Just In
Don't Miss!
- News
ಸಮುದ್ರದಲ್ಲಿ 12 ಕಿ.ಮೀ ಒಬ್ಬಂಟಿಯಾಗಿ ಕಯಾಕ್ ಮಾಡಿ ಸಾಹಸ ಮೆರೆದ ಪತ್ರಕರ್ತ!
- Sports
ಜೋ ರೂಟ್ ದ್ವಿಶತಕ, ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ಗೆ 7 ವಿಕೆಟ್ ಗೆಲುವು
- Education
KSMHA Recruitment 2021: 15 ಅಧ್ಯಕ್ಷರು ಮತ್ತು ಸದಸ್ಯರು ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಬಂಜೆತನಕ್ಕೆ ಕಾರಣವಾಗುವ ಥೈರಾಯ್ಡ್ ಲಕ್ಷಣಗಳು
- Automobiles
25 ಪೈಸೆ ಹೆಚ್ಚಳದೊಂದಿಗೆ ಸಾರ್ವಕಾಲಿಕ ಏರಿಕೆ ಕಂಡ ಪೆಟ್ರೋಲ್ ಬೆಲೆ
- Finance
ಮೈಂಡ್ ಟ್ರೀ ಕಂಪೆನಿ ನಿವ್ವಳ ಲಾಭ 66% ಹೆಚ್ಚಳ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಪ್ರೀಮಿಯರ್ ಪದ್ಮಿನಿ' ಕಥೆ ಕದ್ದ ಆರೋಪ ನಿರಾಕರಿಸಿದ ನಿರ್ಮಾಪಕಿ ಶ್ರುತಿ ನಾಯ್ಡು
ನವರಸನಾಯಕ ಜಗ್ಗೇಶ್ ಅಭಿನಯದ 'ಪ್ರೀಮಿಯರ್ ಪದ್ಮಿನಿ' ಸಿನಿಮಾದ ಕತೆ ಕದ್ದಿದ್ದಾರೆ ಎನ್ನುವ ಆರೋಪ ನಿರ್ದೇಶಕ ರಮೇಶ್ ಇಂದಿರ ಅವರ ವಿರುದ್ಧ ಕೇಳಿ ಬರುತ್ತಿದೆ. ಬರಹಗಾರ ವಸುಧೇಂದ್ರ ಅವರ 'ವರ್ಣಮಯ' ಪುಸ್ತಕದ ನಂಜುಂಡಿ ಎನ್ನುವ ಪ್ರಬಂಧದಲ್ಲಿ ಬರುವ ನಂಜುಂಡಿ ಪಾತ್ರವನ್ನು ಯಥಾವತ್ತಾಗಿ ಬಳಿಸಿಕೊಂಡಿದ್ದಾರೆ ಎಂದು ವಸುಧೇಂದ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ನಂಜುಂಡಿ ಪಾತ್ರವನ್ನು ಚಿತ್ರದಲ್ಲಿ ಬಳಸಿಕೊಳ್ಳುವ ಬಗ್ಗೆ ಮೊದಲು ನಿರ್ದೇಶಕರು ಭೇಟಿಯಾಗಿ ಮಾತನಾಡಿದ್ರಂತೆ. ಅದಕ್ಕೆ ಸಂಭಾವನೆಯನ್ನೂ ಕೊಡುವುದಾಗಿ ಹೇಳಿದ್ರಂತೆ. ನಂತರ ಮಾತನಾಡಿ ಹೋದವರು ಮತ್ತೆ ವಾಪಾಸ್ ಬಂದಿಲ್ಲ. ಆದ್ರೆ ಅನುಮತಿ ಇಲ್ಲದೆ ಚಿತ್ರದಲ್ಲಿ ನಂಜುಂಡಿ ಪಾತ್ರ ಬಳಕೆಯಾಗಿದ್ದು ಬೇಸರಕ್ಕೆ ಕಾರಣವಾಗಿದೆ ಎಂದು ವಸುಧೇಂದ್ರ, ರಮೇಶ್ ವಿರುದ್ಧ ಬೇಸರ ಹೊರಹಾಕಿದ್ದಾರೆ.
ಕಥೆ ಕದ್ದ ಆರೋಪದಲ್ಲಿ 'ಪ್ರೀಮಿಯರ್ ಪದ್ಮಿನಿ': ಬರಹಗಾರ ವಸುಧೇಂದ್ರ ಆರೋಪ
ಆದ್ರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ಮಾಪಕಿ ಶ್ರುತಿ ನಾಯ್ಡು ರಮೇಶ್ ಇಂದಿರ ಅವರ ವಿರುದ್ಧ ಕೇಳಿ ಬರುತ್ತಿರುವ ಆರೋಪವನ್ನು ತಳ್ಳಿ ಹಾಕಿದ್ದಾರೆ. ಸಿನಿಮಾ ಸೋತಿದ್ದರೆ ಯಾರು ಮಾತನಾಡುತ್ತಿರಲಿಲ್ಲ ಆದ್ರೀಗ ಸಕ್ಸಸ್ ಆಗಿದ್ದಕ್ಕೆ ವಿರೋಧಗಳು ಕೇಳಿ ಬರುತ್ತಿದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ..

ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿದೆ 'ಪ್ರೀಮಿಯರ್ ಪದ್ಮಿನಿ'
"ಸ್ಯಾಂಡಲ್ ವುಡ್ ನಲ್ಲಿ 'ಪ್ರೀಮಿಯರ್ ಪದ್ಮಿನಿ' ಸಿನಿಮಾ ಇಂದು ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿದೆ. ಆದ್ರೆ ದುರದೃಷ್ಟವಶಾತ್ ಅನಾವಶ್ಯಕ ವಿವಾದಗಳನ್ನು ಎದುರಿಸುವಂತಾಗಿದೆ. ಮೊದಲು ಅದನ್ನು ತಮಿಳು ಸಿನಿಮಾ ರೀಮೇಕ್ ಅಂದರು, ಈಗ ಹೊಸ ಡ್ರಾಮ. ಶ್ರೀಯುತ ವಸುಧೇಂದ್ರ ಅಂತ ಒಬ್ಬರು ಕನ್ನಡದ ಬರಹಗಾರರು ಇದ್ದಾರೆ, ಅವರ ಒಂದು ಪ್ರಬಂಧವನ್ನು ನಾವು 'ಪ್ರೀಮಿಯರ್ ಪದ್ಮಿನಿ' ಚಿತ್ರ ಮಾಡಿದ್ದೀವಿ ಅಂತ ಹೊಸ ಆರೋಪ ಕೇಳಿ ಬರುತ್ತಿದೆ"

ಪ್ರಬಂಧದಿಂದ ಮೂರು ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ
"ನಿರ್ದೇಶಕ ರಮೇಶ್ ಇಂದಿರ ಅನೇಕ ನಿರ್ದೇಶಕರಿಂದ ಸ್ಫೂರ್ತಿ ಪಡೆದಿದ್ದಾರೆ. ಅವರು ಅನೇಕ ಪುಸ್ತಕಗಳನ್ನು, ಆರ್ಟಿಕಲ್ಸ್, ಪೇಪರ್ ಓದುತ್ತಾರೆ. ಸಿನಿಮಾಗಳನ್ನು ನೋಡುತ್ತಾರೆ. ಚಿತ್ರದಲ್ಲಿ 3 ದೃಶ್ಯಗಳು ವಸುಧೇಂದ್ರ ಅವರ ಪ್ರಬಂಧದಿಂದ ಬಳಸಿಕೊಳ್ಳಲಾಗಿದೆ. ಆ ದೃಶ್ಯಗಳು ಚಿತ್ರದಲ್ಲಿ ಚಾಲಕ ಮತ್ತು ಮಾಲಿಕನ ನಡುವೆ ಕೇವಲ ಕೆಲವೆ ನಿಮಿಷಗಳಲ್ಲಿ ಬಂದು ಹೋಗುತ್ತೆ ಅಷ್ಟೆ"
ಪ್ರೀಮಿಯರ್ ಕ್ಲಾಸ್ ನಲ್ಲಿ ಪದ್ಮಿನಿಯೊಂದಿಗೆ ಸುಖಕರವಾದ ಪ್ರಯಾಣ

ನಮ್ಮದು ಪ್ರತಿಷ್ಟಿತ ನಿರ್ಮಾಣ ಸಂಸ್ಥೆ
"ನಮ್ಮದು ಪ್ರತಿಷ್ಠಿತ ನಿರ್ಮಾಣ ಸಂಸ್ಥೆ. ನಾವು ಅವರನ್ನು ಸಂಪರ್ಕ ಮಾಡಿದ್ದೇವೆ. ಚಿತ್ರದಲ್ಲಿ ಅವರ ಪ್ರಬಂಧದ 3 ದೃಶ್ಯಗಳನ್ನು ಬಳಸಿಕೊಂಡಿದಕ್ಕೆ ಅವರಿಗೆ ಸಂಭಾವನೆ ಕೊಡುವುದಾಗಿ ಹೇಳಿದ್ದೇವೆ. ಆದ್ರೀಗ ನಿಮ್ಮ ಸಿನಿಮಾ ಸಂಪೂರ್ಣವಾಗಿ ನನ್ನ ಪ್ರಬಂಧವನ್ನು ಆಧರಿಸಿದೆ. ಆದ್ರೆ ಒಂದು ಲಕ್ಷ ವಾಪತಿಸುವುದು ಬೇಡ ಎಂದು ಹೀಗ್ಯಾಕೆ ಹೀಗೆ ಹೇಳುತ್ತಿದ್ದಾರೆ"
'ಪ್ರೀಮಿಯರ್ ಪದ್ಮಿನಿ' ಮೆಚ್ಚಿದ ಸುದೀಪ್: ಸಣ್ಣ ಪದದಲ್ಲಿ ಧನ್ಯವಾದ ಹೇಳಿದ ಜಗ್ಗೇಶ್

ಆರೋಪ ತಳ್ಳಿ ಹಾಕಿದ ಶ್ರುತಿ ನಾಯ್ಡು
"ನಮ್ಮ ಸಿನಿಮಾ ಅವರ ಪ್ರಬಂಧವನ್ನು ನಕಲು ಮಾಡಿಲ್ಲ. ಆದ್ರೆ ನಮ್ಮ ಸಿನಿಮಾಗೆ ಅವರ ಪ್ರಬಂಧದಿಂದ ಮೂರು ದೃಶ್ಯಗಳನ್ನು ಬಳಸಿಕೊಂಡಿದ್ದಕ್ಕೆ ಅವರಿಗೆ ಧನ್ಯವಾದ ಹೇಳುತ್ತೇವೆ. ಅಲ್ಲದೆ ದಯವಿಟ್ಟು ಎಲ್ಲರು ಅವರ ಪ್ರಬಂಧ ಓದಿ ಮತ್ತು ನಮ್ಮ ಸಿನಿಮಾವನ್ನು ನೋಡಿ ಕೇವಲ ಮೂರು ದೃಶ್ಯಗಳನ್ನು ಬಿಟ್ಟರೆ ಬೇರೆಯಾವುದಾದರು ಬಳಸಿಕೊಂಡರೆ ನಮಗೆ ತಿಳಿಸಿ. ಈ ಚಿತ್ರ ಸೋತಿದ್ದರೆ ಯಾರು ಮಾತನಾಡುತ್ತಿರಲ್ಲ. ಆದ್ರೀಗ ಚಿತ್ರ ಸಕ್ಸಸ್ ಆಗಿದೆ ಹಾಗಾಗಿ ಆರೋಪಿಸುತ್ತಿದ್ದಾರೆ. ಏನೆ ಆಗ್ಲಿ ನಾನು ಅವರ ಪ್ರಬಂಧವನ್ನು ಪ್ರಚಾರ ಮಾಡುತ್ತಿದ್ದೇನೆ"