For Quick Alerts
  ALLOW NOTIFICATIONS  
  For Daily Alerts

  ಬಾಳ ಸಂಗಾತಿ ಜೊತೆಯಲ್ಲಿ ತೆರೆ ಹಂಚಿಕೊಂಡ ಶ್ರುತಿ ಹರಿಹರನ್

  By Pavithra
  |

  ಕನ್ನಡ ನಟಿ ಶ್ರುತಿ ಹರಿಹರನ್ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿ ಆಗಿರುವ ನಟಿ. ಅಭಿನಯದ ಮೂಲಕವೇ ತಮ್ಮ ಸ್ಥಾನವನ್ನು ಚಿತ್ರರಂಗದಲ್ಲಿ ಗಟ್ಟಿ ಮಾಡಿಕೊಂಡ ಕಲಾವಿದೆ. ಕಮರ್ಷಿಯಲ್, ಆರ್ಟ್, ಬ್ರಿಡ್ಜ್ ಹೀಗೆ ಯಾವುದೇ ವ್ಯತ್ಯಾಸವಿಲ್ಲದೆ ಪ್ರತಿ ಚಿತ್ರಕ್ಕೂ ತಕ್ಕನಾದ ತಯಾರಿ ಮಾಡಿಕೊಂಡು ಅಭಿನಯ ಮಾಡುವ ನಟಿ ಶ್ರುತಿ ಹರಿಹರನ್.

  ಶ್ರುತಿ ಹರಿಹರನ್ ಇದೇ ಮೊದಲ ಬಾರಿಗೆ ತಮ್ಮ ಬಾಳ ಸಂಗಾತಿ ಜೊತೆಯಲ್ಲಿ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳಲಿದ್ದಾರೆ. ಹೌದು ಶ್ರುತಿ ಮದುವೆ ಆಗುವ ಹುಡುಗನ ಜೊತೆ ವಿಡಿಯೋ ಸಾಂಗ್ ನಲ್ಲಿ ಅಭಿನಯ ಮಾಡಿದ್ದಾರೆ.

  ಕಳೆದ ಮೂರ್ನಾಲ್ಕು ತಿಂಗಳ ಹಿಂದೆಯಷ್ಟೇ ಶ್ರುತಿ ಹರಿಹರನ್ ತಾವು ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ್ದರು. ಈಗ ಸದ್ದಿಲ್ಲದೆ ಇಬ್ಬರು ವಿಡಿಯೋ ಸಾಂಗ್ ಒಂದರ ಚಿತ್ರೀಕರಣವನ್ನು ಮುಗಿಸಿದ್ದಾರೆ. ಹಾಗಾದರೆ ಶ್ರುತಿ ಹರಿಹರನ್ ಮತ್ತು ತಮ್ಮ ಭಾವಿ ಪತಿ ಅಭಿನಯ ಮಾಡಿರುವ ವಿಡಿಯೋ ಸಾಂಗ್ ಯಾವುದು? ಯಾವಾಗ ಬಿಡುಗಡೆ ಆಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

  ಭಾವಿ ಪತಿಯ ಜೊತೆಯಲ್ಲಿ ಶ್ರುತಿ ಹರಿಹರನ್

  ಭಾವಿ ಪತಿಯ ಜೊತೆಯಲ್ಲಿ ಶ್ರುತಿ ಹರಿಹರನ್

  ಕನ್ನಡ ನಟಿ ಶ್ರುತಿ ಹರಿಹರನ್ ತಮ್ಮ ಭಾವಿ ರಾಮ್ ಕುಮಾರ್ ಜೊತೆಯಲ್ಲಿ ಮೊದಲ ಬಾರಿಗೆ ಅಭಿನಯ ಮಾಡಿದ್ದಾರೆ. 'ಪ್ರೇಮ' ಎಂಬ ವಿಡಿಯೋ ಹಾಡಿನಲ್ಲಿ ಇಬ್ಬರು ಅಭಿನಯ ಮಾಡಿದ್ದು ಇತ್ತೀಚಿಗಷ್ಟೆ ವಿಡಿಯೋ ಸಾಂಗ್ ಅನ್ನು ಚಿತ್ರೀಕರಣ ಮಾಡಲಾಗಿದೆ.

  ಬಿಡುಗಡೆಗೆ ತಯಾರಾಗಿರುವ ವಿಡಿಯೋ ಸಾಂಗ್

  ಬಿಡುಗಡೆಗೆ ತಯಾರಾಗಿರುವ ವಿಡಿಯೋ ಸಾಂಗ್

  ಚೆನೈ ನ ಸುತ್ತಾ ಮುತ್ತ 'ಪ್ರೇಮ' ವಿಡಿಯೋ ಸಾಂಗ್ ಚಿತ್ರೀಕರಣ ಮಾಡಿದ್ದು ತೆಲುಗು ಹಾಗೂ ಕನ್ನಡದಲ್ಲಿ ವಿಡಿಯೋ ಹಾಡು ಬಿಡುಗಡೆ ಆಗಲಿದೆ. ಸದ್ಯ ಶೂಟಿಂಗ್ ಮುಗಿಸಿರುವ ತಂಡ ಸೆಪ್ಟೆಂಬರ್ ನಲ್ಲಿ ಹಾಡು ಬಿಡುಗಡೆ ಆಗಲಿದೆ.

   'ನೀನೆ' ವಿಡಿಯೋ ಸಾಂಗ್ ಮಾಡಿದ ಟೀಂ

  'ನೀನೆ' ವಿಡಿಯೋ ಸಾಂಗ್ ಮಾಡಿದ ಟೀಂ

  ಸಂಗೀತ ಕ್ಷೇತ್ರದಲ್ಲಿ ಬಹಳಷ್ಟು ಫೇಮಸ್ ಆಗಿದ್ದ 'ನೀನೇ' ಮ್ಯೂಸಿಕ್ ವಿಡಿಯೋ ಆಲ್ಬಂ ಮಾಡಿದ್ದ ತಂಡವೇ 'ಪ್ರೇಮ' ವಿಡಿಯೋ ಹಾಡನ್ನು ತಯಾರು ಮಾಡಿದೆ. ಗೊಮ್ಮಟೇಶ್ ಹಾಡಿನ ನಿರ್ದೇಶನ ಮಾಡಿದ್ದಾರೆ. ಯಾಮಿನಿ ಯಾಗಮೂರ್ತಿ ಹಾಡಿಗೆ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಫಾನೀ ಕಲ್ಯಾಣ್ ಸಂಗೀತ ನಿರ್ದೇಶನ ಮಾಡಿದ್ದಾರೆ.

  ಅಂತರಾಷ್ಟ್ರೀಯ ನೃತ್ಯ ನಿರ್ದೇಶಕ

  ಅಂತರಾಷ್ಟ್ರೀಯ ನೃತ್ಯ ನಿರ್ದೇಶಕ

  ಶ್ರುತಿ ಹರಿಹರನ್ ಮದುವೆ ಆಗುತ್ತಿರುವ ಹುಡುಗ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ನೃತ್ಯ ನಿರ್ದೇಶಕ. ಚಿತ್ರರಂಗದವರ ಜೊತೆಯೂ ಉತ್ತಮ ಬಾಂದವ್ಯ ಬೆಳೆಸಿಕೊಂಡಿರುವ ರಾಮ್ ಕುಮಾರ್ ಇದೇ ಮೊದಲ ಬಾರಿಗೆ ತಮ್ಮ ಪ್ರೇಯಸಿ ಜೊತೆ ವಿಡಿಯೋ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Kannada actress Shruti Hariharan and Ram Kumar have appeared together in the video song. Two acted in the video song Prema.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X