»   » ಬಾಲಿವುಡ್ ಸಿನಿಮಾದಲ್ಲಿ ಶೃತಿ ಪ್ರಕಾಶ್ ಅಭಿನಯ

ಬಾಲಿವುಡ್ ಸಿನಿಮಾದಲ್ಲಿ ಶೃತಿ ಪ್ರಕಾಶ್ ಅಭಿನಯ

Posted By:
Subscribe to Filmibeat Kannada
ಬಾಲಿವುಡ್ ಸಿನಿಮಾದಲ್ಲಿ ಶೃತಿ ಪ್ರಕಾಶ್ ಅಭಿನಯ | Filmibeat Kannada

ಬಿಗ್ ಬಾಸ್ ಕನ್ನಡದಲ್ಲಿ ಸ್ಪರ್ಧಿ ಆಗಿದ್ದ ಗಾಯಕಿ ಶೃತಿ ಪ್ರಕಾಶ್ ರಿಯಾಲಿಟಿ ಶೋ ಮುಗಿಸಿ ಬಂದ ನಂತರ ನಾಯಕಿ ಆಗಬೇಕು ಎನ್ನುವ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಹೊಸಬರೆಲ್ಲರೂ ಸೇರಿ ಮಾಡುತ್ತಿರುವ ಲಂಡನ್ ನಲ್ಲಿ ಲಂಬೋದರ ಚಿತ್ರದಲ್ಲಿ ಹೀರೋಯಿನ್ ಆಗಿ ಆಕ್ಟ್ ಮಾಡಲು ಶೃತಿ ಅವರಿಗೆ ಅವಕಾಶ ಸಿಕ್ಕಿದೆ.

ಸ್ಯಾಂಡಲ್ ವುಡ್ ನಲ್ಲಿ ಮೊದಲ ಚಿತ್ರದಲ್ಲಿ ಅಭಿನಯ ಶುರು ಮಾಡುವ ಮುಂಚೆಯೇ ಬಾಲಿವುಡ್ ನಲ್ಲಿಯೂ ನಾಯಕಿಯಾಗಿ ಖಾತೆ ತೆರೆದಿದ್ದಾರೆ ನಟಿ ಹಾಗೂ ಗಾಯಕಿ ಶೃತಿ ಪ್ರಕಾಶ್. ಹಿಂದಿಯ ಸಾಕಷ್ಟು ವಿಡಿಯೋ ಆಲ್ಬಂ ನಲ್ಲಿ ಹಾಡುವುದರ ಜೊತೆಗೆ ಅಭಿನಯವನ್ನ ಮಾಡಿದ ಶೃತಿ ಮೊದಲ ಬಾರಿಗೆ ಬೆಳ್ಳೆ ತೆರೆಯಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಶ್ರುತಿ ಪ್ರಕಾಶ್ ದನಿಯಲ್ಲಿ ಮುಂಜಾನೆ ಮಂಜಲ್ಲಿ.., ಸುದೀಪ್ ಗೆ ಖುಷಿಯೋ ಖುಷಿ.!

ತಮ್ಮ ಬಾಲಿವುಡ್ ಸಿನಿಮಾದ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಶೃತಿ ಕನ್ನಡದ ಮೊದಲ ಚಿತ್ರ ಪ್ರಾರಂಭವಾಗುವ ಸಮಯದಲ್ಲೇ ಬಾಲಿವುಡ್ ಚಿತ್ರ ಕುಡ ಸೆಟ್ಟೇರುತ್ತಿದೆ ಎಂದು ತಿಳಿಸಿದ್ದಾರೆ. ವಿಶೇಷ ಅಂದರೆ ಶೃತಿ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Shruti Prakash is acting in a Bollywood film

ಶೃತಿ ಅಭಿನಯಿಸುತ್ತಿರುವ ಬಾಲಿವುಡ್ ಸಿನಿಮಾಗೆ 'ಗುಮ್ನಾಮ್' ಎಂದು ಹೆಸರಿಟ್ಟಿದ್ದು ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಸದ್ಯ ಶೃತಿ ಪ್ರಕಾಶ್ ಅಭಿನಯದ ಕನ್ನಡ ಚಿತ್ರದ ಫೋಟೋ ಶೂಟ್ ಇತ್ತೀಚಿಗಷ್ಟೇ ನಡೆದಿದೆ. 'ಲಂಡನ್ ನಲ್ಲಿ ಲಂಬೋದರ' ಚಿತ್ರದಲ್ಲಿ ಅಭಿನಯಿಸುವುದರ ಜೊತೆಗೆ ಒಂದು ಹಾಡನ್ನು ಹಾಡುತ್ತಿದ್ದಾರೆ ಶೃತಿ.

English summary
Kannada Big Boss contestant Shruti Prakash is acting in a Bollywood film, Shruti Prakash wrote on Twitter about this .Currently Shruthi plays a heroine in London nalli Lambodara kannada movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada