»   » ಕನಸು ಹೊತ್ತ ಶೃತಿ ಈಗ ಖುದ್ದು ಸಂಗೀತ ವಿದ್ಯಾರ್ಥಿನಿ.

ಕನಸು ಹೊತ್ತ ಶೃತಿ ಈಗ ಖುದ್ದು ಸಂಗೀತ ವಿದ್ಯಾರ್ಥಿನಿ.

Posted By: Staff
Subscribe to Filmibeat Kannada

ಮದುವೆಯಾದ ಮೊದಲ ದಿನಗಳಲ್ಲಿ ಶೃತಿ, ಪ್ರೀತಿಸಿ ನೋಡು ಪ್ರೇಮಿಸಿ ನೋಡು ಅನ್ನುತ್ತಿದ್ದರು. ಈಗ ಯಾವ ಹಾಡ ಹಾಡಲಿ ಅಂತಿದಾರೆ.. ಮದುವೆಯಾಗಲು, ಮನೆಯವರ ಒಲಿಸಲು ಪಡಪಾಟಲು ಪಟ್ಟ ಶೃತಿ ಹಿನ್ನೆಲೆ ಗಾಯಕಿ ಯೇನೂ ಆಗುತ್ತಿಲ್ಲ. ಅವರು ಅಮ್ಮ ಆಗುವ ಸಿದ್ಧತೆಯಲ್ಲಿ ಮುಳುಗಿದ್ದಾರೆ.

ಹುಟ್ಟುವ ಮಗು ಹೊಟ್ಟೆಯಲ್ಲೇ ಏನೆಲ್ಲಾ ಕಲಿಯುತ್ತದೆ. ಉದಾಹರಣೆಗೆ ಅಭಿಮನ್ಯು ಉಂಟಲ್ಲ. ಗೈನಕಾಲಜಿಸ್ಟ್‌ಗಳೂ ಈಗ ಕೊಡುವ ಸಲಹೆಗಳು - ಹೊಟ್ಟೆಯಲ್ಲಿರುವ ಮಗುವಿನೊಂದಿಗೆ ಮಾತಾಡಿ, ಜಗಳಾಡಬೇಡಿ, ಮೆಲುದನಿಯ ಸೊಗಸು ಸಂಗೀತ ಕೇಳಿಸಿ, ಪೌಷ್ಟಿಕ ಆಹಾರ ಸೇವಿಸಿ. ನಿಮ್ಮ ಭವ ಭಾರವಾದರೆ ಮಗುವಿನ ಭಾವ ಕೆಡುತ್ತದೆ... ಹೀಗೆ.

ಎಲ್ಲಾ ಸರಿ. ಮಹೇಂದರ್‌ ಹೊಂದಿಕೊಂಡು ಹೋಗುತ್ತಾರೆ. ಜಗಳ ಆಡದಿರಬಹುದು. ಆದರೆ ಅಣ್ಣ ಶರಣ್‌ ಮದುವೆಯ ಮೇಲೆ ಮದುವೆ ಆಗುತ್ತಿರುವ ಕಿರಿಕಿರಿ ಒಂದೆಡೆ. ಚೆನ್ನಾಗಿ ಹಾಡಲು ಬರುವುದಿಲ್ಲವೆಂಬ ಕೊರಗು ಇನ್ನೊಂದು ಕಡೆ. ಶೃತಿ ಇದಕ್ಕೆ ಕಂಡುಕೊಂಡಿರುವ ಪರಿಹಾರ ಸಂಗೀತ ಕಲಿಯುವುದು !

ಹೌದು, ಶೃತಿ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದಾರೆ. ಮೊದಲು ಈ ಸುದ್ದಿಯನ್ನು ಕೇಳಿ ಸ್ಯಾಂಡಲ್‌ವುಡ್‌ನಲ್ಲಿ ಅಚ್ಚರಿ. ನಾಯಕಿಯಾಗಿ ವಾಲೆಂಟರಿ ರಿಟೈರ್ಡ್‌ ಆಗಿ, ಹಿನ್ನೆಲೆ ಗಾಯಕಿಯಾಗುವ ಉಮೇದಿಯೇ ಎಂಬ ಪ್ರಶ್ನೆ ಎದ್ದಿತು. ಈ ಪ್ರಶ್ನೆ ತಣ್ಣಗೆ ಸಂಗೀತಾಭ್ಯಾಸದಲ್ಲಿ ತೊಡಗಿದ್ದ ಶೃತಿ ಕಿವಿಯ ಮುಟ್ಟಿ, ಅವರು ಹೇಳಿದ್ದು : ಎಲ್ಲಾ ನನ್ನ ಮಗುವಿಗಾಗಿ. ಅಮ್ಮ ಆದ ಮೇಲೆ ಕನಿಷ್ಠ ಚೆನ್ನಾಗಿ ಜೋಗುಳ ಹಾಡಲಾದರೂ ಬರಬೇಕಲ್ವೆ, ಪ್ರಶ್ನಿಸುತ್ತಾರೆ ಶೃತಿ.

ಈವರೆಗೆ ತಮ್ಮ ಪಾತ್ರಕ್ಕೆ ತಾವೇ ಕಂಠದಾನ ಮಾಡಿಕೊಳ್ಳದ ಶೃತಿ ಕಂಠ ಇದರಿಂದ ಶುದ್ಧಿಯಾಗುವುದೇ, ನೋಡಬೇಕು? ಹಾಡು ಹಾಡಾಗದೆ ಕಂಠ ಶೋಷಣೆಯಾಗದಿದ್ದರೆ ಅಷ್ಟೇ ಸಾಕು.

English summary
Kannada actress is learning lullaby : Everything is for her child yet to born

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada