋಗಳು

ಶೃತಿ ಮೀರಿದ ನಟಿ ಶ್ರುತಿ ಹಾಟ್ ಫೋಟೋಗಳು

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಕೆಲ ದಿನಗಳ ಹಿಂದೆ ಕಾಮಸೂತ್ರ ಭಂಗಿಯಲ್ಲಿ ನಟಿ ಶ್ರುತಿ ಹಾಸನ್ ಎಲ್ಲರ ಗಮನಸೆಳೆದಿದ್ದರು. ತಾನು ಯಾವುದೇ ರೀತಿಯ ಎಕ್ಸ್ ಪೋಸಿಂಗ್ ಗೆ ರೆಡಿ ಎಂಬಂತೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಈಗ ತೆಲುಗಿನಲ್ಲಿ ಈಕೆ ಬಿಜಿಯಾಗಿದ್ದಾರೆ. ನಟ ರವಿತೇಜ ಜೊತೆಗಿನ ತೆಲುಗಿನ 'ಬಲುಪು' ಚಿತ್ರದಲ್ಲಿ ಶ್ರುತಿ ಮೀರಿ ಅಭಿನಯಿಸಿದ್ದಾರೆ ಎನ್ನಲಾಗಿದೆ.

ಶ್ರುತಿ ಅಭಿನಯದ ಆರಂಭಿಕ ತೆಲುಗು ಚಿತ್ರಗಳು ಅಷ್ಟಾಗಿ ಸದ್ದು ಮಾಡಲಿಲ್ಲ. ಈಗ ಆಕೆ ತನ್ನದೇ ಆದ ಸ್ಥಾನಮಾನವನ್ನು ತೆಲುಗು ಚಿತ್ರರಂಗದಲ್ಲಿ ಪಡೆದಿದ್ದಾರೆ. ಡ್ಯಾಡಿ ಹೆಸರನ್ನು ಚಿತ್ರರಂಗದಲ್ಲಿ ಎಂದೂ ಬಳಸಿಕೊಳ್ಳಲಿಲ್ಲ. ಕಮಲ್ ಮಗಳು ಎಂಬ ಕಾರಣಕ್ಕೆ ಯಾರೂ ನನಗೆ ಕರೆದು ಅವಕಾಶಗಳನ್ನು ಕೊಡಲಿಲ್ಲ ಎನ್ನುತ್ತಾರೆ ಶ್ರುತಿ ಹಾಸನ್.

ಆದರೆ ನನ್ನಲ್ಲಿನ ಅಭಿನಯ, ಸಂಗೀತ ಹಾಗೂ ಸಿನಿಮಾದ ಮೇಲೆ ಆಸಕ್ತಿ ಮೂಡಲು ನಿಜವಾಗಿಯೂ ಕಾರಣವಾಗಿದ್ದು ಮಾತ್ರ ಡ್ಯಾಡಿ. ಸಿನಿಮಾ ಮೇಲೆ ವ್ಯಾಮೋಹ ಬೆಳೆಯಲು ಮುಖ್ಯ ಕಾರಣಕರ್ತ ಸಹ ಅವರೇ ಎನ್ನುತ್ತಾರೆ ಶ್ರುತಿ ಹಾಸನ್. ಇಲ್ಲಿವೆ ನೋಡಿ ಆಕೆಯ ಲೇಟೆಸ್ಟ್ ಚಿತ್ರ 'ಬಲುಪು' ಹಾಟ್ ದೃಶ್ಯಗಳು.

ಡಿ-ಡೇ ಚಿತ್ರದಲ್ಲೂ ಹಾಟ್ ಅಭಿನಯ

ಬಾಲಿವುಡ್ 'ಡಿ-ಡೇ' ಎಂಬ ಚಿತ್ರದ ಹಾಟ್ ಸನ್ನಿವೇಶಗಳು ಪಡ್ಡೆ ಹುಡುಗರ ನಿದ್ದೆಗೆಡಿಸಿವೆ. ಈ ಚಿತ್ರದಲ್ಲಿ ಶ್ರುತಿ ಅವರದು ವೇಶ್ಯೆಯ ಪಾತ್ರವಂತೆ. ಹಾಗಾಗಿ ಈ ಬೋಲ್ಡ್ ಅಭಿನಯ ಎಂದಿದ್ದರು ಶ್ರುತಿ.

ಮ್ಯಾಕ್ಸಿಮ್ ನಲ್ಲೂ ಸೌಂದರ್ಯ ಅನಾವರಣ

ಈ ಹಿಂದೊಮ್ಮೆ ಮ್ಯಾಕ್ಸಿಮ್ ನಿಯತಕಾಲಿಕೆಗಾಗಿ ತಮ್ಮ ಸೌಂದರ್ಯವನ್ನು ಪುಟಪುಟದಲ್ಲೂ ಅನಾವರಣಗೊಳಿಸಿದ್ದರು ಶ್ರುತಿ ಹಾಸನ್.

ಬಲುಪು ಚಿತ್ರದಲ್ಲಿ ಶ್ರುತಿ ಹಾಸನ್ ಹೊಳಪು

ಇನ್ನು ಬಲುಪು ಚಿತ್ರದ ವಿಚಾರಕ್ಕೆ ಬರುವುದಾದರೆ ಈ ಚಿತ್ರ ಹೀರೋ ರವಿತೇಜ. ಶ್ರುತಿ ಹಾಸನ್ ಜೊತೆ ಮತ್ತೊಬ್ಬ ನಾಯಕಿಯಾಗಿ ಅಂಜಲಿ ಅಭಿನಯಿಸಿದ್ದಾರೆ.

ಈ ಚಿತ್ರದಲ್ಲಿ ಲಕ್ಷ್ಮಿ ರೈ ಅವರದು ಅತಿಥಿ ಪಾತ್ರ

ಈ ಚಿತ್ರದಲ್ಲಿ ಶ್ರುತಿ ಗ್ಲಾಮರ್ ಜೊತೆಗೆ ಲಕ್ಷ್ಮಿ ರೈ ಅವರ ಅಂದಚೆಂದಗಳೂ ಉಂಟು. ಚಿತ್ರದಲ್ಲಿ ಲಕ್ಷ್ಮಿ ರೈ ಅವರದು ಅತಿಥಿ ಪಾತ್ರ. ಆದರೆ ಹೈಲೈಟ್ ಆಗುವುದು ಮಾತ್ರ ಶ್ರುತಿ ಹಾಸನ್ ಗ್ಲಾಮರ್ ಎನ್ನುತ್ತವೆ ಮೂಲಗಳು.

ಶ್ರುತಿ ಹಾಸನ್ ಗ್ಲಾಮರ್ ಗೆ ಹೊಸ ತಿರುವು

ಗೋಪಿಚಂದ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಅತ್ತ ರವಿತೇಜ ಅವರ ವೃತ್ತಿ ಬದುಕಿನಲ್ಲೂ ಇತ್ತ ಶ್ರುತಿ ಅವರ ಗ್ಲಾಮರ್ ನಲ್ಲೂ ತಿರುವು ನೀಡಲಿದೆ ಎಂಬ ಸದಾಶಯದಲ್ಲಿ ಚಿತ್ರತಂಡವಿದೆ.

English summary
Balupu is an upcoming Telugu Movie. Directed by Gopichand Malineni and Produced by Prasad Vara Potluri under PVP Cinema. Music scored by S.Thaman. Ravi Teja, Shruti Hassan and Anjali are in the lead roles.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada