For Quick Alerts
  ALLOW NOTIFICATIONS  
  For Daily Alerts

  ಶ್ರುತಿ ಹರಿಹರನ್ ಮನೆಯಲ್ಲಿ ನಾಮಕರಣದ ಸಂಭ್ರಮ: ಮಗಳ ಹೆಸರೇನು?

  |

  ಸ್ಯಾಂಡಲ್ ವುಡ್ ನ ಟ್ಯಾಲೆಂಟೆಡ್ ನಟಿ ಶ್ರುತಿ ಹರಿಹರನ್ ಈಗ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ತಾಯ್ತನ ಎಂಜಾಯ್ ಮಾಡುತ್ತಿರುವ ಶ್ರುತಿ, ಇತ್ತೀಚಿಗೆ ಮುದ್ದು ಮಗಳ ಪುಟ್ಟ ಪಾದಗಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅದು ಬಿಟ್ಟರೆ ಮಗಳ ಫೋಟೋವನ್ನು ಎಲ್ಲಿಯೂ ಶೇರ್ ಮಾಡಿಲ್ಲ.

  ಮಗಳ ಮೊದಲ ವಿಡಿಯೋ ಹಂಚಿಕೊಂಡ ಶ್ರುತಿ ಹರಿಹರನ್: ಮಗು ನೋಡಿ ರಶ್ಮಿಕಾ ಹೇಳಿದ್ದೇನು?ಮಗಳ ಮೊದಲ ವಿಡಿಯೋ ಹಂಚಿಕೊಂಡ ಶ್ರುತಿ ಹರಿಹರನ್: ಮಗು ನೋಡಿ ರಶ್ಮಿಕಾ ಹೇಳಿದ್ದೇನು?

  ಹಾಗಾಗಿ ಶ್ರುತಿ ಹರಿಹರನ್ ಮುದ್ದಿನ ಮಗಳು ಹೇಗಿದ್ದಾಳೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಆದ್ರೀಗ ಶ್ರುತಿ ಮಗಳ ಮೊದಲ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಶ್ರುತಿ ಪತಿ ರಾಮ್ ಮಗಳ ನಾಮಕರಣದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಮುದ್ದು ಮಗಳಿಗೆ ಶ್ರುತಿ ದಂಪತಿ ಇಟ್ಟ ಹೆಸರೇನು ಗೊತ್ತಾ?

  ಸಂಭ್ರಮದಲ್ಲಿ ಶ್ರುತಿ ಕುಟುಂಬ

  ಸಂಭ್ರಮದಲ್ಲಿ ಶ್ರುತಿ ಕುಟುಂಬ

  ನಟಿ ಶ್ರುತಿ ಹರಿಹರನ್ ಮಗಳ ನಾಮಕರಣದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶ್ರುತಿ ಪತಿ ರಾಮ್ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಮುದ್ದು ಮಗಳನ್ನು ಎತ್ತಿಕೊಂಡಿರುವ ರಾಮ್ ಜೊತೆಯಲ್ಲಿ ಪಿಂಕ್ ಮತ್ತು ಗೋಲ್ಡನ್ ಕಲರ್ ಸೀರೆ ಧರಿಸಿರುವ ಶ್ರುತಿ ಮತ್ತು ಅವರ ಇಡೀ ಕುಟುಂಬ ಜೊತೆಯಲ್ಲಿ ಇದೆ.

  ಶ್ರುತಿ ಬಾಳಲ್ಲಿ ಡಬಲ್ ಧಮಾಕ: ಒಂದು ಪರ್ಸನಲ್, ಇನ್ನೊಂದು ಸಿನಿಮಾಶ್ರುತಿ ಬಾಳಲ್ಲಿ ಡಬಲ್ ಧಮಾಕ: ಒಂದು ಪರ್ಸನಲ್, ಇನ್ನೊಂದು ಸಿನಿಮಾ

  ಮಗಳಿಗೆ 'ಜಾನಕಿ' ಎಂದು ನಾಮಕರಣ

  ಮಗಳಿಗೆ 'ಜಾನಕಿ' ಎಂದು ನಾಮಕರಣ

  ಶ್ರುತಿ ಹರಿಹರನ್ ಮಗಳ ಹೆಸರೇನು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಆದ್ರೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಶ್ರುತಿ ಮತ್ತು ರಾಮ್ ಇಬ್ಬರು ಮಗಳಿಗೆ ಜಾನಕಿ ಎಂದು ನಾಮಕರಣ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚಿಗೆ ಕೆರಳಾದಲ್ಲಿ ಮಗಳ ನಾಮಕರಣವನ್ನು ಸರಳ ಆಚರಿಸಲಾಗಿದೆ. ಈ ಸಂಭ್ರಮದಲ್ಲಿ ಕುಟುಂಬದ ಸದಸ್ಯರು ಮಾತ್ರ ಭಾಗಿಯಾಗಿದ್ದಾರೆ.

  ಪುಟ್ಟ ಪಾದಗಳ ವಿಡಿಯೋ ಶೇರ್ ಮಾಡಿದ್ದ ಶ್ರುತಿ

  ಪುಟ್ಟ ಪಾದಗಳ ವಿಡಿಯೋ ಶೇರ್ ಮಾಡಿದ್ದ ಶ್ರುತಿ

  "ಪುಟ್ಟ ಕಾಲುಗಳಿವು. ಒಂದು ದಿನ ನಾನು ಇದೇ ಕಾಲುಗಳಲ್ಲಿ ಜಿಗಿಯುತ್ತೇನೆ, ಜೋರಾಗಿ ಓಡುತ್ತೇನೆ, ಮುಂದೊಂದು ದಿನ ಇದೇ ಕಾಲುಗಳಲ್ಲಿ ನಾನು ರಸ್ತೆಯನ್ನು ದಾಟುತ್ತೇನೆ, ಯಾರಿಗೆ ಗೊತ್ತು ನಾನು ಬಾಹ್ಯಾಕಾಶದಲ್ಲೂ ನಡೆಯಬಹುದು. ಒಂದು ದಿನ ಪರ್ವತ ಅಳತೆ ಮಾಡಬಹುದು. ಸಮುದ್ರದಲ್ಲಿ ಇದೇ ಕಾಲುಗಳನ್ನು ಬಡಿಯುತ್ತ ಈಜುತ್ತೇನೆ" ಎಂದು ಮಗಳ ಮುದ್ದು ಕಾಲುಗಳ ಬಗ್ಗೆ ಭಾವನಾತ್ಮಕ ಸಾಲುಗಳನ್ನು ಬರೆದಿದ್ದರು.

  ನಟಿ ಶ್ರುತಿ ಹರಿಹರನ್ ಪತಿ ರಾಮ್ ಕುಮಾರ್ ಪರಿಚಯನಟಿ ಶ್ರುತಿ ಹರಿಹರನ್ ಪತಿ ರಾಮ್ ಕುಮಾರ್ ಪರಿಚಯ

  ಈ ರೀತಿಯ ಪ್ರೀತಿಯನ್ನು ಕಂಡಿರಲಿಲ್ಲ

  ಈ ರೀತಿಯ ಪ್ರೀತಿಯನ್ನು ಕಂಡಿರಲಿಲ್ಲ

  "ನನ್ನ ಈ ಕಾಲುಗಳೂ ನಿಮ್ಮೆಲ್ಲರಂತೆ ಎಲ್ಲ ಕೆಲಸಗಳನ್ನೂ ಮಾಡಲಿವೆ. ಆದರೆ, ಇಂದು ಈ ಕಾಲುಗಳು ಬಹಳ ಸಂತೋಷವಾಗಿವೆ. ಈ ಕಾಲುಗಳಿಗೆ ತನ್ನ ಬೆರಳುಗಳನ್ನು ಅಲುಗಿಸುತ್ತಾ ಇರುವುದೆಂದರೆ ಬಹಳ ಖುಷಿ. ಪ್ರೀತಿಯ ಜೆ...ಈ 2 ತಿಂಗಳು ನಿನ್ನೊಂದಿಗೆ ಅದೆಷ್ಟು ಹುಚ್ಚಾಟಗಳನ್ನು ಆಡಿದ್ದೇನೋ ಗೊತ್ತಿಲ್ಲ. ಈ ರೀತಿಯ ಪ್ರೀತಿಯನ್ನು ನಾನು ಕಂಡಿರಲಿಲ್ಲ" ಎಂದು ಮಗಳ ಬಗ್ಗೆ ಬರೆದುಕೊಂಡಿದ್ದರು.

  English summary
  Shruti Hariharan and her husband have named their daughter Janaki. The entire sruthi family was involved in the naming ceremony of Shruti Hariharan's daughter

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X