ಸ್ಟಾರ್ ನಿರ್ದೇಶಕನ ಚಿತ್ರಕ್ಕೆ 'ಬಿಗ್ ಬಾಸ್' ಶ್ರುತಿ ಪ್ರಕಾಶ್ ನಾಯಕಿ.!
ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯಲ್ಲಿ ಸ್ಪರ್ಧಿಸಿದ್ದ ಶ್ರುತಿ ಪ್ರಕಾಶ್ ಗೆ ಈ ಕಾರ್ಯಕ್ರಮ ಮುಗಿದ ಮೇಲೆ ಸಿನಿಮಾ ಮಾಡುವ ಅವಕಾಶ ಸಿಗುತ್ತೆ ಎಂಬ ಮಾತಿಗಳು ಕೇಳಿ ಬರುತ್ತಿತ್ತು. ಅದರಂತೆ ಈಗ ಶ್ರುತಿಗೆ ಸ್ಯಾಂಡಲ್ ವುಡ್ ನಿಂದ ಆಫರ್ ಗಳು ಬರ್ತಿದೆ.
ಇದುವರೆಗೂ ಯಾವ ಚಿತ್ರವನ್ನ ಒಪ್ಪಿಕೊಳ್ಳದ ಶ್ರುತಿ ಪ್ರಕಾಶ್, ಈಗ ಕನ್ನಡದ ಸ್ಟಾರ್ ನಿರ್ದೇಶಕನ ಚಿತ್ರಕ್ಕೆ ನಾಯಕಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೆಳಗಾವಿ ಮೂಲದ ಶ್ರುತಿ ಪ್ರಕಾಶ್ ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಗಾಯಕಿಯಾಗಿರುವ ಶ್ರುತಿ, ಅಭಿನಯದಲ್ಲೂ ಹೆಚ್ಚು ಆಸಕ್ತಿ ಹೊಂದಿದ್ದಾರೆ. ನೋಡಲು ಆಕರ್ಷಕವಾಗಿರುವ ಈಕೆ ಅದ್ಭುತವಾಗಿ ಡ್ಯಾನ್ಸ್ ಮಾಡಬಲ್ಲರು. ಹಾಗಿದ್ರೆ, ಶ್ರುತಿ ಪ್ರಕಾಶ್ ನಟಿಸಲಿರುವ ಆ ಚಿತ್ರ ಯಾವುದು? ಆ ಡೈರೆಕ್ಟರ್ ಯಾರು? ಮುಂದೆ ಓದಿ.....

ಎಸ್ ನಾರಾಯಣ್ ಚಿತ್ರಕ್ಕೆ ಶ್ರುತಿ ಹೆಜ್ಜೆ.!
ಎಲ್ಲ ಅಂದುಕೊಂಡಂತೆ ಆದ್ರೆ, ಕಲಾ ಸಾಮ್ರಾಟ್ ಎಸ್.ನಾರಾಯಣ್ ನಿರ್ದೇಶನ ಮಾಡಲಿರುವ ಮುಂದಿನ ಚಿತ್ರಕ್ಕೆ ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ನಾಯಕಿಯಾಗಲಿದ್ದಾರೆ.

ಮಾತುಕತೆ ನಡೆಯುತ್ತಿದೆ
ಬಿಗ್ ಬಾಸ್ ನಿಂದ ಹೊರಬಂದ ನಂತರ ಶ್ರುತಿ ಪ್ರಕಾಶ್ ಗೆ ಹೆಚ್ಚು ಅವಕಾಶ ಬರ್ತಿದೆ ಎನ್ನಲಾಗಿದೆ. ಈ ಮಧ್ಯೆ ಎಸ್ ನಾರಾಯಣ್ ಚಿತ್ರವೂ ಒಂದು. ಕಲಾ ಸಮ್ರಾಟ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ನಾಯಕಿ ಆಗಿ ಅಭಿನಯಿಸುವುದರ ಬಗ್ಗೆ ಮಾತುಕತೆ ಸಾಗಿದೆ. ಅಂತಿಮ ನಿರ್ಧಾರ ಹೊರಬೀಳಬೇಕಿದೆ.

ಪಂಕಜ್ ನಾಯಕ
ಎಸ್ ನಾರಾಯಣ್ ನಿರ್ದೇಶನ ಮಾಡಲಿರುವ ಹೊಸ ಚಿತ್ರಕ್ಕೆ ತಮ್ಮ ಮಗ ಪಂಕಜ್ ನಾಯಕ. ಈಗಾಗಲೇ ಸ್ಕ್ರಿಪ್ಟ್ ಕೆಲಸ ಮುಗಿಸಿದ್ದು, ಸಿನಿಮಾ ಆರಂಭ ಮಾಡುವ ತಯಾರಿಯಲ್ಲಿದ್ದಾರೆ.

ಚಂದನ್ ಶೆಟ್ಟಿ ಸಂಗೀತ
ಈ ಚಿತ್ರದ ಇನ್ನೊಂದು ವಿಶೇಷ ಅಂದ್ರೆ, ಬಿಗ್ ಬಾಸ್ ಕನ್ನಡ 5 ವಿನ್ನರ್ ಚಂದನ್ ಶೆಟ್ಟಿ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರಂತೆ. ಒಟ್ನಲ್ಲಿ, ಹಲವು ವಿಶೇಷತೆಗಳೊಂದಿಗೆ ಆರಂಭವಾಗಲಿರುವ ಈ ಚಿತ್ರದ ಬಗ್ಗೆ ಅಧಿಕೃತವಾಗಿ ಬಹಿರಂಗವಾಗಬೇಕಿದೆ ಅಷ್ಟೆ.


Click it and Unblock the Notifications











