ಮೊದಲ ಹೆಜ್ಜೆಯಲ್ಲೇ ಭರವಸೆ ಮೂಡಿಸಿದ ಸ್ಟಾರ್ ನಟಿಯ ಪುತ್ರಿ!

By Pavithra

ಸ್ಟಾರ್ ಗಳ ಮಕ್ಕಳು ಕಲಾವಿದರೇ ಆಗಬೇಕು ಎನ್ನುವ ಯಾವುದೇ ರೂಲ್ಸ್ ಇಲ್ಲ. ಹಾಗಂತ ಚಿತ್ರರಂಗಕ್ಕೆ ಬರಬಾರದೂ ಅಂತಾನೂ ಇಲ್ಲ. ಈಗಿನ ಮಕ್ಕಳು ಎಲ್ಲಾ ವಿಚಾರದಲ್ಲಿಯೂ ಸ್ಪೀಡ್. ಸದ್ಯ ಕನ್ನಡ ಸಿನಿಮಾರಂಗದಲ್ಲಿ ಸುಮಾರು ದಶಕಗಳು ಆಳಿದ ಸ್ಟಾರ್ ನಟಿಯ ಮಗಳು ಸೋಷಿಯಲ್ ನೆಟ್ವರ್ಕ್ ನಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ.

ತಾಯಿ ಬಣ್ಣದ ಲೋಕದಲ್ಲಿ ಪ್ರಖ್ಯಾತಿಗಳಿಸಿದ್ರು ಈಗ ಮಗಳು ಸಂಗೀತ ಲೋಕದಲ್ಲಿ ಧೂಳೆಬ್ಬಿಸುವ ಎಲ್ಲಾ ಸೂಚನೆ ಕೊಡುತ್ತಿದ್ದಾರೆ. ಈಕೆ ಸಣ್ಣದೊಂದು ಹಾಡನ್ನು ಹಾಡಿ ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ರೆ ಸಾಕು ಅಭಿಮಾನಿಗಳಿಂದ ಮತ್ತೊಂದು ಹಾಡಿಗೆ ಬೇಡಿಕೆ ಬರುತ್ತೆ. ಅಷ್ಟರಮಟ್ಟಿಗೆ ಈಕೆ ಫೇಮಸ್ ಆಗ್ತಿದ್ದಾರೆ.

ಇಷ್ಟೆಲ್ಲಾ ಹೇಳಿದ ನಂತರ ಈಕೆ ಯಾರು? ಯಾವ ನಟಿಯ ಮಗಳು? ಆಕೆಯ ಕಂಠದಲ್ಲಿರುವ ಜಾದು ಎಂಥದ್ದು ಇವೆಲ್ಲವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಫಿಲ್ಮಿಬೀಟ್ ಮೂಲಕ ನಿಮಗೆ ತಲುಪಿಸುತ್ತೆವೆ ಮುಂದೆ ಓದಿ..

ಗೌರಿ ಕಂಚಿನ ಕಂಠಕ್ಕೆ ಮರುಳಾದವರೇ ಹೆಚ್ಚು

ಗೌರಿ ಕಂಚಿನ ಕಂಠಕ್ಕೆ ಮರುಳಾದವರೇ ಹೆಚ್ಚು

ಗೌರಿ.. ಈ ಹೆಸರಿಗೂ ಸಿನಿಮಾರಂಗಕ್ಕೂ ಏನೋ ಸಂಬಂಧವಿದ್ಯಾ ಎನ್ನುವ ಸುಳಿವು ಹೆಸರು ಕೇಳಿದ ತಕ್ಷಣವೇ ಸಿಗುತ್ತದೆ. ಈಕೆಯನ್ನ ನೀವು ಎರಡು ಮೂರು ಬಾರಿ ಆಕೆಯ ಅಮ್ಮನ ಜೊತೆಯಲ್ಲಿ ನೋಡಿಯೇ ನೋಡಿರುತ್ತೀರಾ. ಈಕೆ ಮತ್ಯಾರು ಅಲ್ಲ ಹಲವಾರು ದಶಕಗಳು ಚಿತ್ರರಂಗದಲ್ಲಿ ನಾಯಕಿಯಾಗಿ ಅಭಿಮಾನಿಗಳನ್ನ ರಂಜಿಸಿದ ನಟಿ ಶ್ರುತಿ ಅವರ ಪುತ್ರಿ.

ಸಾಮಾಜಿಕಾ ಜಾಲತಾಣದಲ್ಲಿ ಗೌರಿ ಗಾನ

ನಟಿ ಶ್ರುತಿ ಅವರ ಪುತ್ರಿ ಗೌರಿ ಇಂಪಾಗಿ ಹಾಡುತ್ತಾರೆ. ಈಕೆಯ ಧ್ವನಿಯನ್ನು ಕೇಳಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಹವ್ಯಾಸಕ್ಕಾಗಿ ಹಾಡಿ ಇನ್‌ಸ್ಟಾಗ್ರಾಂ ನಲ್ಲಿ ಹಾಕಿರುವ ವಿಡಿಯೋಗಳು ಸಾವಿರಗಟ್ಟಲೆ ಲೈಕ್ ಹಾಗೂ ಕಮೆಂಟ್ ಗಳನ್ನು ಪಡೆದುಕೊಂಡಿವೆ.

ಸಂಗೀತದಲ್ಲಿದೆ ಆಸಕ್ತಿ

ಸದ್ಯ ಗೌರಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದು ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಚಿಕ್ಕ ಮಗುವಿದ್ದಾಗ ಒಂದು ತಿಂಗಳಷ್ಟೇ ಸಂಗೀತ ಅಭ್ಯಾಸ ಮಾಡಿದ್ದ ಗೌರಿ ಅನಂತರ ಓದಿನತ್ತಾ ಹೆಚ್ಚು ಗಮನ ಹರಿಸಿದ್ರು. ಆದರೆ ಹವ್ಯಾಸಕ್ಕಾಗಿ ಹಾಡುವುದನ್ನು ರೂಡಿಸಿಕೊಂಡಿದ್ದರು.

ಮಗಳ ಗಾಯನಕ್ಕೆ ಅಮ್ಮನ ಶೃತಿ

ಮಗಳ ಗಾಯನಕ್ಕೆ ಅಮ್ಮನ ಶೃತಿ

ಸಂಗೀತ ಚೆನ್ನಾಗಿ ಬರಬೇಕು ಅಂದರೆ ಅಲ್ಲಿ ಶೃತಿ ಇರಲೇಬೇಕು ಅದರಂತೆಯೇ ಗೌರಿ ಸಂಗೀತ ಆಸಕ್ತಿಗೆ ತಾಯಿ ಶೃತಿಯ ಬೆಂಬೆಲವಿದೆ. ಮಗಳ ಧ್ವನಿಯನ್ನು ಕೇಳಿ ಖುಷಿ ಪಟ್ಟಿರುವ ಶೃತಿ ಅವರು ಮುಂದಿನ ದಿನಗಳಲ್ಲಿ ಮಗಳನ್ನ ಗಾಯಕಿ ಆಗಿ ನೋಡುವ ಆಸೆ ಇಟ್ಟುಕೊಂಡಿದ್ದಾರೆ.

ಭಾಷೆಯ ಹಂಗಿಲ್ಲದೆ ಹಾಡುವ ಗಾಯಕಿ

ಭಾಷೆಯ ಹಂಗಿಲ್ಲದೆ ಹಾಡುವ ಗಾಯಕಿ

ಗೌರಿ ನೋಡಲು ಅಮ್ಮನಂತೆಯೇ ನೋಡಲು ಮುದ್ದಾಗಿರುವ ಹುಡುಗಿ. ಅಷ್ಟೇ ಅಲ್ಲದೆ ಕನ್ನಡ ಮಾತ್ರವಲ್ಲದೆ ಯಾವುದೇ ಭಾಷೆಯ ಹಾಡು ಆದರೂ ಯಾವುದೇ ಹಂಗಿಲ್ಲದೆ ಹಾಡುತ್ತಾರೆ. ಕನ್ನಡ, ಹಿಂದಿ, ತಮಿಳು, ತೆಲುಗು ಸೇರಿದಂತೆ ಮರಾಠಿ ಹಾಡನ್ನು ಹಾಡುತ್ತಾರೆ.

More from Filmibeat

English summary
Kannada actress Shruti's daughter singing video is viral in Instragram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X